AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್ ನಟನ ಸಾವು ಆಕಸ್ಮಿಕವಲ್ಲ, ಯೋಜಿತ ಕೊಲೆ? ಬಯಲಾಯ್ತು ರಹಸ್ಯ

Matthew Perry: ಖ್ಯಾತ ಹಾಲಿವುಡ್ ನಟ ನಿಧನ ಹೊಂದಿ ಸುಮಾರು ಎರಡು ವರ್ಷದ ಬಳಿಕ ಸಾವಿನ ರಹಸ್ಯ ಬಯಲಾಗಿದೆ. ನಟ ಮ್ಯಾಥೀವ್ ಪೆರ್ರಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ತನಿಖೆ ಹಾಗೂ ವಿಚಾರಣೆ ಬಳಿಕ ಮ್ಯಾಥೀವ್ ಪೆರ್ರಿಯ ಸಾವಿನ ರಹಸ್ಯ ಹೊರಬಂದಿದೆ. ಆರೋಪಿಗಳಿಗೆ 40 ವರ್ಷ ಸಜೆಯ ಸಾಧ್ಯತೆ ಇದೆ.

ಸ್ಟಾರ್ ನಟನ ಸಾವು ಆಕಸ್ಮಿಕವಲ್ಲ, ಯೋಜಿತ ಕೊಲೆ? ಬಯಲಾಯ್ತು ರಹಸ್ಯ
Mathew Perry
ಮಂಜುನಾಥ ಸಿ.
|

Updated on: Jun 17, 2025 | 4:39 PM

Share

‘ಫ್ರೆಂಡ್ಸ್’ (Friends), ವೆಬ್ ಸರಣಿಗಳಲ್ಲಿ ಅತ್ಯಂತ ಜನಪ್ರಿಯ. ಈಗಲೂ ಸಹ ನೆಟ್​ಪ್ಲಿಕ್ಸ್​​ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ವೆಬ್ ಸರಣಿಗಳಲ್ಲಿ ಒಂದಾಗಿದೆ. ‘ಫ್ರೆಂಡ್ಸ್’ ನಲ್ಲಿ ನಟಿಸಿದ್ದ ಸ್ಟಾರ್ ಮ್ಯಾಥೀವ್ ಪೆರ್ರಿ ಕಳೆದ ವರ್ಷ ಅಕ್ಟೋಬರ್​ನಲ್ಲಿ ನಿಧನ ಹೊಂದಿದರು. ಪೆರ್ರಿಯ ಮೃತದೇಹ ಅವರದ್ದೇ ಮನೆಯ ಬಾತ್​ಟಬ್​​ನಲ್ಲಿ ಪತ್ತೆ ಆಗಿದೆ. ಪೆರ್ರಿ ನಿಧನ ಹೃದಯಾಘಾತದಿಂದ ಆಗಿದೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಸುಮಾರು ಎರಡು ವರ್ಷಗಳ ಬಳಿಕ ತಿಳಿದು ಬಂದಿರುವ ವಿಷಯವೆಂದರೆ ಪೆರ್ರಿ ನಿಧನ ಆಕಸ್ಮಿಕವಲ್ಲ ಬದಲಿಗೆ ಕೊಲೆ!?

ಮ್ಯಾಥೀವ್ ಪೆರ್ರಿ, 2023ರ ಅಕ್ಟೋಬರ್​​ನಲ್ಲಿ ಲಾಸ್ ಏಂಜಲ್ಸ್​​ನ ತಮ್ಮ ಮನೆಯ ಬಾತ್​ ಟಬ್​​ನಲ್ಲಿ ಪೆರ್ರಿಯ ಮೃತದೇಹ ಪತ್ತೆ ಆಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಕೆಟಮಿನ್ ಹೆಸರಿನ ಡ್ರಗ್ ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಗಿತ್ತು. ಈ ಡ್ರಗ್ ಇಂದಲೇ ಪೆರ್ರಿಗೆ ಹೃದಯಾಘಾತ ಆಗಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಐದು ಮಂದಿಯ ಮೇಲೆ ಆರೋಪ ಮಾಡಿದ್ದರು.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸೆಟಲ್ ಆಗುವ ಪ್ರಯತ್ನದಲ್ಲಿ ನಟಿ ನೋರಾ ಫತೇಹಿ

ನ್ಯಾಯಾಲಯದಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದಲೂ ವಿಚಾರಣೆ ನಡೆದಿದ್ದು, ಇದೀಗ ಮ್ಯಾಥೀವ್ ಪೆರ್ರಿಯ ವೈದ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಪೆರ್ರಿಗೆ ಉದ್ದೇಶಪೂರ್ವಕವಾಗಿ ವೈದ್ಯ ಸಾಲ್ವಡಾರ್ ಪ್ಲೆಸನಿಕಾ ಮತ್ತು ವೈದ್ಯ ಮಾರ್ಕ್ ಚಾವೆಜ್, ಕೆಟಮಿನ್ ಅನ್ನು ಹೆಚ್ಚಿಗೆ ಕೊಟ್ಟಿದ್ದರು ಎನ್ನಲಾಗಿದೆ. ಪೆರ್ರಿಯಿಂದ ಹೆಚ್ಚಿನ ಹಣ ಪಡೆಯುವ ಉದ್ದೇಶದಿಂದ ವೈದ್ಯ ಸಾಲ್ವಡಾರ್ ಪ್ಲೆಸನಿಕಾ ಮತ್ತು ಇನ್ನೂ ಕೆಲವರು ಸೇರಿಕೊಂಡು ಹೆಚ್ಚಿನ ಡೋಸ್​ನ ಕೆಟಮಿನ್ ಮಾತ್ರೆಗಳನ್ನು ಪೆರ್ರಿಗೆ ಮಾರಾಟ ಮಾಡಿದ್ದರಂತೆ. ಮಾತ್ರವಲ್ಲದೆ ಅವನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಸಹ ಹೇಳಿಕೊಟ್ಟಿದ್ದರಂತೆ.

ಪೆರ್ರಿಗೆ ಕೆಟಮಿನ್ ನೀಡುವಾಗ, ಪೆರ್ರಿಗೆ ಖಿನ್ನತೆ ಇದೆ, ಅದನ್ನು ಹೋಗಲಾಡಿಸಲು ಅವರು ಕೆಟಮಿನ್ ತೆಗೆದುಕೊಳ್ಳುತ್ತಿದ್ದಾರೆ, ಪೆರ್ರಿ ಸಿಗರೇಟು ಸೇದುವ ಅಭ್ಯಾಸ ಬಿಡುವ ಕಾರಣಕ್ಕೆ ಕೆಟಮಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವೈದ್ಯರು ನಮೂದಿಸಿದ್ದರಂತೆ. ಆ ಕಾರಣಗಳು ಸಹ ಸುಳ್ಳು ಎಂದು ವಿಚಾರಣೆಯಿಂದ ತಿಳಿದಿದೆ. ಇಬ್ಬರು ವೈದ್ಯರು ಸೇರಿ ಐದು ಜನ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಇದೀಗ ಎಲ್ಲರಿಗೂ 40 ವರ್ಷ ಜೈಲು ಶಿಕ್ಷೆ ಆಗುವ ಸಂಭವ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ