Salaar: ‘ರಾಜಮನಾರ್’​ ಪರಿಚಯಿಸಲಿರುವ ‘ಸಲಾರ್’ ಚಿತ್ರತಂಡ; ಹಾಗಂದ್ರೆ ಏನು ಎಂದು ತಲೆಕೆಡಿಸಿಕೊಂಡ ಫ್ಯಾನ್ಸ್

Rajamanaar: ಸಲಾರ್ ಚಿತ್ರತಂಡ ಹೊಸ ಅಪ್ಡೇಟ್ ಘೋಷಿಸಿದೆ. ಆದರೆ ಇದರ ಹಿಂದು ಮುಂದು ತಿಳಿಯದೆ ಫ್ಯಾನ್ಸ್ ಗೊಂದಲಕ್ಕೆ ಬಿದ್ದಿದ್ದು, ಸಂಪೂರ್ಣ ಮಾಹಿತಿ ತಿಳಿಯಲು ನಾಳೆಗಾಗಿ ಕಾಯುತ್ತಿದ್ದಾರೆ.

Salaar: ‘ರಾಜಮನಾರ್’​ ಪರಿಚಯಿಸಲಿರುವ ‘ಸಲಾರ್’ ಚಿತ್ರತಂಡ; ಹಾಗಂದ್ರೆ ಏನು ಎಂದು ತಲೆಕೆಡಿಸಿಕೊಂಡ ಫ್ಯಾನ್ಸ್
ಸಲಾರ್ ಚಿತ್ರದಲ್ಲಿ ಪ್ರಭಾಸ್
Follow us
TV9 Web
| Updated By: shivaprasad.hs

Updated on: Aug 22, 2021 | 11:08 AM

ಪ್ರಭಾಸ್ ನಟನೆಯ ‘ಸಲಾರ್’ ಚಿತ್ರ ಹೊಸ ಅಪ್ಡೇಟ್​ ನೀಡಲು ಚಿತ್ರತಂಡ ಸಜ್ಜಾಗಿದೆ. ಈ ಕುರಿತು ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ಮಾಹಿತಿ ನೀಡಿದೆ. ‘ಸಲಾರ್​’ನಲ್ಲಿರುವ ‘ರಾಜಮನಾರ್​’ನ ಪರಿಚಯವನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಟ್ವೀಟ್ ಮುಖಾಂತರ ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ. ಇದರಿಂದ ಫ್ಯಾನ್ಸ್​ಗಳಿಗೆ ಸಂತಸವಾಗಿದ್ದು, ನಾಳೆಗಾಗಿ ಕಾಯುತ್ತಿದ್ದಾರೆ. ಆದರೆ ಇದೇ ವೇಳೆ ‘ರಾಜ್​ಮನಾರ್’ ಎಂದರೆ ಏನು ಎಂಬುದು ತಿಳಿಯದೇ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.

ಪ್ರಭಾಸ್ ಹಾಗೂ ಶೃತಿ ಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ‘ಸಲಾರ್’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಶೆಡ್ಯೂಲ್ ಮುಗಿಸಿದ ಪ್ರಭಾಸ್ ‘ಆದಿಪುರುಷ್’ ಚಿತ್ರದ ಶೂಟಿಂಗ್​ಗಾಗಿ ತೆರಳಿದ್ದಾರೆ. ಈ ನಡುವೆ ಚಿತ್ರತಂಡ ಹೊಸ ಅಪ್ಡೇಟ್ ನೀಡಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿರುವ ಟ್ವೀಟ್:

‘ರಾಜಮನಾರ್’ ಅಂದರೇನು ಎಂದು ತಲೆಕೆಡಿಸಿಕೊಂಡ ಫ್ಯಾನ್ಸ್:

ಹೊಂಬಾಳೆ ಫಿಲ್ಮ್ಸ್ ಮಾಡಿರುವ ಟ್ವೀಟ್ ಅನ್ನು ಪ್ರಶಾಂತ್ ನೀಲ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ. ಆದರೆ ಚಿತ್ರತಂಡದ ಈ ಮಾಹಿತಿಯಿಂದ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಅವರಿಗೆ ‘ರಾಜಮನಾರ್’ ಎಂಬುದು ಪಾತ್ರದ ಹೆಸರೋ, ಸ್ಥಳದ ಹೆಸರೋ ಎಂಬುದನ್ನು ಊಹಿಸಲು ಆಗುತ್ತಿಲ್ಲ. ಇದರಿಂದಾಗಿ ದಯವಿಟ್ಟು ಅದನ್ನು ಮೊದಲು ತಿಳಿಸಿ, ಕುತೂಹಲ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿಕೊಳ್ಳುತ್ತಿದ್ದಾರೆ.

ಕೆಲವರು ಇದನ್ನು ಅವರದೇ ನೆಲೆಯಲ್ಲಿ ಊಹಿಸಿಕೊಳ್ಳುತ್ತಿದ್ದು, ಅದು ಪ್ರಭಾಸ್ ತಂದೆಯ ಪಾತ್ರವೆಂದೋ, ಅಥವಾ ಮುಖ್ಯ ಪಾತ್ರವೆಂದೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ‘ರಾಜಮನಾರ್​’ನ ಅಸಲಿಯತ್ತು ತಿಳಿಯಬೇಕಾದರೆ ನಾಳೆಯವರೆಗೆ ಕಾಯದೇ ವಿಧಿಯಿಲ್ಲ. ಕಾರಣ, ನಾಳೆ ಅದರ ಸಂಪೂರ್ಣ ಚಿತ್ರಣ ತಿಳಿಸುವುದಾಗಿ ಚಿತ್ರತಂಡ ಘೋಷಿಸಿದೆ. ನಾಳೆ ಬೆಳಗ್ಗೆ 10.30ಕ್ಕೆ ಚಿತ್ರತಂಡ ಈ ಕುರಿತು ಅಪ್ಡೇಟ್ ನೀಡಲಿದ್ದು, ಅಭಿಮಾನಿಗಳು ಅದಕ್ಕಾಗಿ ತವಕದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

Chiranjeevi Birthday: ಅಮಿತಾಭ್​ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಮೆಗಾಸ್ಟಾರ್; ಕುತೂಹಲಕರ ಸಂಗತಿಗಳು ಇಲ್ಲಿವೆ

Chiranjeevi Birthday: ಚಿರಂಜೀವಿ ಜನ್ಮದಿನಕ್ಕೆ 153ನೇ ಸಿನಿಮಾ ಟೈಟಲ್​ ಅನಾವರಣ; ಗಾಡ್​​ಫಾದರ್​ ಆದ ಮೆಗಾಸ್ಟಾರ್​

(Hombale Films will reveal Rajamanaar from Salaar on August 23rd)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್