ಸೆಪ್ಟೆಂಬರ್​​ನಲ್ಲಿ ಸಾಲು ಸಾಲು ಸಿನಿಮಾ ರಿಲೀಸ್; ತಗ್ಗಲಿದೆ ‘ಜೈಲರ್’ ಸಿನಿಮಾ ಕಲೆಕ್ಷನ್

‘ಜೈಲರ್’ ಸಿನಿಮಾ ಬಿಡುಗಡೆಯಾಗಿ 21 ದಿನಗಳು ಕಳೆದಿವೆ. ಸಿನಿಮಾ ಗಳಿಕೆ ಈಗ ಕಡಿಮೆ ಆಗಿದೆ. ಮಂಗಳವಾರ (ಆಗಸ್ಟ್​ 29) ಈ ಚಿತ್ರ 3.2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಈವರೆಗೆ 374.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿದೇಶದಲ್ಲೂ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ.

ಸೆಪ್ಟೆಂಬರ್​​ನಲ್ಲಿ ಸಾಲು ಸಾಲು ಸಿನಿಮಾ ರಿಲೀಸ್; ತಗ್ಗಲಿದೆ ‘ಜೈಲರ್’ ಸಿನಿಮಾ ಕಲೆಕ್ಷನ್
ರಜನೀಕಾಂತ್-ಶಿವರಾಜ್ ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 30, 2023 | 11:50 AM

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಭಾರಿ ಯಶಸ್ಸು ಕಂಡಿದೆ. ಆಗಸ್ಟ್ 10ರಂದು ಈ ಸಿನಿಮಾ ರೀಲಿಸ್ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಸಖತ್ ಸದ್ದು ಮಾಡಿದೆ. ಬಿಡುಗಡೆಗೊಂಡು ಮೂರು ವಾರದ ಬಳಿಕವೂ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ (Rajinikanth) ಜೋಡಿ ಕಮಾಲ್ ಮಾಡಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಮಾಗಳು ರಿಲೀಸ್ ಆಗಲಿದ್ದು, ‘ಜೈಲರ್’ ಚಿತ್ರದ ಗಳಿಕೆ ಕಡಿಮೆ ಆಗಲಿದೆ.

‘ಜೈಲರ್’ ಸಿನಿಮಾ ಬಿಡುಗಡೆಯಾಗಿ 21 ದಿನಗಳು ಕಳೆದಿವೆ. ಸಿನಿಮಾ ಗಳಿಕೆ ಈಗ ಕಡಿಮೆ ಆಗಿದೆ. ಮಂಗಳವಾರ (ಆಗಸ್ಟ್​ 29) ಈ ಚಿತ್ರ 3.2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಈವರೆಗೆ 374.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿದೇಶದಲ್ಲೂ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಈವರೆಗೆ ವಿದೇಶದಲ್ಲಿ ‘ಜೈಲರ್’ ಸಿನಿಮಾ 190 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 564.35 ಕೋಟಿ ರೂ. ಆಗಿದೆ. ಇಂದಿನ ಗಳಿಕೆ ಮತ್ತಷ್ಟು ತಗ್ಗಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

‘ಜೈಲರ್’ ಸಿನಿಮಾ ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಯಿತು. ‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಅವರು ಅಬ್ಬರಿಸಿದ್ದಾರೆ. ಅವರು ಮಾಡಿರೋ ನಿವೃತ್ತ ಜೈಲರ್ ಪಾತ್ರ ಗಮನ ಸೆಳೆದಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿ ಆಗಿರುವ ಮಗ ಏಕಾಏಕಿ ಕಾಣೆ ಆಗುತ್ತಾನೆ. ಆತನ ಹುಡುಕಿ ಹೋಗುತ್ತಾನೆ ಕಥಾ ನಾಯಕ. ಮುಂದೇನಾಗುತ್ತದೆ ಅನ್ನೋದು ಸಿನಿಮಾದ ಕಥೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್, ಮೋಹನ್​ ಲಾಲ್​, ಜಾಕಿ ಶ್ರಾಫ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇವರ ಪಾತ್ರಗಳು ಸಾಕಷ್ಟು ಗಮನ ಸೆಳೆದಿವೆ.

‘ಜೈಲರ್’ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಸನಿಹದಲ್ಲಿದೆ. ರಜನಿ ಅಭಿನಯಿಸಿದ ‘2.0’ ಸಿನಿಮಾ ಮೊದಲನೇ ಸ್ಥಾನದಲ್ಲಿದೆ. ಈ ಚಿತ್ರಕ್ಕೆ ಎಸ್. ಶಂಕರ್ ನಿರ್ದೇಶನ ಮಾಡಿದ್ದರು. 2018ರಲ್ಲಿ ತೆರೆಕಂಡ ಈ ಚಿತ್ರ 723.30 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ, ಈ ದಾಖಲೆಯನ್ನು ಮುರಿಯೋಕೆ ‘ಜೈಲರ್’ ಚಿತ್ರದಿಂದ ಸಾಧ್ಯವಾಗುವುದಿಲ್ಲ ಎಂಬುದು ಹಲವರ ಅಭಿಪ್ರಾಯ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’, ‘ಖುಷಿ’, ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಿಡುಗಡೆಗೊಳ್ಳುತ್ತಿರುವುದರಿಂದ ‘ಜೈಲರ್’ ಕಲೆಕ್ಷನ್ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮೂರನೇ ಸೋಮವಾರಕ್ಕೆ ತಗ್ಗಿತು ‘ಜೈಲರ್’, ‘ಗದರ್ 2’ ಕಲೆಕ್ಷನ್; ಯಾವ ಚಿತ್ರದ ಗಳಿಕೆ ಎಷ್ಟು?

ಆಗಸ್ಟ್ 10ರಂದು ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಿಡುಗಡೆ ಆಯಿತು. ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸಿರುವ ಈ ಸಿನಿಮಾ ಇಲ್ಲಿಯವರೆಗೆ 564.35 ಕೋಟಿ ರೂ.ಗಳನ್ನು ಗಳಿಸಿದೆ. ಬಿಡುಗಡೆ ಆಗಿ 20 ದಿನಗಳ ಬಳಿಕ ಸಿನಿಮಾದ ಗಳಿಕೆ ತಗ್ಗಿದ್ದು, ಮಂಗಳವಾರ (ಆಗಸ್ಟ್ 29) 3.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು(ಆಗಸ್ಟ್ 30) 2.78 ಕೋಟಿ ರೂಪಾಯಿಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:47 am, Wed, 30 August 23