ಎರಡನೇ ದಿನ ಗಳಿಕೆ ಹೆಚ್ಚಿಸಿಕೊಂಡ ‘ಆಪನ್​ಹೈಮರ್’ ಶನಿವಾರ ಗಳಿಸಿದ್ದೆಷ್ಟು

Oppenheimer: 'ಆಪನ್​ಹೈಮರ್' ಸಿನಿಮಾ ಶನಿವಾರದ ದಿನದಂದು ಭಾರತದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

ಎರಡನೇ ದಿನ ಗಳಿಕೆ ಹೆಚ್ಚಿಸಿಕೊಂಡ 'ಆಪನ್​ಹೈಮರ್' ಶನಿವಾರ ಗಳಿಸಿದ್ದೆಷ್ಟು
ಆಪನ್​ಹೈಮರ್
Follow us
ಮಂಜುನಾಥ ಸಿ.
|

Updated on: Jul 23, 2023 | 4:37 PM

ಕ್ರಿಸ್ಟೊಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್​ಹೈಮರ್‘ (Oppenheimer) ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಜುಲೈ 21 ರಂದು ತೆರೆಗೆ ಬಂದಿದೆ. ಈ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗುವ ಒಂದು ದಿನ ಮೊದಲೇ 1.68 ಲಕ್ಷ ಟಿಕೆಟ್​ಗಳು ಮುಂಗಡವಾಗಿ ಮಾರಾಟವಾಗಿದ್ದವೂ ಅದೂ ಮಲ್ಟಿಪ್ಲೆಕ್ಸ್​ಗಳಲ್ಲಿ (Multiplex) ಮಾತ್ರ. ಹಾಗಾಗಿ ಸಿನಿಮಾದ ಮೇಲೆ ಹಾಗೂ ಅದು ಮಾಡಲಿರುವ ಗಳಿಕೆ ಮೇಲೆ ಭಾರತೀಯ ಚಿತ್ರರಂಗದ ಮಾರುಕಟ್ಟೆ ವಿಶ್ಲೇಷಕರೂ ಕಣ್ಣಿಟ್ಟಿದ್ದರು. ಅಂತೆಯೇ ‘ಆಪನ್​ಹೈಮರ್’ ಸಿನಿಮಾ ಭಾರತದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ.

ಜುಲೈ 21 ರ ಶುಕ್ರವಾರ ಬಿಡುಗಡೆ ಆದ ‘ಆಪನ್​ಹೈಮರ್’ ಸಿನಿಮಾ ಮೊದಲ ದಿನ ಭಾರತದಲ್ಲಿ 13.70 ಕೋಟಿ ರೂಪಾಯಿ ಗಳಿಸಿತು. ಆ ಮೂಲಕ ಈ ವರ್ಷ ಭಾರತದಲ್ಲಿ ಬಿಡುಗಡೆ ಆದ ಹಾಲಿವುಡ್ ಸಿನಿಮಾಗಳ ಮೊದಲ ದಿನದ ದಾಖಲೆಯನ್ನು ಮೀರಿತು. ದಾಖಲೆಯ ಮೊತ್ತವೇ ಆದರೂ ಇದು ಬಹಳ ದೊಡ್ಡ ಮೊತ್ತವೇನೂ ಆಗಿರಲಿಲ್ಲ. ಹಾಗಾಗಿ ವಾರಾಂತ್ಯದ ಮೊದಲ ದಿನ ಶನಿವಾರ ಎಷ್ಟು ಕಲೆಕ್ಷನ್ ಆಗಲಿದ ಎಂಬ ಕುತೂಹಲವಿತ್ತು. ಇದೀಗ ಎರಡನೇ ದಿನದ ಕಲೆಕ್ಷನ್ ಲೆಕ್ಕಾಚಾರ ಸಹ ಹೊರಬಂದಿದೆ.

ಶನಿವಾರ ಒಂದೇ ದಿನ ‘ಆಪನ್​ಹೈಮರ್’ ಸಿನಿಮಾ ಭಾರತದಲ್ಲಿ 20 ಕೋಟಿ ರೂಪಾಯಿ ಹಣ ಗಳಿಸಿದೆ. ಮೊದಲ ದಿನದ ಗಳಿಕೆಗಿಂತಲೂ 50% ಹೆಚ್ಚಿನ ಗಳಿಕೆಯನ್ನು ಶನಿವಾರ ಮಾಡಿದೆ ಆಪನ್​ಹೈಮರ್. ಮಾತ್ರವೇ ಅಲ್ಲದೆ ಭಾನುವಾರ ಸಹ ಈ ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಮೂಡಿಸಿದೆ. ಭಾನುವಾರ ಆಪನ್​ಹೈಮರ್ ಸಿನಿಮಾ ಸುಮಾರು 25 ಕೋಟಿ ಹಣ ಗಳಿಸಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:Oppenheimer movie Review: ಆಪನ್​ಹೈಮರ್, ವಿಜ್ಞಾನಿಯೋ? ವಿಧ್ವಂಸಕನೋ, ದೇಶದ್ರೋಹಿಯೊ, ರಾಜಕಾರಣಿಯೋ?

ಮೊದಲ ವೀಕೆಂಡ್​ನಲ್ಲಿ ‘ಆಪನ್​ಹೈಮರ್’ ಸಿನಿಮಾ ಒಟ್ಟು ಸುಮಾರು 50 ಕೋಟಿಗೂ ಹೆಚ್ಚು ಮೊತ್ತ ಗಳಿಸಲಿದ್ದು, ಎರಡನೇ ವಾರಾಂತ್ಯದ ವೇಳೆಗೆ ನೂರು ಕೋಟಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಸಿನಿಮಾ ಭಾರತದಲ್ಲಿ ನೂರು ಕೋಟಿ ಗಳಿಸಿತ್ತು. ಅದಾದ ಬಳಿಕ ಬಿಡುಗಡೆ ಆದ ಇನ್ಯಾವುದೇ ಹಾಲಿವುಡ್ ಸಿನಿಮಾ ಭಾರತದಲ್ಲಿ ನೂರು ಕೋಟಿ ಗಳಿಸಿಲ್ಲ. ಆದರೆ ‘ಆಪನ್​ಹೈಮರ್’ ಸಿನಿಮಾ ಭಾರತದಲ್ಲಿ ನೂರು ಕೋಟಿ ಗಳಿಸುವ ಭರವಸೆ ಮೂಡಿಸಿದೆ.

‘ಆಪನ್​ಹೈಮರ್’ ಸಿನಿಮಾವು ಅಣುಬಾಂಬ್ ಜನಕ, ವಿಜ್ಞಾನಿ ಜೆ ರಾಬರ್ಟ್ ಆಪನ್​ಹೈಮರ್ ಜೀವನ ಆಧರಿಸಿದ ಸಿನಿಮಾ ಆಗಿದೆ. ಸಿನಿಮಾದಲ್ಲಿ ಕಿಲಿಯನ್ ಮರ್ಫಿ, ರಾಬರ್ಟ್ ಆಪನ್​ಹೈಮರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಮ್ಯಾಟ್ ಡೇಮನ್, ರಾಬರ್ಟ್ ಡೌನಿ ಜೂನಿಯರ್, ಎಮಿಲಿ ಬ್ಲಂಟ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಕ್ರಿಸ್ಟೋಪರ್ ನೋಲನ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಬಹಳ ಒಳ್ಳೆಯ ವಿಮರ್ಶೆಗಳು ಹರಿದುಬರುತ್ತಿವೆ. ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದೆಲ್ಲೆಡೆ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ