AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್ 2’ ಮುಗಿಸಿ ಖಾಲಿ ಕೈನಲ್ಲಿ ಹೊರಟ ಹೃತಿಕ್ ರೋಷನ್?

Rajinikanth-Hritik Roshan: ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾನಲ್ಲಿಯೂ ಸಾಕಷ್ಟು ಅತಿಥಿ ನಟರಿದ್ದಾರೆ. ಈ ಸಿನಿಮಾಕ್ಕೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅತಿಥಿ ನಟರಾಗಿ ನಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ, ಇದೀಗ ಆ ಪಾತ್ರದಲ್ಲಿ ನಟ ಹೃತಿಕ್ ರೋಷನ್ ನಟಿಸಿದ್ದಾರೆ. ಶೂಟಿಂಗ್ ಮುಗಿಸಿ ಹೃತಿಕ್ ರೋಷನ್ ಮುಂಬೈಗೆ ಮರಳಿದ್ದಾರೆ, ಆದರೆ ಖಾಲಿ ಕೈನಲ್ಲಿ.

‘ಜೈಲರ್ 2’ ಮುಗಿಸಿ ಖಾಲಿ ಕೈನಲ್ಲಿ ಹೊರಟ ಹೃತಿಕ್ ರೋಷನ್?
Hritik Roshna
ಮಂಜುನಾಥ ಸಿ.
|

Updated on: Jun 26, 2026 | 7:37 PM

Share

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ‘ಜೈಲರ್’ ಸಿನಿಮಾ ಅತಿಥಿ ಪಾತ್ರಗಳಿಂದಲೇ ಸೂಪರ್ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್ ಇನ್ನಿತರರು ಮಾಡಿದ್ದ ಅತಿಥಿ ಪಾತ್ರ ಸಖತ್ ಹಿಟ್ ಆಗಿತ್ತು. ಹಾಗಾಗು ‘ಜೈಲರ್ 2’ ಸಿನಿಮಾನಲ್ಲಿಯೂ ಸಾಕಷ್ಟು ಅತಿಥಿ ನಟರಿದ್ದಾರೆ. ಈ ಸಿನಿಮಾಕ್ಕೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅತಿಥಿ ನಟರಾಗಿ ನಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ, ಇದೀಗ ಆ ಪಾತ್ರದಲ್ಲಿ ನಟ ಹೃತಿಕ್ ರೋಷನ್ ನಟಿಸಿದ್ದಾರೆ. ಶೂಟಿಂಗ್ ಮುಗಿಸಿ ಹೃತಿಕ್ ರೋಷನ್ ಮುಂಬೈಗೆ ಮರಳಿದ್ದಾರೆ, ಆದರೆ ಖಾಲಿ ಕೈನಲ್ಲಿ.

ಕೆಲ ಮೂಲಗಳ ಪ್ರಕಾರ, ‘ಜೈಲರ್ 2’ ಸಿನಿಮಾನಲ್ಲಿ ನಟಿಸಲು ಹೃತಿಕ್ ರೋಷನ್ ಯಾವುದೇ ಸಂಭಾವನೆ ಪಡೆದಿಲ್ಲವಂತೆ. ರಜನೀಕಾಂತ್ ಅವರ ಬಗ್ಗೆ ಹೃತಿಕ್ ರೋಷನ್ ಅವರಿಗೆ ಅಪಾರ ಗೌರವ ಮತ್ತು ಅಭಿಮಾನ. ರಜನೀಕಾಂತ್ ಅವರು ನಟಿಸಿದ್ದ ಹಿಂದಿ ಸಿನಿಮಾ ‘ಭಗವಾನ್ ದಾದ’ ನಲ್ಲಿ ಹೃತಿಕ್ ರೋಷನ್ ಅವರ ಸಾಕುಮಗನ ಪಾತ್ರದಲ್ಲಿ ಹೃತಿಕ್ ರೋಷನ್ ನಟಿಸಿದ್ದರು. ಹೃತಿಕ್ ಪಾಲಿಗೆ ಅದು ಮೊಟ್ಟ ಮೊದಲ ‘ಪಾತ್ರ’. ಅದಕ್ಕೆ ಮುಂಚೆ ತಮ್ಮ ತಂದೆ ನಿರ್ದೇಶಿಸಿದ ಸಿನಿಮಾಗಳ ಹಾಡುಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದರು ಅಷ್ಟೆ. ಆ ಸಿನಿಮಾ ಬಿಡುಗಡೆ ಆಗಿ 40 ವರ್ಷಗಳಾಗಿವೆ.

ಇದೀಗ 40 ವರ್ಷಗಳ ಬಳಿಕ ಹೃತಿಕ್ ರೋಷನ್ ಮತ್ತು ರಜನೀಕಾಂತ್ ಮತ್ತೆ ಒಟ್ಟಿಗೆ ನಟಿಸಿದ್ದಾರೆ. ಇದೇ ಕಾರಣಕ್ಕೆ ಹೃತಿಕ್ ರೋಷನ್ ಅವರು ‘ಜೈಲರ್ 2’ ಸಿನಿಮಾನಲ್ಲಿ ನಟಿಸಲು ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಚಿತ್ರೀಕರಣದಲ್ಲಿ ಸುಮಾರು ಎರಡು ದಿನಗಳ ಕಾಲ ಹೃತಿಕ್ ರೋಷನ್ ಭಾಗಿ ಆಗಿದ್ದರು. ಎರಡು ದಿನಗಳಲ್ಲಿ ಸಣ್ಣ ಆಕ್ಷನ್ ದೃಶ್ಯ ಮತ್ತು ಒಂದು ಎಮೋಷನಲ್ ದೃಶ್ಯದಲ್ಲಿ ಸಹ ಅವರು ನಟಿಸಿದ್ದಾರಂತೆ.

ಇದನ್ನೂ ಓದಿ:ರಜನಿಕಾಂತ್ 173ನೇ ಚಿತ್ರದ ಟೈಟಲ್ ರಿವೀಲ್; ರಕ್ತಸಿಕ್ತ ಚಾಕು ಹಿಡಿದು ಬಂದ ‘ಧರ್ಮನ್’

40 ವರ್ಷಗಳ ಹಿಂದೆ ತಂದೆ-ಸಾಕು ಮಗನಾಗಿ ನಟಿಸಿದ್ದ ಹೃತಿಕ್ ರೋಷನ್ ಮತ್ತು ರಜನೀಕಾಂತ್ ಈಗ ‘ಜೈಲರ್ 2’ ಸಿನಿಮಾನಲ್ಲಿಯೂ ತಂದೆ-ಸಾಕು ಮಗನ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾನಲ್ಲಿ ಇಬ್ಬರ ನಡುವೆ ಒಂದು ಭಾವುಕ ಸನ್ನಿವೇಶ ಸಹ ಇರಲಿದ್ದು, ಆ ದೃಶ್ಯ ಇಡೀ ಸಿನಿಮಾದ ಹೈಲೆಟ್ ಎನ್ನಲಾಗುತ್ತಿದೆ. ಒಟ್ಟಾರೆ, ರಜನೀಕಾಂತ್ ಮೇಲಿನ ಗೌರವಕ್ಕೆ ಹೃತಿಕ್ ಅವರು ಸಂಭಾವನೆ ಪಡೆಯದೆ ನಟಿಸಿದ್ದಾರೆ. ಆದರೆ ಸಿನಿಮಾದ ನಿರ್ಮಾಪಕರಾದ ಕಲಾನಿಧಿ ಮಾರನ್, ಹೃತಿಕ್ ಅವರಿಗೆ ದೊಡ್ಡ, ಮೌಲ್ಯಯುತವಾದ ಉಡುಗೊರೆಯನ್ನೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್