ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಬಸ್ ಚಾಲಕ ರಾಜ್ ಬಹದ್ದೂರ್ ಅವರಿಗೆ ಸಮರ್ಪಿಸಿದ ರಜನಿಕಾಂತ್​!

ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ರಜನಿ ಕರುನಾಡಿನಲ್ಲಿ ಹಲವು ಉದ್ಯೋಗಗಳನ್ನು ಪ್ರಯತ್ನಿಸಿದರು. ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್​ ಆಗಿ ಕೆಲಸ ಮಾಡುವುದಕ್ಕೂ ಮುನ್ನ ಕೂಲಿಯಾಗಿಯೂ ಶ್ರಮಿಸಿದ್ದರು.

ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಬಸ್ ಚಾಲಕ ರಾಜ್ ಬಹದ್ದೂರ್ ಅವರಿಗೆ ಸಮರ್ಪಿಸಿದ ರಜನಿಕಾಂತ್​!
ರಜನೀಕಾಂತ್
Follow us
ರಾಜೇಶ್ ದುಗ್ಗುಮನೆ
|

Updated on: Apr 02, 2021 | 4:45 PM

ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್​ಗೆ 51ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ದೊರೆತಿದೆ. ಅವರು ಪ್ರಶಸ್ತಿ ಪಡೆದ ಬೆನ್ನಲ್ಲೇ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅವರಿಗೆ ಶುಭ ಹಾರೈಸಿದ್ದರು. ಈಗ ಅವರು ಪ್ರಶಸ್ತಿ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಈ ಪ್ರಶಸ್ತಿಯನ್ನು ನನ್ನ ಸ್ನೇಹಿತ ಮತ್ತು ಬಸ್ ಚಾಲಕ ರಾಜ್ ಬಹದ್ದೂರ್ ಅವರಿಗೆ ಅರ್ಪಿಸುತ್ತೇನೆ. ಅವರು ನನ್ನ ನಟನಾ ಪ್ರತಿಭೆಯನ್ನು ಗುರುತಿಸಿದ ಮೊದಲ ವ್ಯಕ್ತಿ. ಆರಂಭದಲ್ಲಿ ಅವರು ನನ್ನನ್ನು ಪ್ರೋತ್ಸಾಹಿಸಿದರು. ನನ್ನ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗೇಕ್ವಾಡ್ ನನಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ಗುರು ಕೆ.ಬಾಲಚಂದರ್ ಅವರು ಈ ರಜನಿಕಾಂತ್​ ಅವರನ್ನು ಹುಟ್ಟು ಹಾಕಿದವರು ಎಂದಿದ್ದಾರೆ.

ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ರಜನಿ ಕರುನಾಡಿನಲ್ಲಿ ಹಲವು ಉದ್ಯೋಗಗಳನ್ನು ಪ್ರಯತ್ನಿಸಿದರು. ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್​ ಆಗಿ ಕೆಲಸ ಮಾಡುವುದಕ್ಕೂ ಮುನ್ನ ಕೂಲಿಯಾಗಿಯೂ ಶ್ರಮಿಸಿದ್ದರು. ನಂತರ ಆವಲಹಳ್ಳಿ ಟು ಮೆಜೆಸ್ಟಿಕ್​- ರೂಟ್​ ನಂ.10ರಲ್ಲಿ ಕಂಡಕ್ಟರ್​ ಆಗಿ ಕೆಲಸ ಆರಂಭಿಸಿದರು. ಆಗಲೂ ನಟನೆಯ ಕಡೆಗೆ ಅವರ ತುಡಿತ ಹೆಚ್ಚಾಗಿತ್ತು. ಮದ್ರಾಸ್​ ಫಿಲ್ಮ್​ ಇನ್ಸ್​ಟಿಟ್ಯೂಟ್​ನಲ್ಲಿ ಅಭಿನಯ ಕಲಿಯಬೇಕು ಎಂಬ ಆಸೆ ಚಿಗುರಿತು. ಅದಕ್ಕೆ ಅವರ ಕುಟುಂಬದವರ ಬೆಂಬಲ ಸಿಗಲಿಲ್ಲ. ಆದರೆ ಬಿಎಂಟಿಸಿ ಸಹೋದ್ಯೋಗಿ ರಾಜ್​ ಬಹದ್ದೂರ್​ ಅವರು ಹಣ ಸಹಾಯ ಮಾಡಿ, ಹುರಿದುಂಬಿಸಿದ್ದರಿಂದ ರಜನಿ ಬದುಕಿನ ಪಥ ಬದಲಾಯಿತು. ಚೆನ್ನೈ ಕಡೆಗೆ ಅವರು ಪ್ರಯಾಣ ಬೆಳೆಸಿದರು. ಇದರಿಂದ ಅವರು ಚಿತ್ರರಂಗದಲ್ಲಿ ಬೆಳೆಯಲು ಸಹಕಾರಿ ಆಯಿತು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿನೆಮಾ ರಂಗದವರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಸಹಕಾರಿಯಾದ ಕಲಾವಿದರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಗಾಯಕಿ ಆಶಾ ಭೋಸ್ಲೆ, ಚಲನಚಿತ್ರ ನಿರ್ಮಾಪಕ ಸುಭಾಷ್ ಘೈ, ನಟ ಮೋಹನ್ ಲಾಲ್, ಗಾಯಕ-ಸಂಯೋಜಕ ಶಂಕರ್ ಮಹಾದೇವನ್ ಮತ್ತು ಹಿರಿಯ ನಟ ಬಿಸ್ವಾಜೀತ್ ಚಟರ್ಜಿ ತೀರ್ಪುಗಾರರಾಗಿದ್ದರು.

ಇದನ್ನೂ ಒದಿ: ಡಾ.ರಾಜ್ ಕುಮಾರ್ ನಂತ್ರ ಮತ್ತೊಬ್ಬ ಕನ್ನಡಿಗ ರಜನಿಕಾಂತ್​ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ