ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಓಪನಿಂಗ್ ಪಡೆದ ಮಿಷನ್ ಇಂಪಾಸಿಬಲ್: ಭಾರತದಲ್ಲಿ ಗಳಿಸಿದ್ದೆಷ್ಟು?

Mission Impossible 7: ನಿನ್ನೆಯಷ್ಟೆ (ಜುಲೈ 13) ಬಿಡುಗಡೆ ಆದ ಮಿಷನ್ ಇಂಪಾಸಿಬಲ್ 7 ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಓಪನಿಂಗ್ ಪಡೆದ ಮಿಷನ್ ಇಂಪಾಸಿಬಲ್: ಭಾರತದಲ್ಲಿ ಗಳಿಸಿದ್ದೆಷ್ಟು?
ಮಿಷನ್ ಇಂಪಾಸಿಬಲ್ 7
Follow us
ಮಂಜುನಾಥ ಸಿ.
|

Updated on: Jul 13, 2023 | 7:56 PM

ಟಾಮ್ ಕ್ರೂಸ್ (Tom Cruise) ನಟನೆಯ ಮಿಷನ್ ಇಂಪಾಸಿಬಲ್ ಡೆಡ್ ರೆಕೂನಿಂಗ್ ಪಾರ್ಟ್ 1 (mission impossible dead reckoning cast) ಸಿನಿಮಾ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ನಿನ್ನೆ (ಜುಲೈ 13) ಕ್ಕೆ ಬಿಡುಗಡೆ ಆಗಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಮಿಷನ್ ಇಂಪಾಸಿಬಲ್ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ (Box Office) ಮಾಡಲು ಸೋತಿದೆ. ಆದರೆ ವಾರಾಂತ್ಯಕ್ಕೆ ಮುನ್ನವೇ ಬಿಡುಗಡೆ ಆಗಿರುವ ಕಾರಣ ವಾರಾಂತ್ಯದ ವೇಳೆಗೆ ದೊಡ್ಡ ಮೊತ್ತವನ್ನು ಈ ಸಿನಿಮಾ ಕಲೆಹಾಕಬಹುದು ಎಂದು ಟ್ರೇಡ್ ವಿಶ್ಲೇಷಕರು ಅಂದಾಜಿಸಿದ್ದಾರೆ.

‘ಮಿಷನ್ ಇಂಪಾಸಿಬಲ್ 7’ ವಿಶ್ವದಾದ್ಯಂತ ಮೊದಲ ದಿನ ಸುಮಾರು 200 ಕೋಟಿ ಹಣ ಬಾಚಿಕೊಂಡಿದೆ. ಮೇಲ್ನೋಟಕ್ಕೆ ಇದು ದೊಡ್ಡ ಮೊತ್ತದಂತೆ ಕಂಡರೂ ಮಿಷನ್ ಇಂಪಾಸಿಬಲ್ ಸಿನಿಮಾದ ಮೇಲೆ ಭಾರಿ ದೊಡ್ಡ ನಿರೀಕ್ಷೆ ಇತ್ತು. ಅದರ ಅರ್ಧದಷ್ಟೂ ಸಹ ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿಲ್ಲ. ಅಂತೆಯೇ ಭಾರತದಲ್ಲಿ ಸಹ ಸಾಧಾರಣ ಓಪನಿಂಗ್ ಅನ್ನು ಸಿನಿಮಾ ಕಂಡುಕೊಂಡಿದ್ದು ಮೊದಲ ದಿನ 12.50 ಕೋಟಿ ರೂಪಾಯಿ ಹಣ ಗಳಿಸಿದೆ. ‘ಅವತಾರ್ 2’ ಸಿನಿಮಾ ಭಾರತದಲ್ಲಿ ಮೊದಲ ದಿನ ಮಾಡಿದ್ದ ಕಲೆಕ್ಷನ್​ನ ಅರ್ಧಕ್ಕಿಂತಲೂ ಕಡಿಮೆ ಮೊತ್ತವನ್ನು ಮಿಷನ್ ಇಂಪಾಸಿಬಲ್ 7 ಗಳಿಸಿದೆ.

ಮಿಷನ್ ಇಂಪಾಸಿಬಲ್ ಸಿನಿಮಾ ಮೊದಲ ದಿನ ಸುಮಾರು 400 ಕೋಟಿ ಗಳಿಕೆ ಮಾಡುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದರ ಅರ್ಧದಷ್ಟು ಹಣವನ್ನಷ್ಟೆ ಈ ಸಿನಿಮಾ ಗಳಿಸಿದೆ. ಸಿನಿಮಾವು ವಾರಾಂತ್ಯದ ಬದಲಿಗೆ ವಾರದ ಮಧ್ಯಭಾಗದಲ್ಲಿ ಬಿಡುಗಡೆ ಆಗಿರುವ ಕಾರಣ ಮೊದಲ ದಿನ ದೊಡ್ಡ ಮೊತ್ತವನ್ನು ಗಳಿಸಿಲ್ಲ ಎನ್ನಲಾಗುತ್ತಿದೆ. ಆದರೆ ಇನ್ನೈದು ದಿನಗಳಲ್ಲಿ ಈ ಸಿನಿಮಾ ಸುಮಾರು 2000 ಕೋಟಿ ಹಣವನ್ನು ವಿಶ್ವದಾದ್ಯಂತ ಗಳಿಸಲಿದೆ ಎಂದು ಕೆಲವು ಬಾಕ್ಸ್ ಆಫೀಸ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಜುಲೈ ತಿಂಗಳಲ್ಲಿ ಇನ್ನೂ ಎರಡು ಭಾರಿ ಬಜೆಟ್​ನ ಹಾಲಿವುಡ್ ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ. ಆ ಸಿನಿಮಾಗಳಿಂದ ಎದುರಾಗಬಹುದಾದ ಸ್ಪರ್ಧೆಯನ್ನು ತಪ್ಪಿಸಲೆಂದೆ ವೀಕೆಂಡ್ ವರೆಗೂ ಕಾಯದೆ ಮುಂಚಿತವಾಗಿಯೇ ಮಿಷನ್ ಇಂಪಾಸಿಬಲ್ 7 ಸಿನಿಮಾವನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಜುಲೈ 21 ರಂದು ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ಓಫನ್​ಹೈಮರ್’ ಹಾಗೂ ಡಿಸ್ನಿಯ ‘ಬಾರ್ಬಿ’ ಸಿನಿಮಾ ತೆರೆಗೆ ಬರಲಿವೆ. ಈ ಸಿನಿಮಾಗಳು ‘ಮಿಷನ್ ಇಂಪಾಸಿಬಲ್’ ಕಲೆಕ್ಷನ್​ಗೆ ಹೊಡೆತ ನೀಡಲಿವೆ.

ಇದನ್ನೂ ಓದಿ:ಮಿಷನ್ ಇಂಪಾಸಿಬಲ್ 7 ನೋಡಿದ ನೆಟ್ಟಿಗರು ಏನಂದರು?

‘ಮಿಷನ್ ಇಂಪಾಸಿಬಲ್ 7’ ಸಿನಿಮಾ ಬಗ್ಗೆ ಭಾರತ ಸೇರಿದಂತೆ ಹಾಲಿವುಡ್ ಹಾಗೂ ಇತರೆ ಕೆಲವು ಪ್ರಮುಖ ಚಿತ್ರರಂಗಗಳಲ್ಲಿ ಧನಾತ್ಮಕ ವಿಮರ್ಶೆಗಳೇ ಕೇಳಿ ಬಂದಿವೆ. ಸಿನಿಮಾದಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳು, ನಟರ ಅದ್ಭುತ ನಟನೆ, ಸಂಭಾಷಣೆಗಳು ಇವೆ. ಅಲ್ಲದೆ ಮುಂದಿನ ಪಾರ್ಟ್​ಗೆ ಪೂರಕವಾಗುವಂತೆ, ಕುತೂಹಲ ಕಾಪಿಟ್ಟುಕೊಂಡು ಸಿನಿಮಾ ಮುಗಿಸಿದ್ದಾರೆ ಎಂಬ ವಿಮರ್ಶೆಗಳು ಕೇಳಿ ಬಂದಿವೆ. ಸಿನಿಮಾದಲ್ಲಿ ಟಾಮ್ ಕ್ರೂಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಹೇಯ್ಲೆ ಗೇಟ್​ವೆಲ್ ನಾಯಕಿಯಾಗಿದ್ದಾರೆ. ಸಿನಿಮಾವನ್ನು ಕ್ರಿಸ್ಟೊಫರ್ ಮೆಕ್ವೈರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸುಮಾರು 2400 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್