AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿ ಆಯ್ತು ಕೋರ್ಟ್​ ಕೇಸ್; ‘ಜನ ನಾಯಗನ್​’ ಟೀಂಗೆ ಆದ ನಷ್ಟ ಎಷ್ಟು?

ಕೋರ್ಟ್ ಕೇಸ್ ಮತ್ತು ಸೆನ್ಸಾರ್ ಪ್ರಮಾಣಪತ್ರದ ವಿಳಂಬದಿಂದ 'ಜನ ನಾಯಗನ್' ಸಿನಿಮಾ ಬೃಹತ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 120 ಕೋಟಿಗೆ ಖರೀದಿಸಿದ್ದ ಅಮೆಜಾನ್ ಪ್ರೈಮ್ ಈಗ ಕೇವಲ 60 ಕೋಟಿ ನೀಡಲು ಸಿದ್ಧವಾಗಿದ್ದು, ಇದರಿಂದ ಚಿತ್ರತಂಡಕ್ಕೆ ನಷ್ಟವಾಗುವ ಸಾಧ್ಯತೆ ಇದೆ. ಬಿಡುಗಡೆ ದಿನಾಂಕವೂ ಅನಿಶ್ಚಿತವಾಗಿರುವುದರಿಂದ ತಂಡಕ್ಕೆ ಗಂಭೀರ ಸವಾಲು ಎದುರಾಗಿದೆ.

ದುಬಾರಿ ಆಯ್ತು ಕೋರ್ಟ್​ ಕೇಸ್; ‘ಜನ ನಾಯಗನ್​’ ಟೀಂಗೆ ಆದ ನಷ್ಟ ಎಷ್ಟು?
ವಿಜಯ್
ರಾಜೇಶ್ ದುಗ್ಗುಮನೆ
|

Updated on: Feb 14, 2026 | 7:02 AM

Share

ತಮಿಳಿನ ‘ಜನ ನಾಯಗನ್’ ಸಿನಿಮಾ (Jana Nayagan) ಈಗ ಸಂಕಷ್ಟದಲ್ಲಿ ಇದೆ. ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂಬ ಸ್ಪಷ್ಟನೆ ಅಭಿಮಾನಿಗಳಿಗೆ ಹಾಗಿರಲಿ, ಟೀಂನವರಿಗೂ ಇಲ್ಲ. ಮುಂದೇನು ಎಂಬ ಪ್ರಶ್ನೆ ತಂಡಕ್ಕೆ ಕಾಡುತ್ತಿದೆ. ಸದ್ಯ ಸೆನ್ಸಾರ್ ಪುನರ್ ವಿಮರ್ಶೆ ಮಾಡೋ ಸಂಸ್ಥೆಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದೆ. ಎರಡು ವಾರದ ಒಳಗೆ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ತಂಡದ ಕೈ ಸೇರೋ ಸಾಧ್ಯತೆ ಇದೆ. ಈ ಮಧ್ಯೆ ತಂಡಕ್ಕೆ ಕೋರ್ಟ್ ಕೇಸ್ ದುಬಾರಿ ಆಗಿದೆ ಎನ್ನಲಾಗಿದೆ.

‘ಜನ ನಾಯಗನ್’ ಸಿನಿಮಾ ಜನವರಿ 9ರಂದು ರಿಲೀಸ್ ಆಗಬೇಕಿತ್ತು. ಅಂದರೆ ಸುಮಾರು ಐದು ವಾರಗಳ ಹಿಂದೆಯೇ ಚಿತ್ರ ಜನರ ಎದುರು ಬರಬೇಕಿತ್ತು. ಆದರೆ, ಈವರೆಗೆ ತಂಡಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಇದು ಚಿತ್ರಕ್ಕೆ ದುಬಾರಿ ಆಗಿದೆ. ಇಷ್ಟು ದಿನಗಳ ಕಾಲ ಕೋರ್ಟ್​​ನಲ್ಲಿ ಹೋರಾಡುತ್ತಾ ಇದ್ದ ತಂಡ, ಈಗ ಕೇಸ್​​ನ ಹಿಂಪಡೆದು ಪುನರ್ ವಿಮರ್ಶೆ ಮಾಡುವ ಸಂಸ್ಥೆಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದೆ.

ಈಗಾಗಲೇ ಅಮೇಜಾನ್​ ಪ್ರೈಮ್ ವಿಡಿಯೋ ಸಂಸ್ಥೆ 120 ಕೋಟಿ ರೂಪಾಯಿ ನೀಡಿ ‘ಜನ ನಾಯಗನ್’ ಚಿತ್ರ ಖರೀದಿ ಮಾಡಿದೆ. ಈಗ ಸಿನಿಮಾ ವಿಳಂಬ ಆಗುತ್ತಿರುವುದರಿಂದ ಒಟಿಟಿ ಸಂಸ್ಥೆಯವರು 60 ಕೋಟಿ ರೂಪಾಯಿ ನೀಡಲು ಮಾತ್ರ ಸಿದ್ಧರಿದ್ದಾರೆ ಎಂದು ವರದಿ ಆಗಿದೆ. ಉಳಿದ ಲೆಕ್ಕಾಚಾರ ಸೇರಿದರೆ 150 ಕೋಟಿ ರೂಪಾಯಿ ಹೆಚ್ಚುವರಿಯಾಗಿ ವೆಚ್ಛ ಭರಿಸೋ ಸ್ಥಿತಿಯಲ್ಲಿ ‘ಜನ ನಾಯಗನ್’ ತಂಡ ಇದೆ.

ಎರಡು ವಾರಗಳಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರ ಕೈ ಸೇರಿದರೂ ಸಿನಿಮಾನ ಏಕಾಏಕಿ ರಿಲೀಸ್ ಮಾಡೋದು ಸಾಧ್ಯವಾಗದೆ ಇರಬಹುದು. ಇದು ವಿಶ್ವ ಮಟ್ಟದಲ್ಲಿ ತೆರೆಗೆ ಬರಬೇಕಿದೆ. ಹೀಗಾಗಿ, ತಮಿಳುನಾಡು ಸೇರಿದಂತೆ ಭಾರತಾದ್ಯಂತ ಥಿಯೇಟರ್ ಸೆಟಪ್ ಮಾಡಿಕೊಳ್ಳಬೇಕಿದೆ. ಆ ಬಳಿಕ ವಿಶ್ವ ಮಟ್ಟದಲ್ಲಿಯೂ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ 

‘ಜನ ನಾಯಗನ್’ ಸಿನಿಮಾನ ಫೆಬ್ರವರಿ ಕೊನೆಯಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕ ಈಗಾಗಲೇ ಫಿಕ್ಸ್ ಆಗಿದೆ. ಮಾರ್ಚ್ 19ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಕೇವಲ ಎರಡು ವಾರ ಗ್ಯಾಪ್​​ನಲ್ಲಿ ಒಂದೇ ಸಂಸ್ಥೆಯ ಎರಡು ಸಿನಿಮಾಗಳನ್ನು ರಿಲೀಸ್ ಮಾಡೋದು ಅಸಾಧ್ಯ. ಹೀಗಾಗಿ, ‘ಜನ ನಾಯಗನ್ ಮತ್ತಷ್ಟು’ ಮುಂದಕ್ಕೆ ಹೋಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
114 ಎಸೆತಗಳ ನಂತರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ
114 ಎಸೆತಗಳ ನಂತರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ