ನಾನ್ ವೆಜ್ ತಿನ್ನಲ್ಲ ಎಂದು ಸುಳ್ಳು ಹೇಳಿದ್ರಾ ರಣಬೀರ್? ಫೋಟೋ ವೈರಲ್
ನೆಟ್ಫ್ಲಿಕ್ಸ್ ಈಗ ‘ಡೈನಿಂಗ್ ವಿತ್ ಕಪೂರ್ಸ್’ ಎಂಬ ಶೋ ಮಾಡಿದ್ದು ಕಪೂರ್ ಕುಟುಂಬ ಹಾಜರಿ ಹಾಕಿದೆ. ರಾಜ್ ಕಪೂರ್ ಅವರ ಲೆಗಸಿಯನ್ನು ನೆನಪಿಸಿಕೊಳ್ಳುವುದು ಶೋನ ಮುಖ್ಯ ಉದ್ದೇಶ. ರಣಬೀರ್ ಅವರು ಕಪೂರ್ ಕುಟುಂಬದ ಪ್ರಮುಖ ಕುಡಿ. ಈ ಶೋನಲ್ಲಿ ಅವರು ಕೂಡ ಭಾಗವಹಿಸಿದ್ದರು. ಅವರು ಶೋನಲ್ಲಿ ನಾನ್ ವೆಜ್ ಸೇವನೆ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ

ನಟ ರಣಬೀರ್ ಕಪೂರ್ ಅವರು ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಾರೆ ಎಂಬ ಆರೋಪ ಇದೆ. ಅವರು ಮದ್ಯ ಸೇವನೆ ಮಾಡುತ್ತಾರೆ, ನಾನ್ ವೆಜ್ ತಿನ್ನುತ್ತಾರೆ. ಅವರು ರಾಮನ ಪಾತ್ರ ಮಾಡುತ್ತಿದ್ದಾರೆ ಎಂದಾಗ ಟೀಕೆ ಎದುರಾಗಿತ್ತು. ಅವರು ಮದ್ಯ ಸೇವನೆ ಹಾಗೂ ನಾನ್ ವೆಜ್ ತ್ಯಜಿಸಿದ್ದಾರೆ ಎಂದು ತಂಡದವರು ಮಾಹಿತಿ ನೀಡಿದ್ದರು. ಈಗ ಅವರು ಹೊಸ ಶೋ ಒಂದಕ್ಕೆ ಬಂದಿದ್ದಾರೆ. ಇದರಲ್ಲಿ ಅವರು ನಾನ್ ವೆಜ್ ಸೇವನೆ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ.
ನೆಟ್ಫ್ಲಿಕ್ಸ್ ಈಗ ‘ಡೈನಿಂಗ್ ವಿತ್ ಕಪೂರ್ಸ್’ ಎಂಬ ಶೋ ಮಾಡಿದ್ದು ಕಪೂರ್ ಕುಟುಂಬ ಹಾಜರಿ ಹಾಕಿದೆ. ರಾಜ್ ಕಪೂರ್ ಅವರ ಲೆಗಸಿಯನ್ನು ನೆನಪಿಸಿಕೊಳ್ಳುವುದು ಶೋನ ಮುಖ್ಯ ಉದ್ದೇಶ. ರಣಬೀರ್ ಅವರು ಕಪೂರ್ ಕುಟುಂಬದ ಪ್ರಮುಖ ಕುಡಿ. ಈ ಶೋನಲ್ಲಿ ಅವರು ಕೂಡ ಭಾಗವಹಿಸಿದ್ದರು. ಅವರು ಶೋನಲ್ಲಿ ನಾನ್ ವೆಜ್ ಸೇವನೆ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಟೀಕೆ ವ್ಯಕ್ತವಾಗಿದೆ.
ಊಟ ಮಾಡುತ್ತಾ ಮಾತನಾಡುವುದು ಶೋನ ಥೀಮ್. ಈ ಶೋನ ಮೆನ್ಯುದಲ್ಲಿ ಬಹುತೇಕವು ನಾನ್ ವೆಜ್ ಊಟಗಳೇ ಇದ್ದವು. ಸಸ್ಯಾಹಾರಿ ತಿನಿಸುಗಳು ಯಾವುದೂ ಟೇಬಲ್ ಮೇಲೆ ಕಾಣಿಸಿಲ್ಲ. ರಣಬೀರ್ ಕಪೂರ್ ನಾನ್ ವೆಜ್ ತಿನ್ನೋದು ನೇರವಾಗಿ ಎಲ್ಲಿಯೂ ತೋರಿಸಿಲ್ಲ. ಆದರೆ, ಅವರು ಮಾಂಸಾಹಾರದ ಮುಂದೆ ಕುಳಿತಿರುವುದನ್ನು ಅನೇಕರು ತಪ್ಪು ಎಂದು ಕರೆದಿದ್ದಾರೆ. ಇನ್ನೂ ಕೆಲವರು, ಅವರು ನಾನ್ವೆಜ್ ಸೇವಿಸಿರಬಹುದು ಎಂದು ಗುಮಾನಿ ಹೊರಹಾಕಿದ್ದಾರೆ.
ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡೋದು ಒಂದು ವರ್ಗದ ಜನರಿಗೆ ಇಷ್ಟ ಇಲ್ಲ. ಹೀಗಾಗಿ, ಅವರು ಸಿನಿಮಾದಲ್ಲಿ ಇರೋದನ್ನು ಕೆಲವರು ಮೊದಲಿನಿಂದಲೂ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಈಗ ಅವರೆಲ್ಲರಿಗೂ ಒಳ್ಳೆಯ ಅಸ್ತ್ರ ಸಿಕ್ಕಂತೆ ಆಗಿದೆ. ಅವರೆಲ್ಲರೂ ಈಗ ರಣಬೀರ್ ಕಪೂರ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಆಲಿಯಾ-ರಣಬೀರ್ ಹೊಸ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ
ಸಿನಿಮಾ ವಿಚಾರಕ್ಕೆ ಬರೋದಾದರೆ ರಣಬೀರ್ ಕಪೂರ್ ಅವರು ರಾಮಾಯಣ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದ ಭಾಗ ಕೂಡ ಆಗಿದ್ದಾರೆ. 2026ರ ದೀಪಾವಳಿಗೆ ‘ರಾಮಾಯಣ’ ಒಂದನೇ ಭಾಗ ಹಾಗೂ 2027ರ ದೀಪಾವಳಿಗೆ ‘ರಾಮಾಯಣ 2’ ರಿಲೀಸ್ ಆಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Tue, 25 November 25




