‘ಕೂಲಿ’, ‘ವಾರ್ 2’ ಎರಡನೇ ದಿನದ ಗಳಿಕೆ ಇಷ್ಟೊಂದಾ? ಅಬ್ಬಬ್ಬಾ ಊಹಿಸಲೂ ಸಾಧ್ಯವಿಲ್ಲ

ಆಗಸ್ಟ್ 14ರಂದು ಬಿಡುಗಡೆಯಾದ ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳು ಎರಡು ದಿನಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿವೆ. ರಜನಿಕಾಂತ್ ನಟಿಸಿರುವ ‘ಕೂಲಿ’ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ‘ವಾರ್ 2’ ಸಿನಿಮಾದ ಕಥೆ ಕೂಡ ಅಷ್ಟೇ. ಇವು ಅಭಿಮಾನಿಗಳ ಬೆಂಬಲದಿಂದ ಭರ್ಜರಿ ಗಳಿಕೆ ಕಂಡಿವೆ.

‘ಕೂಲಿ’, ‘ವಾರ್ 2’ ಎರಡನೇ ದಿನದ ಗಳಿಕೆ ಇಷ್ಟೊಂದಾ? ಅಬ್ಬಬ್ಬಾ ಊಹಿಸಲೂ ಸಾಧ್ಯವಿಲ್ಲ
ಕೂಲಿ ಕಲೆಕ್ಷನ್

Updated on: Aug 16, 2025 | 6:32 AM

‘ಕೂಲಿ’ (Coolie Collection) ಹಾಗೂ ‘ವಾರ್ 2’ ಸಿನಿಮಾಗಳು ಸ್ವತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 14ರಂದು ರಿಲೀಸ್ ಆದವು. ಈ ಎರಡೂ ಸಿನಿಮಾಗಳ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎರಡೂ ಸಿನಿಮಾಗೆ ಸಿಕ್ಕಿದ್ದು ಮಿಶ್ರ ಪ್ರತಿಕ್ರಿಯೆ ಮಾತ್ರ. ಆದಾಗ್ಯೂ ಸಿನಿಮಾಗಳು ನೂರು ಕೋಟಿ ರೂಪಾಯಿ ಕ್ಷಬ್ ಸೇರಿವೆ. ಅದು ಕೂಡ ಕೇವಲ ಎರಡು ದಿನಕ್ಕೆ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಆಮಿರ್ ಖಾನ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್ ಹೀರೋಗಳು ಇದ್ದಾರೆ. ಈ ಕಾರಣದಿಂದಲೇ ಸಿನಿಮಾ ಎಲ್ಲರ ಗಮನ ಸೆಳೆಯುವ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಯನ್ನೂ ಸಿನಿಮಾ ತಕ್ಕ ಮಟ್ಟಿಗೆ ಮಾತ್ರ ತಲುಪಿದೆ. ಆಗಸ್ಟ್ 15ರ ಕಲೆಕ್ಷನ್ ಲೆಕ್ಕ ಬಂದಿದ್ದು ಎಲ್ಲರೂ ಹೌಹಾರಿದ್ದಾರೆ.

ಈ ಸಿನಿಮಾ ಮೊದಲ ದಿನ 65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ 53.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ದುಬಾರಿ ಟಿಕೆಟ್ ದರ, ರಜನಿಕಾಂತ್ ಅಭಿಮಾನಿವರ್ಗದ ಕಾರಣಕ್ಕೆ ಸಿನಿಮಾ ಇಷ್ಟು ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಹೀಗೆಯೇ ಮುಂದುವರಿದರೆ ಸಿನಿಮಾ ಎರಡೇ ದಿನಕ್ಕೆ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇದನ್ನೂ ಓದಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಫ್ಲಾಪ್ ಆದರೂ ಭಾರೀ ಗಳಿಕೆ ಮಾಡಿದ ‘ವಾರ್ 2’; ಕೈ ಕೊಟ್ಟ ಹಿಂದಿ ಮಂದಿ
ರಜನಿ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು

‘ವಾರ್ 2’ ಚಿತ್ರಕ್ಕೆ ಅನೇಕರು ಹೀನಾಯ ವಿಮರ್ಶೆ ನೀಡಿದ್ದಾರೆ. ಆದರೆ, ವಿಮರ್ಶೆ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಜೂನಿಯರ್ ಎನ್​ಟಿಆರ್ ಅಭಿಮಾನಿಗಳು ಥಿಯೇಟರ್​ಗೆ ನುಗ್ಗುತ್ತಿದ್ದಾರೆ. ಮೊದಲ ದಿನಕ್ಕಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಗಳಿಕೆ ಮೊದಲ ದಿನ 51.5 ಕೋಟಿ ರೂಪಾಯಿ ಇತ್ತು. ಎರಡನೇ ದಿನಕ್ಕೆ ಅದು 56.50 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ.

ಇದನ್ನೂ ಓದಿ: ‘ವಾರ್ 2’ vs ‘ಕೂಲಿ’; ಎರಡು ಬಿಗ್ ಬಜೆಟ್ ಚಿತ್ರಗಳಲ್ಲಿ ಮೊದಲ ದಿನ ಗೆದ್ದವರು ಯಾರು?

ಸದ್ಯ ‘ವಾರ್ 2’ ಚಿತ್ರದ ಒಟ್ಟಾರೆ ಗಳಿಕೆ 108 ಕೋಟಿ ರೂಪಾಯಿ ಆಗಿದೆ. ಕಳಪೆ ವಿಮರ್ಶೆ ಮಧ್ಯೆಯೂ ಸಿನಿಮಾ ಈ ರೀತಿಯ ಅಬ್ಬರದ ಗಳಿಕೆ ಮಾಡುತ್ತಿರುವುದು ವಿಶೇಷ. ಹೀಗೆಯೇ ಮುಂದುವರಿದರೆ ಈ ಚಿತ್ರವೂ ಅನಾಯಾಸವಾಗಿ 200 ಕೋಟಿ ಕ್ಲಬ್ ಸೇರಲಿದೆ. ಜೂನಿಯರ್ ಎನ್​ಟಿಆರ್, ಹೃತಿಕ್, ಕಿಯಾರಾ ಸಿನಿಮಾದ ಭಾಗವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.