AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್ vs ಜೈಲರ್’; ಒಂದೇ ಶೀರ್ಷಿಕೆಯ ಎರಡು ಸಿನಿಮಾ ಒಟ್ಟಿಗೆ ರಿಲೀಸ್  

‘ಜೈಲರ್’ ತಮಿಳು ಸಿನಿಮಾ. ಮಲಯಾಳಂ ಭಾಷೆಯಲ್ಲೂ ಇದೇ ಹೆಸರಿನ ಸಿನಿಮಾ ಸಿದ್ಧವಾಗಿದೆ. ಒಂದೇ ದಿನ ಎರಡೂ ಚಿತ್ರಗಳು ರಿಲೀಸ್ ಆಗುತ್ತಿವೆ ಅನ್ನೋದು ವಿಶೇಷ..

ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್ vs ಜೈಲರ್’; ಒಂದೇ ಶೀರ್ಷಿಕೆಯ ಎರಡು ಸಿನಿಮಾ ಒಟ್ಟಿಗೆ ರಿಲೀಸ್  
ರಾಜೇಶ್ ದುಗ್ಗುಮನೆ
|

Updated on:Jul 25, 2023 | 2:17 PM

Share

ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ರಿಲೀಸ್​ಗೆ ರೆಡಿ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shivarajkumar) ಕೂಡ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಕನ್ನಡಿಗರಿಗೆ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದಲ್ಲಿ ಅವರ ಪಾತ್ರ 10 ನಿಮಿಷಗಳ ಕಾಲ ಬರಲಿದೆಯಂತೆ. ಈ ಚಿತ್ರ ಆಗಸ್ಟ್ 10ರಂದು ತೆರೆಗೆ ಬರುತ್ತಿದೆ. ವಿಚಿತ್ರ ಎಂದರೆ ಇದೇ ಶೀರ್ಷಿಕೆಯ ಮತ್ತೊಂದು ಸಿನಿಮಾ ಅದೇ ದಿನ ರಿಲೀಸ್ ಆಗುತ್ತಿದೆ! ಇದು ಅಚ್ಚರಿ ಎನಿಸಿದರೂ ಸತ್ಯ.

‘ಜೈಲರ್’ ತಮಿಳು ಸಿನಿಮಾ. ಮಲಯಾಳಂ ಭಾಷೆಯಲ್ಲೂ ಇದೇ ಹೆಸರಿನ ಸಿನಿಮಾ ಸಿದ್ಧವಾಗಿದೆ. ಒಂದೇ ಶೀರ್ಷಿಕೆಯಲ್ಲಿ ಎರಡು ಸಿನಿಮಾ ಬರೋದು ಹೊಸದೇನು ಅಲ್ಲ. ಆದರೆ, ಒಂದೇ ದಿನ ಎರಡೂ ಚಿತ್ರಗಳು ರಿಲೀಸ್ ಆಗುತ್ತಿವೆ ಅನ್ನೋದು ವಿಶೇಷ. ಇದು ಈಗ ವಿವಾದವನ್ನೂ ಹುಟ್ಟುಹಾಕುವ ಸಾಧ್ಯತೆ ಇದೆ.

‘ಜೈಲರ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತದೆ. ತಮಿಳು ಮಾತ್ರವಲ್ಲದೆ, ತೆಲುಗು, ಕನ್ನಡ, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಈ ಕಾರಣಕ್ಕೆ ರಜನಿ ನಟನೆಯ ‘ಜೈಲರ್’ ಸಿನಿಮಾದ ಮಲಯಾಳಂ ವರ್ಷನ್​ಗೆ ಟೈಟಲ್ ಬದಲಾಯಿಸುವಂತೆ ಮತ್ತೊಂದು ತಂಡದಿಂದ ಆಗ್ರಹ ವ್ಯಕ್ತವಾಗಿದೆ.

ತಮಿಳು ಸಿನಿಮಾ ‘ಜೈಲರ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ‘ಕಾವಾಲಾ..’ ಹಾಡು ಸೆನ್ಸೇಷನ್ ಸೃಷ್ಟಿ ಮಾಡಿದೆ. ಮಲಯಾಳಂ ‘ಜೈಲರ್’ ಚಿತ್ರವನ್ನು  ಸಕ್ಕಿರ್ ಮದಥಿಲ್ ಅವರು ನಿರ್ದೇಶನ ಮಾಡಿದ್ದಾರೆ. ಎರಡು ತಂಡಗಳ ಮಧ್ಯೆ ಜಟಾಪಟಿ ಏರ್ಪಟ್ಟಿದೆ.

ಇದನ್ನೂ ಓದಿ: ಜೈಲರ್: ರಜನೀಕಾಂತ್ ಸಿನಿಮಾ ಹೆಸರು ವಿವಾದ, ಹೇಳಿಕೆ ಹೊರಡಿಸಿದ ನಿರ್ಮಾಣ ಸಂಸ್ಥೆ

ಈಗಾಗಲೇ ಮಲಯಾಳಂ ‘ಜೈಲರ್’ ತಂಡದವರು ತಮಿಳು ‘ಜೈಲರ್’ ಸಿನಿಮಾ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್​ನ ಸಂಪರ್ಕಿಸಿದ್ದಾರೆ. ಕೇರಳದಲ್ಲಿ ಟೈಟಲ್ ಬದಲಿಸಿ ಸಿನಿಮಾ ರಿಲೀಸ್ ಮಾಡುವಂತೆ ಕೋರಿಕೊಂಡಿದ್ದಾರೆ. ಕೆಲವರು ಮಲಯಾಳಂ ಸಿನಿಮಾ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಉದ್ದೇಶಪೂರ್ವಕವಾಗಿ ಅವರು ಆಗಸ್ಟ್ 10ರಂದು ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನೆಲ್ಸನ್ ದಿಲೀಪ್ ಕುಮಾರ್ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಕ್ಕಿರ್ ಕೂಡ ಕೋರ್ಟ್​​ನ ಮೊರೆ ಹೋಗಿದ್ದಾರೆ. ಆಗಸ್ಟ್ 2ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:46 am, Tue, 25 July 23