Nick Jonas: ಭಾರತದವರು ಅಡ್ಡ ಹೆಸರು ಕರೆದಿದ್ದಕ್ಕೆ ನಿಕ್ ಜೋನಸ್ಗೆ ಬೇಜಾರಾಯ್ತಾ? ಬಿಬಿಸಿ ಶೋನಲ್ಲಿ ಉತ್ತರಿಸಿದ ಗಾಯಕ
Priyanka Chopra: ನಿಕ್ ಜೋಸನ್ ಅವರನ್ನು ಪಾಪರಾಜಿಗಳು ‘ನಿಕ್ವಾ’ ಎಂದು ಕೂಗಿದ್ದರು. ಈ ವಿಷಯದ ಬಗ್ಗೆ ಬಿಬಿಸಿ ವಾಹಿನಿಯಲ್ಲಿ ನಿಕ್ ಜೋನಸ್ಗೆ ಪ್ರಶ್ನೆ ಕೇಳಲಾಗಿದೆ.
ಗಾಯಕ ನಿಕ್ ಜೋಸನ್ (Nick Jonas) ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರ ಅವರು ಭಾರತಕ್ಕೆ ಬಂದಿದ್ದುಂಟು. ಆಗೆಲ್ಲ ಅವರು ನಿಕ್ ಜೋನಸ್ ಅವರನ್ನೂ ಕರೆದುಕೊಂಡು ಬಂದಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ನಿಕ್ ಜೋಸನ್ ಅವರನ್ನು ಪಾಪರಾಜಿಗಳು ‘ಬಾವ’ ಎಂದು ಕರೆದಿದ್ದರು. ಅಲ್ಲದೇ ‘ನಿಕ್ವಾ’ ಎಂದು ಕೂಡ ಕೆಲವರು ಕೂಗಿದ್ದರು. ಈ ರೀತಿ ಕರೆದಿದ್ದಕ್ಕೆ ನಿಕ್ ಜೋನಸ್ ಅವರು ಬೇಸರ ಮಾಡಿಕೊಂಡಿಲ್ಲ. ಇದೇ ವಿಚಾರದ ಬಗ್ಗೆ ಬಿಬಿಸಿ (BBC) ಏಷ್ಯನ್ ನೆಟ್ವರ್ಕ್ನ ಬ್ರೇಕ್ಫಾಸ್ಟ್ ಶೋನಲ್ಲಿ ಚರ್ಚೆ ಆಗಿದೆ. ಭಾರತದ ಪಾಪರಾಜಿಗಳು ಆ ರೀತಿ ಕರೆದಿದ್ದಕ್ಕೆ ತಮಗೆ ಬೇಸರ ಇಲ್ಲ ಎಂದು ನಿಕ್ ಜೋನಸ್ ಹೇಳಿದ್ದಾರೆ.
‘ಅಂಬಾನಿ ಕುಟುಂಬದವರು ನಿರ್ಮಿಸಿದ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗಾಗಿ ನಾವು ಇತ್ತೀಚೆಗೆ ಮುಂಬೈಗೆ ತೆರಳಿದ್ದೆವು. ಅದು ಉತ್ತಮ ಕಾರ್ಯಕ್ರಮವಾಗಿತ್ತು. ರೆಡ್ ಕಾರ್ಪೆಟ್ ಮೇಲೆ ಎಲ್ಲ ಛಾಯಾಗ್ರಾಹಕರು ನನ್ನನ್ನು ಬಾವ ಅಂತ ಕರೆಯುತ್ತಿದ್ದರು’ ಎಂದು ಆ ಕ್ಷಣವನ್ನು ನಿಕ್ ಜೋನಸ್ ನೆನಪು ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ವೃತ್ತಿಜೀವನಕ್ಕೆ ನಿಕ್ ಜೋಸನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಜೋಡಿಗೆ ಹೆಣ್ಣು ಮಗು ಜನಿಸಿದ್ದು, ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರು ಇಡಲಾಗಿದೆ.
ಸಿನಿಮಾ ಕೆಲಸಗಳ ಬಿಡುವಿನಲ್ಲಿ ಈ ದಂಪತಿ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ ರೋಮ್ ನಗರದಲ್ಲಿ ಸುತ್ತಾಡುತ್ತಿದ್ದರು. ಆ ಖುಷಿಯ ಸಂದರ್ಭದ ವಿಡಿಯೋವನ್ನು ನಿಕ್ ಜೋನಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರೋಮ್ ನಗರಕ್ಕೆ ತೆರಳಿದ್ದ ನಿಕ್ ಜೋನಸ್ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡ್ನಲ್ಲಿದ್ದರು. ಮುದ್ದಿನ ಪತ್ನಿ ಪ್ರಿಯಾಂಕಾ ಚೋಪ್ರಾ ತುಟಿಗೆ ಅವರು ಸಿಹಿ ಮುತ್ತು ನೀಡಿದ್ದರು. ಇಬ್ಬರ ನಡುವಿನ ಪ್ರೀತಿ ಕಂಡು ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದರು. ರೋಮ್ ನಗರದಲ್ಲಿ ಬೀದಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಐಸ್ಕ್ರೀಂ ಸವಿದಿದ್ದರು.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್ ಜೋಹರ್?
ಅಮೆರಿಕದಲ್ಲಿ ಪಾಪ್ ಗಾಯಕನಾಗಿ ನಿಕ್ ಜೋನಸ್ ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಹಾಲಿವುಡ್ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಬೇಕು ಎಂದುಕೊಂಡಿದ್ದರು. ಆದರೆ ಅವರಿಗೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗಲಿಲ್ಲ. ನಂತರ ಅವರು ಇಂಗ್ಲಿಷ್ ಸಿನಿಮಾ ಮತ್ತು ವೆಬ್ ಸಿರೀಸ್ಗಳ ಕಡೆಗೆ ಗಮನ ಹರಿಸಲು ಆರಂಭಿಸಿದರು. ಅದು ಅವರಿಗೆ ಫಲ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.