ಸೂರ್ಯ ನಟನೆಯ ‘ಜೈ ಭೀಮ್’ (Jai Bhim) ಚಿತ್ರ ಒಳ್ಳೆಯ ಹೆಸರು ಮಾಡಿದೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ರಿಲೀಸ್ ಆದ ಈ ಚಿತ್ರಕ್ಕೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆಗಳು ಬಂದವು. ಭಾರತೀಯ ಚಿತ್ರರಂಗದಲ್ಲಿ 2021ರಲ್ಲಿ ರಿಲೀಸ್ ಆದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಇನ್ನು, ಮೋಹನ್ಲಾಲ್ ಅಭಿನಯದ ‘ಮರಕ್ಕರ್’ ಸಿನಿಮಾ ಕಳೆದ ವರ್ಷ ತೆರೆಗೆ ಬಂದು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಇವೆರಡೂ ಸಿನಿಮಾಗಳು ಈಗ 2022ರ ಆಸ್ಕರ್ (Oscar Awards 2022) ರೇಸ್ನಲ್ಲಿವೆ. ಈ ಬಾರಿಯಾದರೂ ಭಾರತೀಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಲಿ ಎಂಬುದು ಎಲ್ಲರ ಕೋರಿಕೆ.
ಆಸ್ಕರ್ ಅವಾರ್ಡ್ಸ್ ನೀಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಈ ಬಾರಿ ಆಸ್ಕರ್ ರೇಸ್ನಲ್ಲಿರುವ 276 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ತಮಿಳಿನ ‘ಜೈ ಭೀಮ್’ ಹಾಗೂ ಮಲಯಾಳಂನ ‘ಮರಕ್ಕರ್’ ಸ್ಥಾನ ಪಡೆದುಕೊಂಡಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ 94ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ಮಾರ್ಚ್ 27ರಂದು ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿದೆ.
‘ಜೈ ಭೀಮ್’ ಆಸ್ಕರ್ ರೇಸ್ನಲ್ಲಿ ಇರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದೆ. ಇನ್ನು, ‘ಮರಕ್ಕರ್’ ಚಿತ್ರ ತಂಡ ಕೂಡ ಈ ಬಗ್ಗೆ ಸಂತಸ ಹೊರಹಾಕಿದೆ. ಈ ಸಿನಿಮಾಗಳು ಫಿನಾಲೆ ತಲುಪಿ ಪ್ರಶಸ್ತಿ ಬಾಚಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
The 276 feature films in contention for the 94th Academy Awards. #Oscars https://t.co/ae6SRmjoG1
— The Academy (@TheAcademy) January 20, 2022
Into the #Oscars race!#JaiBhim makes it into the 276 films shortlisted by @TheAcademy for the 94th Academy Award nominations ?
Read the full list here ➡️ https://t.co/M70mKOzmpe@Suriya_offl #Jyotika @tjgnan @rajsekarpandian @PrimeVideoIN
— 2D Entertainment (@2D_ENTPVTLTD) January 21, 2022
ಜಾಗತಿಕ ಸಿನಿಮಾ ಲೋಕದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾರಿ ಮನ್ನಣೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್ ಪಡೆಯಬೇಕು ಎಂದು ಕನಸು ಕಾಣುತ್ತಾರೆ ಸಿನಿಮಾ ಮಂದಿ. ಇನ್ನು, ಆಸ್ಕರ್ ಪ್ರಶಸ್ತಿ (ಅಕಾಡೆಮಿ ಅವಾರ್ಡ್ಸ್) ಪ್ರದಾನ ಸಮಾರಂಭ ಕೂಡ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಹಾಲಿವುಡ್ ಸಿನಿಲೋಕದ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಆ ಸಮಾರಂಭದಲ್ಲಿ ಭಾಗಿ ಆಗುತ್ತಾರೆ. 2022ರ ಆಸ್ಕರ್ ಸಮಾರಂಭದ ಬಗ್ಗೆ ಈಗ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಪ್ರತಿ ಬಾರಿಯೂ ಈ ಕಾರ್ಯಕ್ರವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬುದು ಕೂಡ ಬಹುಮುಖ್ಯವಾಗುತ್ತದೆ. ಈ ವರ್ಷ ಪಾಪ್ ಗಾಯಕಿ ಸೆಲೆನಾ ಗೊಮೆಜ್ ಹೆಸರು ಕೇಳಿಬರುತ್ತಿದೆ. ಆದರೆ ಅದನ್ನೂ ಅಧಿಕೃತವಾಗಿಲ್ಲ. ಅದರ ಜೊತೆ ‘ಸ್ಪೈಡರ್ ಮ್ಯಾನ್’ ಖ್ಯಾತಿಯ ನಟ ಟಾಮ್ ಹಾಲೆಂಡ್ ಸಹ ಈ ಬಾರಿ ನಿರೂಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತ; ಖ್ಯಾತ ನಟ ಬಚಾವ್, ವೈರಲ್ ಆಯ್ತು ಫೋಟೋ
Sidney Poitier: ಅತ್ಯುತ್ತಮ ನಟನೆಗಾಗಿ ಆಸ್ಕರ್ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್ ನಿಧನ