ಕೀರ್ತಿ ಸುರೇಶ್ ವಾರ್ಷಿಕ ಆದಾಯವೆಷ್ಟು? ಸಿನಿಮಾಗಳಿಂದ ಎಷ್ಟು ಕೋಟಿ ಗಳಿಸುತ್ತಾರೆ?

Keerthy Suresh: ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತದ ಜನಪ್ರಿಯ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಇತ್ತೀಚೆಗಷ್ಟೆ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಬೇಡಿಕೆಯ ನಟಿ ಕೀರ್ತಿ ಸುರೇಶ್ 2023ರಲ್ಲಿ ಗಳಿಸಿದ ಒಟ್ಟು ಆದಾಯವೆಷ್ಟು? ಇಲ್ಲಿದೆ ಮಾಹಿತಿ.

ಕೀರ್ತಿ ಸುರೇಶ್ ವಾರ್ಷಿಕ ಆದಾಯವೆಷ್ಟು? ಸಿನಿಮಾಗಳಿಂದ ಎಷ್ಟು ಕೋಟಿ ಗಳಿಸುತ್ತಾರೆ?
Follow us
|

Updated on: Sep 18, 2024 | 4:56 PM

‘ಮಹಾನಟಿ’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೀರ್ತಿ ಸುರೇಶ್. ಪ್ರತಿಭೆ, ಸೌಂದರ್ಯ ಎರಡೂ ಉಳ್ಳ ಕೆಲವೇ ನಟಿಯರಲ್ಲಿ ಕೀರ್ತಿ ಸುರೇಶ್ ಸಹ ಒಬ್ಬರು. ದಕ್ಷಿಣ ಭಾರತದ ಈ ನಟಿ, ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ಕೀರ್ತಿ ಸುರೇಶ್ ಇದೀಗ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಅವರ ಮೊದಲ ಬಾಲಿವುಡ್ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇದರ ನಡುವೆ ಕೀರ್ತಿ ಸುರೇಶ್​ರ ವಾರ್ಷಿಕ ಆದಾಯ ಬಹಿರಂಗವಾಗಿದೆ. ನಟಿಯರು ಕಡಿಮೆ ಗಳಿಸುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಕೀರ್ತಿ ಉತ್ತಮ ಆದಾಯವನ್ನೇ ಗಳಿಸುತ್ತಿದ್ದಾರೆ.

ಪ್ರತಿ ಸಿನಿಮಾಕ್ಕೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುವ ಕೀರ್ತಿ ಸುರೇಶ್ 2023 ರಲ್ಲಿ ಕೇವಲ ಸಿನಿಮಾಗಳಿಂದ ಸುಮಾರು 25 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಾಯಕ ನಟರಿಗೆ ಹೋಲಿಸಿದರೆ ಇದು ಬಹಳ ಕಡಿಮೆ ಹೌದು. ಆದರೆ ಸಿನಿಮಾ ಮಾತ್ರವೇ ಕೀರ್ತಿ ಸುರೇಶ್ ಆದಾಯದ ಮೂಲವಲ್ಲ. ಕೀರ್ತಿ ಸುರೇಶ್ ಜಾಹೀರಾತು, ಕೆಲವು ಉದ್ದಿಮೆ, ರಿಯಲ್ ಎಸ್ಟೇಟ್​ಗಳಿಂದಲೂ ಆದಾಯ ಗಳಿಸುತ್ತಾರಂತೆ. ಕಿರ್ತಿ ಸುರೇಶ್ 2023 ರಲ್ಲಿ ಸುಮಾರು 120 ಕೋಟಿ ಆದಾಯ ಗಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ದುಬೈ ಫ್ಯಾಮಿಲಿ ಜೊತೆ ಈ ವರ್ಷದ ಓಣಂ ಆಚರಿಸಿದ ನಟಿ ಕೀರ್ತಿ ಸುರೇಶ್

ಇನ್ನು ಕೀರ್ತಿ ಸುರೇಶ್​ಗೂ ದೊಡ್ಡ ಮನೆಗೂ ನಂಟಿದೆ. ಕೀರ್ತಿ ಸುರೇಶ್ ತಾಯಿ, ಅಣ್ಣಾವ್ರು ನಟಿಸಿರುವ ‘ಸಮಯದ ಗೊಂಬೆ’ ಸಿನಿಮಾದಲ್ಲಿ ರಾಜ್​ಕುಮಾರ್ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ದೊಡ್ಮನೆ ಕುಟುಂಬಕ್ಕೆ ಕೀರ್ತಿ ಸುರೇಶ್ ತಾಯಿ ಬಹಳ ಆಪ್ತರಂತೆ. ಕೀರ್ತಿ ಸುರೇಶ್ ಸಹ ರಾಘವೇಂದ್ರ ರಾಜ್​ಕುಮಾರ್ ನಿವಾಸಕ್ಕೆ ಒಮ್ಮೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದರು. ಆ ಚಿತ್ರ ಸೋಷಿಯಲ್ ಮೀಡಿಯಾನಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ.

ಕೀರ್ತಿ ಸುರೇಶ್ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದ ‘ರಘುತಾತ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ. ತಮಿಳಿನ ‘ರಿವಾಲ್ವರ್ ರೀಟಾ’, ‘ಕನ್ನವೀದಿ’ ಸಿನಿಮಾಗಳು ಚಿತ್ರೀಕರಣ ಜಾರಿಯಲ್ಲಿದೆ. ಹಿಂದಿಯ ‘ಬೇಬಿ ಜಾನ್’ ಸಿನಿಮಾದ ಚಿತ್ರೀಕರಣವೂ ಚಾಲ್ತಿಯಲ್ಲಿದೆ. ಸಿನಿಮಾದಲ್ಲಿ ವರುಣ್ ಧವನ್ ಎದುರು ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ತೆಲುಗಿನ ಒಂದು ಸಿನಿಮಾಕ್ಕೂ ಎಸ್ ಎಂದಿರುವ ಕೀರ್ತಿ, ಬಾಲಿವುಡ್ ಸಿನಿಮಾ ಬಳಿಕ ಅದರಲ್ಲಿ ತೊಡಗಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ