ರಿಲೀಸ್​ಗೂ ಮೊದಲೇ ‘ಜೈಲರ್ 2’ ಹವಾ; ತೆಲುಗು ಹಕ್ಕು ಬರೋಬ್ಬರಿ 45 ಕೋಟಿಗೆ ಸೇಲ್

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರದರ್ಶನ ಹಕ್ಕುಗಳು ಬರೋಬ್ಬರಿ ₹45 ಕೋಟಿಗೆ ಮಾರಾಟವಾಗಿವೆ. ಒಟ್ಟಾರೆಯಾಗಿ ತೆಲುಗು ಹಾಗೂ ಓವರ್‌ಸೀಸ್ ಹಕ್ಕುಗಳ ಮೌಲ್ಯವೇ ₹90 ಕೋಟಿ ದಾಟಿದ್ದು, ಅಕ್ಟೋಬರ್‌ ದಸರಾ ರೇಸ್‌ನಲ್ಲಿ ಸಿನಿಮಾ ಭಾರಿ ಪೈಪೋಟಿ ಎದುರಿಸಲಿದೆ.

ರಿಲೀಸ್​ಗೂ ಮೊದಲೇ ಜೈಲರ್ 2 ಹವಾ; ತೆಲುಗು ಹಕ್ಕು ಬರೋಬ್ಬರಿ 45 ಕೋಟಿಗೆ ಸೇಲ್
ಜೈಲರ್
Edited By:

Updated on: Sep 26, 2026 | 8:14 AM

ಮುಖ್ಯಾಂಶಗಳು

  • ರಿಲೀಸ್‌ಗೂ ಮುನ್ನವೇ ರಜನಿ ಜಾದೂ
  • 'ಜೈಲರ್ 2' ತೆಲುಗು ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್
  • ಸಾಗರದಾಚೆಯೂ ಸೂಪರ್‌ಸ್ಟಾರ್ ಕ್ರೇಜ್

ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕ್ರೇಜ್ ಭಾರತದಾದ್ಯಂತ ಇದೆ. ತೆಲುಗು ರಾಜ್ಯಗಳೂ ಇದಕ್ಕೆ ಹೊರತಲ್ಲ. ಇದೀಗ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಜೈಲರ್ 2’ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರದರ್ಶನ ಹಕ್ಕುಗಳ ಮಾರಾಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಸಿದ್ಧ ನಿರ್ಮಾಪಕ ನಾಗವಂಶಿ ಅವರು ‘ಜೈಲರ್ 2’ ಚಿತ್ರದ ತೆಲುಗು ರಾಜ್ಯಗಳ (ಆಂಧ್ರಪ್ರದೇಶ ಮತ್ತು ತೆಲಂಗಾಣ) ಚಿತ್ರಮಂದಿರಗಳ ಪ್ರದರ್ಶನ ಹಕ್ಕನ್ನು ಬರೋಬ್ಬರಿ 45 ಕೋಟಿ ಭಾರಿ ಮೊತ್ತಕ್ಕೆ ತಮ್ಮದಾಗಿಸಿಕೊಂಡಿದ್ದಾರೆ.

ಸಾಗರದಾಚೆಯೂ ಸೂಪರ್‌ಸ್ಟಾರ್ ಜಾದೂ

ಕೇವಲ ತೆಲುಗು ರಾಜ್ಯಗಳಲ್ಲಷ್ಟೇ ಅಲ್ಲದೆ, ವಿದೇಶಿ ಮಾರುಕಟ್ಟೆಯಲ್ಲೂ ರಜನಿ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಪ್ರಸಿದ್ಧ ಡಿಸ್ಟ್ರಿಬ್ಯೂಟರ್ ‘ಶ್ಲೋಕ ಎಂಟರ್‌ಟೈನ್‌ಮೆಂಟ್ಸ್’ ಸಂಸ್ಥೆಯು ಉತ್ತರ ಅಮೆರಿಕ, ಯುಕೆ, ಯುರೋಪ್, ಆಫ್ರಿಕಾ, ಶ್ರೀಲಂಕಾ ಹಾಗೂ ನೇಪಾಳ ಒಳಗೊಂಡಂತೆ ವಿದೇಶಿ ಹಕ್ಕುಗಳನ್ನು 47.5 ಕೋಟಿಗೆ ಪಡೆದುಕೊಂಡಿದೆ. ಇದರಲ್ಲಿ ಉತ್ತರ ಅಮೆರಿಕ ಒಂದರಲ್ಲೇ 28 ಕೋಟಿಗೆ ಬಿಸಿನೆಸ್ ಆಗಿದೆ. ಒಟ್ಟಾರೆಯಾಗಿ ತೆಲುಗು ರಾಜ್ಯಗಳು ಹಾಗೂ ಓವರ್‌ಸೀಸ್ ಹಕ್ಕುಗಳ ಮೌಲ್ಯವೇ 90 ಕೋಟಿ ದಾಟಿದೆ.

ಅಕ್ಟೋಬರ್‌ನಲ್ಲಿ ಬಿಗ್ ಫೈಟ್: ಬಾಕ್ಸಾಫೀಸ್ ಕಣ ರಂಗೇರಲಿದೆ

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ಗ್ರ್ಯಾಂಡ್ ಆಗಿ ತೆರೆಕಾಣುತ್ತಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ರಜನಿಕಾಂತ್ ಅವರಿಗೆ ತೀವ್ರ ಪೈಪೋಟಿ ನೀಡಲು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ ಸಜ್ಜಾಗಿದೆ.

‘ಜೈಲರ್ 2’ ಬಂದ ಮಾರನೇ ದಿನವೇ, ಅಂದರೆ ಅಕ್ಟೋಬರ್ 16ರಂದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ‘ರಣಬಾಲಿ’ ಚಿತ್ರ ಪ್ರಪಂಚದಾದ್ಯಂತ ರಿಲೀಸ್ ಆಗುತ್ತಿದೆ. ಇತ್ತೀಚೆಗಷ್ಟೇ ರವಿತೇಜ ಅಭಿನಯದ ‘ಇರುಮುಡಿ’ ಚಿತ್ರದ ಮೂಲಕ ಭರ್ಜರಿ ಹಿಟ್ ಬಾರಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಗೆ ಈ ಚಿತ್ರವೂ ಅತ್ಯಂತ ಮುಖ್ತವಾಗಿದೆ.

ಇದನ್ನೂ ಓದಿ: ‘ಜೈಲರ್ 2’ ಚಿತ್ರತಂಡಕ್ಕೆ ವಿದ್ಯಾ ಬಾಲನ್ ಎಂಟ್ರಿ; ಕಾಂತಾ ಪಾತ್ರದಲ್ಲಿ ನಟಿ

ಇಷ್ಟೇ ಅಲ್ಲದೆ, ಅಕ್ಟೋಬರ್ 9ರಂದೇ ವೆಂಕಟೇಶ್ ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಂ AK47’ ಸಿನಿಮಾ ತೆರೆಕಾಣುತ್ತಿದೆ. ಸಿತಾರಾ ಅವರ ಮಾತೃ ಸಂಸ್ಥೆ ‘ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್’ ನಿರ್ಮಿಸಿರುವ ಈ ಚಿತ್ರವೂ ರೇಸ್‌ನಲ್ಲಿದೆ. ಒಟ್ಟಿನಲ್ಲಿ ದಸರಾ ಹಬ್ಬದ ರಜೆಯ ಲಾಭ ಪಡೆಯಲು ಸಾಲು ಸಾಲು ಸಿನಿಮಾಗಳು ಅಖಾಡಕ್ಕಿಳಿಯುತ್ತಿದ್ದು, ಈ ಅಕ್ಟೋಬರ್ ಟಾಲಿವುಡ್ ಮಾರುಕಟ್ಟೆಯಲ್ಲಿ ಭಾರಿ ಹಣಾಹಣಿಗೆ ಸಾಕ್ಷಿಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us