ಯಾರು, ಯಾವಾಗ ಬೇಕಾದರೂ ನನ್ನ ಬೆತ್ತಲೆ ದೇಹ ನೋಡಬಹುದು; ಹಾಲಿವುಡ್ ನಟಿಯ ಅಳಲು
2014ರಲ್ಲಿ ಅನೇಕ ಸೆಲೆಬ್ರಿಟಿಗಳ ಖಾಸಗಿ ಫೋಟೋಗಳು ಲೀಕ್ ಆಗಿದ್ದವು. ಪಾಪ್ ಸಿಂಗರ್, ನಟಿ ಸೆಲೆನಾ ಗೊಮೆಜ್ ಸೇರಿದಂತೆ ಅನೇಕರು ಹ್ಯಾಕರ್ಗಳ ಕೈಚಳಕಕ್ಕೆ ಸಿಲುಕಿದ್ದರು. ಅದರಲ್ಲಿ ಜೆನಿಫರ್ ಕೂಡ ಒಬ್ಬರು. ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ.
ಅಮೆರಿಕದ ಖ್ಯಾತ ನಟಿ ಜೆನಿಫರ್ ಲಾರೆನ್ಸ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರಿಗೆ ಈಗಿನ್ನು 31 ವರ್ಷ. 2008ರಲ್ಲಿಯೇ ಜೆನಿಫರ್ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಅವರ ಬೆತ್ತಲೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದವು. ಕೆಲ ಹ್ಯಾಕರ್ಗಳು ಈ ಕೆಲಸವನ್ನು ಮಾಡಿದ್ದರು. ಜೆನಿಫರ್ ಅವರ ವೈಯಕ್ತಿಕ ಫೋಟೋಗಳು ಲೀಕ್ ಆಗಿದ್ದು ಅವರಿಗೆ ಸಾಕಷ್ಟು ಆಘಾತ ತಂದಿದೆ. ಈ ವಿಚಾರದಲ್ಲಿ ಅವರು ತುಂಬಾನೇ ನೊಂದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾಧ್ಯಮದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ನೊಂದುಕೊಂಡೇ ಆ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
2014ರಲ್ಲಿ ಅನೇಕ ಸೆಲೆಬ್ರಿಟಿಗಳ ಖಾಸಗಿ ಫೋಟೋಗಳು ಲೀಕ್ ಆಗಿದ್ದವು. ಪಾಪ್ ಸಿಂಗರ್, ನಟಿ ಸೆಲೆನಾ ಗೊಮೆಜ್ ಸೇರಿದಂತೆ ಅನೇಕರು ಹ್ಯಾಕರ್ಗಳ ಕೈಚಳಕಕ್ಕೆ ಸಿಲುಕಿದ್ದರು. ಅದರಲ್ಲಿ ಜೆನಿಫರ್ ಕೂಡ ಒಬ್ಬರು. ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ. ‘ನನ್ನ ಒಪ್ಪಿಗೆಯಿಲ್ಲದೆ, ಯಾರು ಬೇಕಾದರೂ, ಯಾವಾಗ ಬೇಕಾದರೂ ನನ್ನ ಬೆತ್ತಲೆ ದೇಹವನ್ನು ನೋಡಬಹುದು. ಆ ಘಟನೆ ನೀಡಿದ ಆಘಾತದಿಂದ ಹೊರಬರೋಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ. ಅವರ ಬೆತ್ತಲೆ ಫೋಟೋಗಳು ಆನ್ಲೈನ್ನಲ್ಲಿ ಲೀಕ್ ಆಗಿದ್ದು, ಅದನ್ನು ಸಂಪೂರ್ಣವಾಗಿ ಡಿಲೀಟ್ ಮಾಡೋಕೆ ಸಾಧ್ಯವೇ ಇಲ್ಲ. ಈ ಕಾರಣಕ್ಕೆ ಅವರು ಈ ಮಾತನ್ನು ಹೇಳಿದ್ದಾರೆ.
2017ರಲ್ಲಿ ಜೆನಿಫರ್ ಪ್ರಯಾಣಿಸುತ್ತಿದ್ದ ವಿಮಾನದ ಇಂಜಿನ್ ಕಾರ್ಯ ನಿಲ್ಲಿಸಿತ್ತು. ಈ ಅವಘಡದಲ್ಲಿ ಅವರು ಬದುಕಿದ್ದರು. ಈ ಬಗ್ಗೆ ಮಾತನಾಡಿರುವ ಜೆನಿಫರ್, ‘ನಾನು ಆ ಘಟನೆಯಿಂದ ಕುಗ್ಗಿದೆ. ಆ ಘಟನೆ ತುಂಬಾನೇ ಹಾರಿಫಿಕ್ ಆಗಿತ್ತು. ನಾವು ಸಾಯುತ್ತಿದ್ದೆವು. ಆದರೆ, ಅದೃಷ್ಟದಿಂದ ಬದುಕಿದೆವು’ ಎಂದಿದ್ದಾರೆ.
ಸದ್ಯ, ಜೆನಿಫರ್ ‘ಡೋಂಟ್ ಲುಕ್ ಅಪ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಿಯೋನಾರ್ಡೋ ಡಿಕ್ಯಾಪ್ರಿಯೋ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜತೆಗೆ ಕೆಲ ಪ್ರಮುಖ ಸ್ಟಾರ್ಗಳು ನಟಿಸುತ್ತಿದ್ದಾರೆ.
ಇದನ್ನೂ ಓದಿ: ವಿಚ್ಛೇದನ ವದಂತಿ ಬೆನ್ನಲ್ಲೇ ಹೊಸ ಅಪ್ಡೇಟ್ ನೀಡಿದ ಪ್ರಿಯಾಂಕಾ ಚೋಪ್ರಾ
Published On - 10:01 pm, Wed, 24 November 21