ತಮಿಳುನಾಡು: ನಿರ್ಮಾಪಕರು ವಿತರಕರ ಮನೆ ಮೇಲೆ ಐಟಿ ದಾಳಿ, 200 ಕೋಟಿಗೂ ಅಧಿಕ ಅಘೋಷಿತ ಆದಾಯ ಪತ್ತೆ
ಚೆನ್ನೈ, ಮಧುರೈ, ಕೊಯಮತ್ತೂರು ಮತ್ತು ವೆಲ್ಲೂರ್‌ನಲ್ಲಿ ನಡೆದ ಶೋಧಕಾರ್ಯದಲ್ಲಿ ಒಟ್ಟು 200 ಕೋಟಿಗೂ ಅಧಿಕ ಅಘೋಷಿತ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು, ನಗದು, ಆಭರಣ ಪತ್ತೆಯಾಗಿದೆ.

ತಮಿಳನಾಡು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಕೆಲವು ಚಿತ್ರ ನಿರ್ಮಾಪಕರು, ವಿತರಕರು ಮತ್ತು ಹಣಕಾಸುದಾರರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ಆಗಸ್ಟ್ 2 ರಂದು ದಾಳಿ ನಡೆಸಿದ್ದಾರೆ. ಚೆನ್ನೈ, ಮಧುರೈ, ಕೊಯಮತ್ತೂರು ಮತ್ತು ವೆಲ್ಲೂರಿನ ಸುಮಾರು 40 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಲೆಕ್ಕಕ್ಕೆ ಸಿಗದ ಹಣ ಅಕ್ರಮ ವರ್ಗಾವಣೆ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಶೋಧ ಕಾರ್ಯಾಚರಣೆ ವೇಳೆ ಕೆಲ ರಹಸ್ಯ ಮತ್ತು ಗುಪ್ತ ಸ್ಥಳಗಳ ಬಗ್ಗೆಯೋ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ.
ಚೆನ್ನೈ, ಮಧುರೈ, ಕೊಯಮತ್ತೂರು ಮತ್ತು ವೆಲ್ಲೂರ್‌ನಲ್ಲಿ ನಡೆದ ಶೋಧಕಾರ್ಯದಲ್ಲಿ ಒಟ್ಟು 200 ಕೋಟಿಗೂ ಅಧಿಕ ಅಘೋಷಿತ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು, ನಗದು, ಆಭರಣ ಪತ್ತೆಯಾಗಿದೆ. 26 ಕೋಟಿ ನಗದು ಮತ್ತು 13 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣ ಅಕ್ರಮ ವರ್ಗಾವಣೆ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಉಪಕರಣ ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳು ತೆರಿಗೆ ವಿನಾಯಿತಿ ಪಡೆಯಲು, ಸಿನಿಮಾದಿಂದ ಬಂದ ಆದಾಯವು ಕಡಿಮೆ ಎಂದು ತೋರಿಸಿದ್ದನ್ನು ಪತ್ತೆಹಚ್ಚಲಾಗಿದೆ.
ಅಕ್ರಮವಾಗಿ ಸಂಗ್ರಹಿಸಿದ ಅದಾಯವನ್ನು ಅಘೋಷಿತ ಹೂಡಿಕೆಗೆ ಮತ್ತು ಅಷಿಸಿದ ವಾವತಿಗೆ ಬಳಕೆ ಮಾಡಲಾಗಿದೆ. ಚಿತ್ರಮಂದಿರಗಳಿಂದ ದಾಖಲೆಗಳನ್ನು ನಿರ್ವಹಿಸದೆ ಹಣವನ್ನು ಸಂಗ್ರಹಿಸಿದೆ ಎಂದು ಸಿನಿಮಾ ವಿತರಕರಿಂದ ವಶಪಡಿಸಿಕೊಂಡ ದಾಖಲೆಗಳಿಂದ ತಿಳಿದುಬಂದಿದೆ. ‘ಚಿತ್ರಮಂದಿರಗಳಿಂದ ಕಡಿಮೆ ಆದಾಯ ಬಂದಿದೆ’ ಎಂದು ತೋರಿಸಲಾಗುತ್ತದೆ ಎಂದು ಆದಾಯ ಇಲಾಖೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
Published On - 11:18 pm, Tue, 9 August 22




