Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಚ ಹೇಳಿಕೆ, ಕೇರಳ ಉದ್ಯಮಿ ವಿರುದ್ಧ ನಟಿ ಹನಿ ರೋಸ್ ದೂರು

Honey Rose: ಚೆಮನೂರು ಜ್ಯುವೆಲರ್ಸ್ ಮಾಲೀಕ ಬಾಬಿ ಚೆಮನೂರು ವಿರುದ್ಧ ಖ್ಯಾತ ನಟಿ ಹನಿ ರೋಸ್ ದೂರು ದಾಖಲಿಸಿದ್ದಾರೆ. ಬಾಬಿ ಚೆಮನೂರು, ನಟಿ ಹನಿ ರೋಸ್ ಬಗ್ಗೆ ನೀಚ ಕಮೆಂಟ್​ ಮಾಡಿದ್ದನ್ನು ವಿರೋಧಿಸಿ ಈ ದೂರು ದಾಖಲಾಗಿದೆ. ಮಾತ್ರವಲ್ಲದೆ ಇನ್ನೂ 30 ಮಂದಿಯ ವಿರುದ್ಧ ನಟಿ ದೂರು ದಾಖಲಿಸಿದ್ದಾರೆ.

ನೀಚ ಹೇಳಿಕೆ, ಕೇರಳ ಉದ್ಯಮಿ ವಿರುದ್ಧ ನಟಿ ಹನಿ ರೋಸ್ ದೂರು
Honey Rose
Follow us
ಮಂಜುನಾಥ ಸಿ.
|

Updated on: Jan 08, 2025 | 11:13 AM

ನಟಿ ಹನಿ ರೋಸ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದ್ದಾರೆ. 2005 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಹನಿ ರೋಸ್, ಸಿನಿಮಾಗಳಿಗಿಂತಲೂ ಇನ್​ಸ್ಟಾಗ್ರಾಂ ಫೋಟೊ, ವಿಡಿಯೋಗಳಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಹನಿ ರೋಸ್ ಇದೀಗ ದಕ್ಷಿಣ ಭಾರತದ ಹಾಟ್ ನಟಿಯರಲ್ಲಿ ಒಬ್ಬರು. ಆದರೆ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೀಚ ಕಮೆಂಟ್​ಗಳನ್ನು ಸಹ ಅವರು ಎದುರಿಸುವಂತಾಗಿದೆ. ಹನಿ ರೋಸ್​ ಗ್ಲಾಮರ್ ಬಗ್ಗೆ ನೆಗೆಟಿವ್ ಕಮೆಂಟ್​ಗಳು, ಅಶ್ಲೀಲ ಕಮೆಂಟ್​ಗಳು ಬರುತ್ತಲೇ ಇರುತ್ತವೆ. ಇತ್ತೀಚೆಗೆ ಜನಪ್ರಿಯ ಉದ್ಯಮಿಯೊಬ್ಬರು ಹನಿ ರೋಸ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದು, ಉದ್ಯಮಿ ವಿರುದ್ಧ ನಟಿ ದೂರು ಸಲ್ಲಿಸಿದ್ದಾರೆ.

ಕೇರಳದ ಬಲು ಜನಪ್ರಿಯ ಉದ್ಯಮಿ, ಚಿನ್ನದ ವ್ಯಾಫಾರಿ ಬಾಬಿ ಚೆಮನೂರು ವಿರುದ್ಧ ನಟಿ ಹನಿ ರೋಸ್ ದೂರು ಸಲ್ಲಿಸಿದ್ದಾರೆ. ಎರ್ನಾಕುಲಮ್ ಪೊಲೀಸ್ ಠಾಣೆಯಲ್ಲಿ ಬಾಬಿ ಚೆಮನೂರ್ ವಿರುದ್ಧ ಹನಿ ರೋಸ್ ದೂರು ಸಲ್ಲಿಸಿದ್ದು, ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು, ‘ನಿನ್ನ ಹಾಗೂ ನಿನ್ನ ಸಹಚರರ ವಿರುದ್ಧ ದೂರು ಸಲ್ಲಿಸಲಾಗಿದೆ. ನಿನಗೆ ನಿನ್ನ ಹಣದ ಶಕ್ತಿಯ ಮೇಲೆ ನಂಬಿಕೆ ಇರಬಹುದು ಆದರೆ ನನಗೆ ಈ ದೇಶದ ಕಾನೂನಿನ ಮೇಲೆ ನಂಬಿಕೆ ಇದೆ’ ಎಂದಿದ್ದಾರೆ.

ಹನಿ ರೋಸ್, ಕೇರಳದ ಬಲು ಜನಪ್ರಿಯ ನಟಿ. ಹಲವು ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಲಾಗುತ್ತದೆ. ವಿಶೇಷವಾಗಿ ಆಭರಣ ಮಳಿಗೆಗಳ ಉದ್ಘಾಟನೆಗೆ ಹನಿ ರೋಸ್ ಅವರನ್ನು ಹೆಚ್ಚಿಗೆ ಆಹ್ವಾನಿಸಲಾಗುತ್ತದೆ. ಇದೇ ವಿಷಯವಾಗಿ ಬಾಬಿ ಚೆಮನೂರು ಹನಿ ರೋಸ್ ಬಗ್ಗೆ ಅವರ ದೇಹದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದೇ ಕಾರಣಕ್ಕೆ ಹನಿ ರೋಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಮುದ್ದು ಚೆಲುವೆ ಹನಿ ರೋಸ್​ಳನ್ನು ಬ್ಯಾನ್ ಮಾಡಲು ಒತ್ತಾಯ: ಯಾಕೆ?

ಕೆಲವು ದಿನಗಳ ಹಿಂದೆ ಸಹ ಹನಿ ರೋಸ್ ತಮ್ಮ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ 30 ವ್ಯಕ್ತಿಗಳ ವಿರುದ್ಧ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಒಬ್ಬ 60 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ ಸಹ. ಅಲ್ಲದೆ ತಾವು ಹನಿ ರೋಸ್ ಅವರ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಕಣ್ಣಿಟ್ಟಿರುವುದಾಗಿಯೂ ಹೇಳಿದ್ದಾರೆ.

ಈ ಘಟನೆಗಳ ಬಳಿಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಹನಿ ರೋಸ್, ‘ನನ್ನನ್ನು ಆಹ್ವಾನಿಸಲಾದ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುವುದು ನನ್ನ ವೃತ್ತಿಯ ಒಂದು ಭಾಗ. ನನ್ನ ಉಡುಪಿನ ಬಗ್ಗೆ ಕ್ರಿಯಾತ್ಮಕ ಟೀಕೆ, ವಿಮರ್ಶೆಗಳಿಗೆ ನಾನು ವಿರೋಧಿಯಲ್ಲ. ಆದರೆ ಅಶ್ಲೀಲ ಕಮೆಂಟ್​ಗಳನ್ನು ನಾನು ಪ್ರೋತ್ಸಾಹಿಸುವುದಿಲ್ಲ. ಈ ದೇಶದ ಕಾನೂನು ಸಮ್ಮತಿಸುವ ಉಡುಪುಗಳನ್ನಷ್ಟೆ ನಾನು ಧರಿಸುತ್ತೇನೆ’ ಎಂದಿದ್ದಾರೆ ಹನಿ ರೋಸ್.

ಬಾಬಿ ಚೆಮನೂರು ಭಾರತದ ಜನಪ್ರಿಯ ಚಿನ್ನದ ವ್ಯಾಪಾರಿಗಳಲ್ಲಿ ಒಬ್ಬರು. ಚೆಮನೂರು ಜ್ಯುವೆಲರ್ಸ್ ಅವರದ್ದೆ. ವಿಶ್ವ ವಿಖ್ಯಾತ ಫುಟ್​ಬಾಲ್ ಆಟಗಾರ ಡಿಯಾಗೊ ಮರಡೋನ ಅವರನ್ನು ಕೊಚ್ಚಿಗೆ ಕರೆದುಕೊಂಡು ಬಂದು ತಮ್ಮ ಆಭರಣ ಸಂಸ್ಥೆಯ ರಾಯಭಾರಿಯನ್ನಾಗಿ ಮಾಡಿಕೊಂಡಿದ್ದರು ಬಾಬಿ ಚೆಮನೂರು. ಇದೀಗ ಈ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ಕೆಲ ರಾಜಕಾರಣಿಗಳು ಹನಿ ರೋಸ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ