ಆಸ್ಕರ್ ಪ್ರವೇಶಿಸಿದ ‘ಗೋಂಧಲ್’ ಒಟಿಟಿಯಲ್ಲಿ ಲಭ್ಯವಿದೆಯೇ? ಇಲ್ಲಿದೆ ಮಾಹಿತಿ

99ನೇ ಆಸ್ಕರ್ ರೇಸ್‌ಗೆ ಭಾರತದ ಅಧಿಕೃತ ಎಂಟ್ರಿಯಾಗಿ ಮರಾಠಿ ಚಿತ್ರ 'ಗೊಂದಳ್' ಆಯ್ಕೆಯಾಗಿದೆ. ಆದರೆ ಈ ಸಿನಿಮಾ ಸದ್ಯಕ್ಕೆ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿಲ್ಲ. ಗ್ರಾಮೀಣ ಮಹಾರಾಷ್ಟ್ರದ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಡಿಜಿಟಲ್ ಬಿಡುಗಡೆಗಾಗಿ ಸಿನಿಮಾ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಆಸ್ಕರ್ ಪ್ರವೇಶಿಸಿದ ಗೋಂಧಲ್ ಒಟಿಟಿಯಲ್ಲಿ ಲಭ್ಯವಿದೆಯೇ? ಇಲ್ಲಿದೆ ಮಾಹಿತಿ
ಗೋಂಧಲ್
Edited By:

Updated on: Sep 19, 2026 | 11:31 AM

ಮುಖ್ಯಾಂಶಗಳು

  • ಆಸ್ಕರ್‌ಗೆ ಆಯ್ಕೆಯಾದ 'ಗೋಂಧಲ್' ' ಒಟಿಟಿಯಲ್ಲಿ ಸಿಗುತ್ತಾ?
  • ಸಸ್ಪೆನ್ಸ್ ಪ್ರೇಮಕಥೆಯ 'ಗೋಂಧಲ್' '
  • ಪ್ರೇಕ್ಷಕರ ಮನ ಗೆದ್ದ ಮರಾಠಿ ಚಿತ್ರದ ಕಥಾಹಂದರವೇನು?

99ನೇ ಸಾಲಿನ ಅಕಾಡೆಮಿ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ‘ಗೋಂಧಲ್’ ಮರಾಠಿ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದೆ. ಸಂತೋಷ್ ದವಾಖರ್ ನಿರ್ದೇಶನದ ಈ ಚಿತ್ರವನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 33 ಸಿನಿಮಾಗಳ ಪೈಕಿ ಆಯ್ಕೆ ಮಾಡಿದೆ. ಈ ದೊಡ್ಡ ಘೋಷಣೆಯ ನಂತರ ಪ್ರೇಕ್ಷಕರಲ್ಲಿ ಈ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿದೆ.

ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆಯೇ ಮತ್ತು ಎಲ್ಲಿ ವೀಕ್ಷಿಸಬಹುದು ಎಂಬ ಪ್ರಶ್ನೆ ಪ್ರತಿಯೊಬ್ಬರ ಮನದಲ್ಲೂ ಕಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ‘ಗೋಂಧಲ್’ ಸಿನಿಮಾ ಭಾರತದ ಯಾವುದೇ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಿಲ್ಲ. ಹಾಗೆಯೇ ಆನ್‌ಲೈನ್ ಬಾಡಿಗೆ ಅಥವಾ ಖರೀದಿಗೂ ಸಿಗುತ್ತಿಲ್ಲ. ಅಂದರೆ ಈ ಚಿತ್ರದ ಡಿಜಿಟಲ್ ಬಿಡುಗಡೆ ಇನ್ನೂ ಆಗಬೇಕಿದೆ.

ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದ ಕಥೆ ಅತ್ಯಂತ ರೋಚಕವಾಗಿದೆ. ಸುಮನ್ ಎಂಬ ಮಹಿಳೆಯ ಅಸಂತುಷ್ಟ ವಿವಾಹ ಜೀವನ ಮತ್ತು ಆಕೆಯ ಪ್ರೇಮ ಕಥೆಯ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ತನ್ನ ಪತಿಯಿಂದ ಮುಕ್ತಿ ಪಡೆಯಲು ಆಕೆ ರೂಪಿಸುವ ಅಪಾಯಕಾರಿ ಯೋಜನೆ ಪ್ರೇಕ್ಷಕರನ್ನು ತುದಿಸೀಟಿನಲ್ಲಿ ಕೂರಿಸುತ್ತದೆ.

ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಸುಮನ್, ಗಂಡನ ಸೋದರಸಂಬಂಧಿಯ ಭಾವನೆಗಳನ್ನು ಬಳಸಿಕೊಳ್ಳುತ್ತಾಳೆ. ಪತಿಯನ್ನು ಕೊಲೆ ಮಾಡಲು ಆತನನ್ನು ಪ್ರಚೋದಿಸುವ ಸಸ್ಪೆನ್ಸ್ ಕಥಾಹಂದರ ಇಲ್ಲಿದೆ. ಈ ವಿಶಿಷ್ಟ ಕಥಾಹಂದರ ಮತ್ತು ಅತ್ಯುತ್ತಮ ನಿರೂಪಣೆ ಜ್ಯೂರಿ ಸದಸ್ಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಆಸ್ಕರ್​​ಗೆ ಭಾರತದ ಅಧಿಕೃತ ಆಯ್ಕೆ ಮರಾಠಿ ಸಿನಿಮಾ ‘ಗೋಂಧಲ್’: ಏನಿದರ ವಿಶೇಷತೆ?

‘ಶ್ವಾಸ್’, ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಹಾಗೂ ‘ಕೋರ್ಟ್’ ಚಿತ್ರಗಳ ನಂತರ ಆಸ್ಕರ್‌ಗೆ ಆಯ್ಕೆಯಾದ ನಾಲ್ಕನೇ ಮರಾಠಿ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಗೋಂಧಲ್’ ಪಾತ್ರವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ವಿಶಿಷ್ಟ ಕಥೆಯನ್ನು ಜಗತ್ತಿಗೆ ತಲುಪಿಸುತ್ತಿರುವ ಈ ಚಿತ್ರದ ಒಟಿಟಿ ಬಿಡುಗಡೆ ದಿನಾಂಕವನ್ನು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us