ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದ ಹಾಲಿವುಡ್ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್​’ ಸೀಕ್ವೆಲ್; ಮೊದಲ ದಿನ ಗಳಿಸಿದ್ದೆಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: May 09, 2022 | 2:25 PM

‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್​ನಿಂದ ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್​ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿಯಲ್ಲಿ 400 ಕೋಟಿ ರೂಪಾಯಿ ಕ್ಲಬ್​ ಸೇರಿದೆ.

ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದ ಹಾಲಿವುಡ್ ಸಿನಿಮಾ ‘ಡಾಕ್ಟರ್ ಸ್ಟ್ರೇಂಜ್​’ ಸೀಕ್ವೆಲ್; ಮೊದಲ ದಿನ ಗಳಿಸಿದ್ದೆಷ್ಟು?
Follow us on

ಹಾಲಿವುಡ್ (Hollywood) ಸಿನಿಮಾಗೆ ಭಾರತ ದೊಡ್ಡ ಮಾತುಕಟ್ಟೆ. ಅದರಲ್ಲೂ ಮಾರ್ವೆಲ್​ ಸಿನಿಮಾಗಳನ್ನು ಭಾರತದ ಸಿನಿಪ್ರಿಯರು ಮೆಚ್ಚಿಕೊಳ್ಳುತ್ತಾರೆ. ಈ ಚಿತ್ರಗಳು ಭಾರತದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತವೆ. ಈಗ ‘ಡಾಕ್ಟರ್​ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್​ ಆಫ್​ ಮ್ಯಾಡ್​ನೆಸ್​’ ಸಿನಿಮಾ (Doctor Strange in the Multiverse of Madness)  ತೆರೆಗೆ ಬಂದಿದೆ. ಮೊದಲ ದಿನ (ಮೇ 6) ಈ ಚಿತ್ರ  27.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ‘ಡಾಕ್ಟರ್​ ಸ್ಟ್ರೇಂಜ್’ ಸಿನಿಮಾದ ಸೀಕ್ವೆಲ್ ಇದಾಗಿದೆ.

ಈ ಮೊದಲು ತೆರೆಗೆ ಬಂದಿದ್ದ ಮಾರ್ವೆಲ್​ ಸ್ಟುಡಿಯೋಸ್​ನ ‘ಸ್ಪೈಡರ್​ ಮ್ಯಾನ್: ನೋ ವೇ ಹೋಂ’ ಸಿನಿಮಾ ಮೊದಲ ದಿನ 33 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಸಿನಿಮಾಗಿಂತ ಸುಮಾರು ಆರು ಕೋಟಿ ರೂಪಾಯಿ ಕಡಿಮೆ ಗಳಿಕೆ ಮಾಡಿದೆ. ‘ಡಾಕ್ಟರ್​ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್​ ಆಫ್​ ಮ್ಯಾಡ್​ನೆಸ್​’ ಭಾರತದ ಕಲೆಕ್ಷನ್ ಬಗ್ಗೆ ಟ್ರೇಡ್​ ಅನಲಿಸ್ಟ್ ತರಣ್ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
ಸಾಲದ ಸುಳಿಯಲ್ಲಿ ‘ಆಚಾರ್ಯ’ ವಿತರಕರು; ನಷ್ಟ ಭರಿಸಲು ಚಿರಂಜೀವಿಗೆ ಪತ್ರ ಬರೆದ ಕರ್ನಾಟಕದ ಡಿಸ್ಟ್ರಿಬ್ಯೂಟರ್
Mohan Juneja Death: ನೇತ್ರದಾನದಿಂದ ಮಾದರಿಯಾದ ಮೋಹನ್​ ಜುನೇಜ; ‘ಕೆಜಿಎಫ್​’ ನಟನಿಗೆ ‘ಹೊಂಬಾಳೆ ಫಿಲ್ಮ್ಸ್​’ ಶ್ರದ್ಧಾಂಜಲಿ
ವೈರಲ್ ಆಯ್ತು ‘ಡಾಕ್ಟರ್​ ಸ್ಟ್ರೇಂಜ್​’ ಚಿತ್ರದ ಕ್ಲಿಪ್; ಸಿನಿಮಾ ಬಗ್ಗೆ ಫ್ಯಾನ್ಸ್​ ಕಡೆಯಿಂದ ಬಂತು ಗಂಭೀರ ದೂರ
ಸಲಿಂಗಕಾಮ ಪಾತ್ರದಿಂದ ಈ ದೇಶಗಳಲ್ಲಿ ಬ್ಯಾನ್ ಆದ ‘ಡಾಕ್ಟರ್​ ಸ್ಟ್ರೇಂಜ್​’ ಸಿನಿಮಾ

ಬೆನೆಡಿಕ್ಟ್​ ಕಂಬರ್​​ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಅತಿ ಉತ್ತಮ ಓಪನಿಂಗ್ ಪಡೆದ ನಾಲ್ಕನೇ ಹಾಲಿವುಡ್​ ಸಿನಿಮಾ ಇದಾಗಿದೆ. ‘ಅವೆಂಜರ್ಸ್​: ಎಂಡ್​ಗೇಮ್​’ (53.10 ಕೋಟಿ ರೂಪಾಯಿ), ‘ಸ್ಪೈಡರ್​ ಮ್ಯಾನ್​: ನೋ ವೇ ಹೋಂ’ (32.67 ಕೋಟಿ ರೂಪಾಯಿ) ಮತ್ತು ‘ಅವೆಂಜರ್ಸ್​: ಇನ್​​ಫಿನಿಟಿ ವಾರ್’ (31.30 ಕೋಟಿ ರೂಪಾಯಿ) ಈ ಮೊದಲು ಒಳ್ಳೆಯ ಓಪನಿಂಗ್​ ಪಡೆದ ಹಾಲಿವುಡ್​ ಚಿತ್ರಗಳಾಗಿವೆ.

ಅಮೆರಿಕದಲ್ಲಿಯೂ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ಮೊದಲ ದಿನ ಈ ಸಿನಿಮಾ 277 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರಾಂತ್ಯಕ್ಕೆ ಈ ಸಿನಿಮಾ ಅಮೆರಿಕದಲ್ಲಿ 1,346 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ ಎಂದು ಟ್ರೇಡ್​ ಅನಲಿಸ್ಟ್​​ಗಳು ಊಹಿಸಿದ್ದಾರೆ. ಸ್ಯಾಮ್ ರೈಮಿ ಅವರು ‘ಡಾಕ್ಟರ್​ ಸ್ಟ್ರೇಂಜ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸ್ಪೈಡರ್ ಮ್ಯಾನ್’ ಟ್ರಿಲಜಿಯನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಿಗೆ ಇದೆ.

‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್​ನಿಂದ ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್​ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿಯಲ್ಲಿ 400 ಕೋಟಿ ರೂಪಾಯಿ ಕ್ಲಬ್​ ಸೇರಿದೆ.

 

Published On - 1:30 pm, Sat, 7 May 22