‘ಎ ಹಾಗೂ ಓಂ ಚಿತ್ರವನ್ನು ನಾನು ಮಾಡಿದ್ದರೆ ಈಗಾಗಲೇ ನಿವೃತ್ತಿ ಪಡೆದಿರುತ್ತಿದ್ದೆ’; ‘ಪುಷ್ಪ’ ನಿರ್ದೇಶಕ ಸುಕುಮಾರ್

ಸುಕುಮಾರ್ ಅವರು ಉಪೇಂದ್ರ ನಿರ್ದೇಶನದ 'ಎ', 'ಓಂ', ಮತ್ತು 'ಉಪೇಂದ್ರ' ಚಿತ್ರಗಳನ್ನು ಹೊಗಳಿದ್ದಾರೆ. ಈ ಚಿತ್ರಗಳು ಅವರನ್ನು ಬೆರಗುಗೊಳಿಸಿವೆ ಎಂದು ಹೇಳಿದ್ದಾರೆ. ಅವರು ಈ ಚಿತ್ರಗಳಿಂದ ಸ್ಫೂರ್ತಿ ಪಡೆದು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಎ ಹಾಗೂ ಓಂ ಚಿತ್ರವನ್ನು ನಾನು ಮಾಡಿದ್ದರೆ ಈಗಾಗಲೇ ನಿವೃತ್ತಿ ಪಡೆದಿರುತ್ತಿದ್ದೆ’; ‘ಪುಷ್ಪ’ ನಿರ್ದೇಶಕ ಸುಕುಮಾರ್
ಸುಕುಮಾರ್-ಉಪೇಂದ್ರ

Updated on: May 29, 2025 | 7:28 AM

ಉಪೇಂದ್ರ (Upendra) ನಿರ್ದೇಶನ ಮಾಡಿದ್ದ ‘ಎ’, ‘ತರ್ಲೆ ನನ್ಮಗ’, ‘ಓಂ’, ‘ಉಪೇಂದ್ರ ಮೊದಲಾದ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಈ ಸಿನಿಮಾಗಳು ಪರಭಾಷಾ ನಿರ್ದೇಶಕರಿಗೂ ಸ್ಫೂರ್ತಿ. ಈ ಸಿನಿಮಾನ ನೋಡಿ ಹಾಡಿಹೊಗಳಿದವರು ಅದೆಷ್ಟು ಮಂದಿಯೋ. ಈಗ ಈ ಚಿತ್ರದ ಬಗ್ಗೆ ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಮಾತನಾಡಿದ್ದಾರೆ. ಪಕ್ಕದಲ್ಲೇ ಇದ್ದ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.

ಅರ್ಜುನ್ ಸರ್ಜಾ ಅವರು ‘ಸೀತಾ ಪಯಣಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯಾ ಅರ್ಜುನ್ ನಟಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆಯಿತು. ಈ ಚಿತ್ರದ ಟೀಸರ್ ಲಾಂಚ್ ವೇಳೆ ಸುಕುಮಾರ್ ಹಾಗೂ ಕನ್ನಡದ ನಟ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಉಪೇಂದ್ರ ಬಗ್ಗೆ ಸುಕುಮಾರ್ ಮೆಚ್ಚುಗೆಯ ಮಾತನ್ನು ಆಡಿದರು.

ಇದನ್ನೂ ಓದಿ
ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ
ಕಮಲ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಸೆಲೆಬ್ರಿಟಿಗಳ ಮೌನ
ನಟಿ ದೀಪಿಕಾಗೆ ಕ್ಯಾನ್ಸರ್; ಹೊಟ್ಟೆಯಲ್ಲಿದೆ ಟೆನಿಸ್ ಬಾಲ್ ಆಕಾರದ ಗಡ್ಡೆ
RCB ಗೆಲುವಿನ ಖುಷಿಯಲ್ಲಿ ವಿರಾಟ್​ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ

‘ಉಪೇಂದ್ರ ತಮ್ಮ ಚಿತ್ರಗಳಿಗೆ ತರುವ ಹುಚ್ಚುತನ ಮತ್ತು ಉನ್ಮಾದವನ್ನು ನಾನು ಯಾವುದೇ ನಿರ್ದೇಶಕರಲ್ಲಿಯೂ ನೋಡಿಲ್ಲ. ಓಂ, ಎ, ಮತ್ತು ಉಪೇಂದ್ರ ಸಿನಿಮಾ ನನ್ನನ್ನು ಬೆರಗುಗೊಳಿಸಿದವು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅವುಗಳನ್ನು ನಿರ್ದೇಶಿಸಿದ್ದರೆ ನಾನು ಸಂತೋಷದಿಂದ ನಿವೃತ್ತಿ ಹೊಂದುತ್ತಿದ್ದೆ. ಅವು ಅಷ್ಟೊಂದು ಅದ್ಭುತವಾಗಿ ಮೂಡಿ ಬಂದಿದ್ದವು’ ಎಂದಿದ್ದಾರೆ ಸುಕುಮಾರ್. ಅಂದರೆ ಈ ಮೂರು ಚಿತ್ರಗಳಿಂದ ಅವರಿಗೆ ತೃಪ್ತಿಯುತ ಭಾವನೆ ಕಾಡುತ್ತಿತ್ತು ಎಂಬುದು ಅವರ ಮಾತಿನ ಅರ್ಥ.

‘ಎಲ್ಲಾ ನಿರ್ದೇಶಕರು ಅವರಿಂದ ಸ್ಫೂರ್ತಿ ಪಡೆಯುತ್ತಾರೆ. ನನ್ನ ಸಿನಿಮಾಗಳಲ್ಲಿ ಸ್ಕ್ರೀನ್​ಪ್ಲೇ ಅಷ್ಟು ಉತ್ತಮವಾಗಿ ಮೂಡಿ ಬರುತ್ತಿದೆ ಎಂದರೆ ಅದಕ್ಕೆ ಈ ಮೂರು ಚಿತ್ರಗಳು (ಎ,ಉಪೇಂದ್ರ ಹಾಗೂ ಓಂ) ಕಾರಣ. ನಾನು ಯಾವುದೇ ನಾಚಿಕೆ ಇಲ್ಲದೆ ಅವರಿಂದ ಸ್ಫೂರ್ತಿ ಪಡೆದು ಅಳವಡಿಸಿಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪುಷ್ಪ ರಾಜ್ ಪಾತ್ರಕ್ಕೆ ನಿಜವಾದ ಸ್ಮಗ್ಲರ್ ಸ್ಫೂರ್ತಿ; ಇಂಟರೆಸ್ಟಿಂಗ್ ವಿಷಯ ಹೇಳಿದ ಸುಕುಮಾರ್

ಸುಕುಮಾರ್ ಹಾಗೂ ರಾಮ್ ಚರಣ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಸುಕುಮಾರ್ ಬ್ಯುಸಿ ಇದ್ದಾರೆ. ರಾಮ್ ಚರಣ್ ಅವರು ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಾದ ಬಳಿಕ ಅವರು ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಉಪೇಂದ್ರ ಅವರು ‘ಎ’ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:27 am, Thu, 29 May 25