AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದು ಚಾನ್ಸ್ ಕೊಡಿ’: ಬಿಗ್​​ಬಾಸ್​​ ಎಂಟ್ರಿಗೆ ಅವಕಾಶ ಕೇಳಿದ ಪೊಲೀಸ್ ಅಧಿಕಾರಿ

Bigg Boss new season: ಇದೀಗ ಪೊಲೀಸ್ ಅಧಿಕಾರಿಯೊಬ್ಬರು, ತನ್ನನ್ನು ಈ ಬಾರಿ ಬಿಗ್​​ಬಾಸ್ ಸ್ಪರ್ಧಿಯಾಗಿ ಸೇರಿಸಿಕೊಳ್ಳಿ, ನನಗೆ ಬಿಗ್​​ಬಾಸ್ ಸ್ಪರ್ಧಿಯಾಗಿ ಹೋಗಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸಮವಸ್ತ್ರ ಧರಿಸಿಕೊಂಡು ವಿಡಿಯೋ ಸಹ ಮಾಡಿ ಹಂಚಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗೆ ಬಿಗ್​​ಬಾಸ್ ಮನೆ ಪ್ರವೇಶಿಸುವ ಅವಕಾಶ ಸಿಗಲಿದೆಯೇ?

‘ಒಂದು ಚಾನ್ಸ್ ಕೊಡಿ’: ಬಿಗ್​​ಬಾಸ್​​ ಎಂಟ್ರಿಗೆ ಅವಕಾಶ ಕೇಳಿದ ಪೊಲೀಸ್ ಅಧಿಕಾರಿ
Bigg Boss Telugu
ಮಂಜುನಾಥ ಸಿ.
|

Updated on: Jun 26, 2026 | 6:34 PM

Share

ಕನ್ನಡ ಬಿಗ್​​ಬಾಸ್ (Kannada Bigg Boss) ಮತ್ತು ಪೊಲೀಸರಿಗೆ ಬಲು ಆಪ್ತ ನಂಟು. ಆಗೊಮ್ಮೆ, ಈಗೊಮ್ಮೆ ಪೊಲೀಸರು ಬಿಗ್​​ಬಾಸ್​​ ಶೋಗೆ ನೊಟೀಸ್ ನೀಡುವುದು, ಬಿಗ್​​ಬಾಸ್ ಮನೆ ಪ್ರವೇಶಿಸಿ ಸ್ಪರ್ಧಿಯ ಬಂಧಿಸುವುದು ಸಹ ನಡೆದಿದೆ. ಸೀಸನ್​​ ಒಂದರಲ್ಲಿ ಸ್ಪರ್ಧಿ ಆಗಿದ್ದ ವರ್ತೂರು ಸಂತೋಶ್ ಅನ್ನು ಬಂಧಿಸಿದ್ದರು, ಕೆಲ ಸಮಯದಲ್ಲಿ ನೊಟೀಸ್​​ಗಳನ್ನು ಸಹ ನೀಡಿದ್ದರು. ಆದರೆ ಇದೀಗ ಪೊಲೀಸ್ ಅಧಿಕಾರಿಯೊಬ್ಬರು, ತನ್ನನ್ನು ಈ ಬಾರಿ ಬಿಗ್​​ಬಾಸ್ ಸ್ಪರ್ಧಿಯಾಗಿ ಸೇರಿಸಿಕೊಳ್ಳಿ, ನನಗೆ ಬಿಗ್​​ಬಾಸ್ ಸ್ಪರ್ಧಿಯಾಗಿ ಹೋಗಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸಮವಸ್ತ್ರ ಧರಿಸಿಕೊಂಡು ವಿಡಿಯೋ ಸಹ ಮಾಡಿ ಹಂಚಿಕೊಂಡಿದ್ದಾರೆ. ಆದರೆ ಇದು ನಡೆದಿರುವುದು ಕರ್ನಾಟಕದಲ್ಲಿ ಅಲ್ಲ ಬದಲಿಗೆ ನೆರೆಯ ಆಂಧ್ರ ಪ್ರದೇಶದಲ್ಲಿ.

ತೆಲುಗು ಬಿಗ್​​ಬಾಸ್​​ನ ಹೊಸ ಸೀಸನ್ ಆರಂಭವಾಗುತ್ತಿದೆ. ಇದೀಗ ಸ್ಪರ್ಧಿಗಳ ಆಯ್ಕೆ ಚಾಲ್ತಿಯಲ್ಲಿದೆ. ಕನ್ನಡದಲ್ಲಿ ಈ ಬಾರಿ ಜನ ಸಾಮಾನ್ಯರನ್ನು ಬಿಗ್​​ಬಾಸ್ ಮನೆಗೆ ಸ್ಪರ್ಧಿಗಳಾಗಿ ಕಳಿಸಲಾಗುತ್ತಿದೆ, ಅಂತೆಯೇ ತೆಲುಗು ಬಿಗ್​​ಬಾಸ್​​ನಲ್ಲಿ ಸಹ ಸೆಲೆಬ್ರಿಟಿಗಳಲ್ಲದವರಿಗೂ ಅವಕಾಶ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮನ್ನು ಬಿಗ್​​ಬಾಸ್ ಮನೆಗೆ ಕಳಿಸಿ ಎಂದು ಮನವಿ ಮಾಡುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆ, ಗದಿವೇಮುಲದ ಪೊಲೀಸ್ ಠಾಣೆಯ ಎಸ್​​ಐ ಆಗಿರುವ ನಾಗಾರ್ಜುನ ರೆಡ್ಡಿ ಎಂಬುವರು ಇದೀಗ ತೆಲುಗು ಬಿಗ್​​ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಅವಕಾಶ ನೀಡಬೇಕು ಎಂದು ಬಿಗ್​​ಬಾಸ್ ಆಯೋಜಕರಲ್ಲಿ ಕೇಳಿ ಕೊಂಡಿದ್ದಾರೆ. ಸಮವಸ್ತ್ರ ಧರಿಸಿ ವಿಡಿಯೋ ಮಾಡಿರುವ ನಂದೀಶ್ ರೆಡ್ಡಿ, ‘ಬಿಗ್​​ಬಾಸ್ ಮನೆಗೆ ಹೋಗಿ, ನನ್ನ ನಿಜ ವ್ಯಕ್ತಿತ್ವ, ನನ್ನಲ್ಲಿರುವ ಪ್ರತಿಭೆಯನ್ನು ಜನರಿಗೆ ತೋರಿಸಬೇಕು ಎಂಬುದು ನನ್ನ ಆಸೆ, ಹಾಗಾಗಿ ನನಗೆ ಒಂದು ಅವಕಾಶ ಕೊಡಬೇಕು’ ಎಂದು ಆಯೋಜಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು

‘ತೆಲುಗು ಬಿಗ್​​ಬಾಸ್ ಕೇವಲ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರವೇ ಅಲ್ಲದೆ ಗ್ರಾಮೀಣ ಪ್ರತಿಭಾವಂತರಿಗೂ ಸಹ ಅವಕಾಶ ನೀಡುತ್ತಾ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ. ನಾನೂ ಸಹ ಗ್ರಾಮೀಣ ಭಾಗದವನಾಗಿದ್ದು, ನನಗೆ ಅವಕಾಶ ಕೊಟ್ಟಲ್ಲಿ, ನನ್ನ ಧೈರ್ಯ, ಆತ್ಮವಿಶ್ವಾಸ ಮತ್ತು ಪ್ರತಿಭೆಯಿಂದ ನಾನು ಆಟವಾಡಿ ರಾಜ್ಯದ ಜನರ ಗಮನ ಸೆಳೆಯುತ್ತೇನೆ. ವಿಜೇತನಾಗುವ ವಿಶ್ವಾಸವೂ ನನ್ನಲ್ಲಿದೆ’ ಎಂದಿದ್ದಾರೆ.

ಇದೀಗ ಈ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ಕೆಲವರು ಈ ಅಧಿಕಾರಿಗೆ ಅವಕಾಶ ಕೊಡಬೇಕು ಎಂದು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಹೀಗೆ ಸಮವಸ್ತ್ರ ಧರಿಸಿ ವಿಡಿಯೋ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳು ಹೀಗೆ ಖಾಸಗಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಪ್ರಶ್ನೆಯನ್ನು ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!