ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಸಿನಿಮಾ, ನಟ-ನಟಿ, ತಂತ್ರಜ್ಞರಿಗೆ ಸಿಗುವ ಹಣವೆಷ್ಟು?

National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಗೋಷಣೆ ಆಗಿವೆ. 50ಕ್ಕೂ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಪ್ರಶಸ್ತಿಗಳನ್ನು ಗೆದ್ದ ನಟ-ನಟಿಯರಿಗೆ, ತಂತ್ರಜ್ಞರಿಗೆ, ಸಿನಿಮಾಗಳ ನಿರ್ಮಾಣ ಸಂಸ್ಥೆಗಳಿಗೆ ಎಷ್ಟು ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ? ಇಲ್ಲಿದೆ ಮಾಹಿತಿ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಸಿನಿಮಾ, ನಟ-ನಟಿ, ತಂತ್ರಜ್ಞರಿಗೆ ಸಿಗುವ ಹಣವೆಷ್ಟು?
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
Follow us
ಮಂಜುನಾಥ ಸಿ.
|

Updated on: Aug 24, 2023 | 7:49 PM

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಸಿನಿಮಾ, ನಟರು ಹಾಗೂ ತಂತ್ರಜ್ಞರ ಹೆಸರನ್ನು ಘೋಷಿಸಲಾಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಪ್ರಮಾಣ ಪತ್ರ ಪಡೆದ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಿ ಅವುಗಳಲ್ಲಿ ಅತ್ಯುತ್ತಮ ಸಿನಿಮಾ, ತಂತ್ರಜ್ಞರು ಹಾಗೂ ನಟ-ನಟಿಯರಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಪ್ರಶಸ್ತಿ ಗೆದ್ದವರಿಗೆ ಏನು ಸಿಗುತ್ತದೆ? ಸಿಗುವ ಹಣವೆಷ್ಟು? ಮಾಹಿತಿ ಇಲ್ಲಿದೆ.

ಪ್ರಶಸ್ತಿ ಗೆದ್ದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಕೆಲವು ಪ್ರಮುಖ ವಿಭಾಗದಲ್ಲಿ ಪ್ರಶಸ್ತಿ ಪಡೆದವರಿಗೆ ಸ್ವರ್ಣ ಕಮಲ ನೀಡಲಾಗುತ್ತದೆ ಜೊತೆಗೆ ನಗದು ಬಹುಮಾನವನ್ನೂ ಸಹ ನೀಡಲಾಗುತ್ತದೆ. ಕೆಲವು ವಿಭಾಗಗಳಿಗೆ ರಜತ ಕಮಲ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಸಿನಿಮಾಗಳಿಗೆ ಕೇವಲ ಪ್ರಮಾಣ ಪತ್ರವನ್ನು ಮಾತ್ರವೇ ನೀಡಲಾಗುತ್ತದೆ. ತೀರ್ಪುಗಾರರ ವಿಶೇಷ ಬಹುಮಾನ ಪಡೆದವರಿಗೆ ನಗದು ಬಹುಮಾನ ಸಿಗುತ್ತದೆ.

ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾಕ್ಕೆ 2.50 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಸ್ವರ್ಣಕಮಲ ಸಿಗಲಿದೆ. ಅತ್ಯುತ್ತಮ ಮನೊರಂಜನಾತ್ಮಕ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ‘ಆರ್​ಆರ್​ಆರ್’ ಸಿನಿಮಾಕ್ಕೆ 2 ಲಕ್ಷ ನಗದು ಹಾಗೂ ಸ್ವರ್ಣ ಕಮಲ ನೀಡಲಾಗುತ್ತದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದ ‘ಶೇರ್ಷಾ’ ಸಿನಿಮಾಕ್ಕೆ 2 ಲಕ್ಷ ನಗದು ಹಾಗೂ ರಜತ ಕಮಲ, ರಾಷ್ಟ್ರೀಯ ಏಕತೆ (ನ್ಯಾಷನಲ್ ಇಂಟಿಗ್ರೇಷನ್) ವಿಭಾಗದಲ್ಲಿ ಪ್ರಶಸ್ತಿ ಪಡೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ 1.50 ಲಕ್ಷ ನಗದು ಹಾಗೂ ರಜತ ಕಮಲ ದೊರಕಲಿದೆ. ಅತ್ಯುತ್ತಮ ಮಕ್ಕಳ ಸಿನಿಮಾ, ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಸಿನಿಮಾ, ಸಾಮಾಜಿಕ ಸಂದೇಶವುಳ್ಳ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳಿಗೆ 1.50 ಲಕ್ಷ ನಗದು ಹಾಗೂ ರಜತ ಕಮಲ ನೀಡಲಾಗುತ್ತದೆ.

ಇದನ್ನೂ ಓದಿ:69th National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪಟ್ಟಿ

ಇನ್ನು ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ತಲಾ ಒಂದು ಲಕ್ಷ ನಗದು ಹಾಗೂ ರಜತ ಕಮಲ ನೀಡಲಾಗುತ್ತದೆ. ಕನ್ನಡ ವಿಭಾಗದಲ್ಲಿ ಪ್ರಶಸ್ತಿ ಪಡೆದ 777 ಚಾರ್ಲಿ ಸಿನಿಮಾಕ್ಕೆ ಒಂದು ಲಕ್ಷ ರೂಪಾಯಿ ನಗದು ಹಾಗೂ ರಜತ ಕಮಲ ದೊರಕಲಿದೆ. ಒಂದೇ ಪ್ರಶಸ್ತಿಯನ್ನು ಇಬ್ಬರಿಗೆ ನೀಡಿದ್ದರೆ, ಪ್ರಶಸ್ತಿಯ ಸಂಪೂರ್ಣ ಮೊತ್ತ ಇಬ್ಬರಿಗೂ ಸಿಗುತ್ತದೆ. ಇರುವ ಬಹುಮಾನ ಮೊತ್ತವನ್ನು ತಲಾ ಇಷ್ಟೆಂದು ಹಂಚಲಾಗುವುದಿಲ್ಲ.

ಅತ್ಯುತ್ತಮ ನಟ, ನಟಿ ಸೇರಿದಂತೆ ಪ್ರಶಸ್ತಿ ಪಡೆದ ಎಲ್ಲ ನಟ, ತಂತ್ರಜ್ಞರಿಗೂ ರಜತ ಕಮಲದ ಜೊತೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್, ನಟಿ ಪ್ರಶಸ್ತಿ ಪಡೆದ ಆಲಿಯಾ ಭಟ್ ಹಾಗೂ ಕೃತಿ ಸೆನನ್ ಅವರಿಗೂ ತಲಾ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ. ಅತ್ಯುತ್ತಮ ಎಡಿಟಿಂಗ್, ಸೌಂಡ್ ಡಿಸೈನ್, ಮೇಕಪ್, ವಸ್ತ್ರಾಲಂಕಾರ ಇತರೆ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರಿಗೂ ಇದೇ ಮೊತ್ತದ ಹಣವನ್ನು ಬಹುಮಾನವಾನ್ನಾಗಿ ನೀಡಲಾಗುತ್ತದೆ. ಆದರೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ನಿಖಿಲ್ ಮಹಾಜನ್​ಗೆ ಮಾತ್ರ 2.50 ಲಕ್ಷ ನಗದು ಬಹುಮಾನ ಸಿಗಲಿದೆ.

ಇನ್ನು ನಾನ್ ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾಕ್ಕೆ 1.50 ಲಕ್ಷ ನಗದು ಹಾಗೂ ಸ್ವರ್ಣ ಕಮಲ ನೀಡಲಾಗುತ್ತದೆ. ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿ ಪಡೆದವರಿಗೂ 1.50 ಲಕ್ಷ ನಗದು ನೀಡಲಾಗುತ್ತದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದ ನಾನ್ ಫೀಚರ್ ಸಿನಿಮಾಕ್ಕೆ 1 ಲಕ್ಷ, ಅತ್ಯುತ್ತಮ ಹೊಸ ನಿರ್ದೇಶಕ ವಿಭಾಗಕ್ಕೆ 75 ಸಾವಿರ, ಅತ್ಯುತ್ತಮ ಸಿನಿಮಾ ಪುಸ್ತಕ, ಅತ್ಯುತ್ತಮ ಸಿನಿಮಾ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರಿಗೂ 75 ಸಾವಿರ ನಗದು ಬಹುಮಾನ ಸಿಗಲಿದೆ.

ಇನ್ನುಳಿದಂತೆ ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಇನ್ನೆಲ್ಲ ತಂತ್ರಜ್ಙರು, ನಟರಿಗೆ 50 ಸಾವಿರ ರೂಪಾಯಿ ಬಹುಮಾನ ಹಾಗೂ ರಜತ ಕಮಲ ನೀಡಲಾಗುತ್ತದೆ. ಅನ್ವೇಷಣಾ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕನ್ನಡದ ಆಯುಷ್ಮಾನ್ ಸಿನಿಮಾಕ್ಕೂ 50,000 ಸಾವಿರ ನಗದು ಬಹುಮಾನ ದೊರಕಲಿದೆ. ಆದರೆ ಇದೇ ನಾನ್ ಫೀಚರ್ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಅನಿರುದ್ಧ್ ನಿರ್ದೇಶನದ ‘ಬಾಳೆ ಬಂಗಾರ’ ಡಾಕ್ಯುಮೆಂಟರಿಗೆ ಪ್ರಮಾಣ ಪತ್ರ ಮಾತ್ರವೇ ಸಿಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್