ಮತ್ತೆ ಸೆನ್ಸಾರ್ ಮಂಡಳಿ ಮುಂದೆ ‘ಜನ ನಾಯಗನ್’ ಬಿಡುಗಡೆ ಮುಂದೂಡಿಕೆ?

Jana Nayagan movie: ಕೆಲ ದಿನಗಳ ಹಿಂದಷ್ಟೆ ಹರಿದಾಡಿದ ಸುದ್ದಿಯ ಪ್ರಕಾರ, ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ಸಿಕ್ಕಿದ್ದು, ಜುಲೈ 24 ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ‘ಜನ ನಾಯಗನ್’ ಸಿನಿಮಾ ಮತ್ತೆ ಸಿಬಿಎಫ್​​ಸಿ ಮುಂದೆ ಹೋಗಲಿದೆ. ಮತ್ತೊಮ್ಮೆ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಇದೆ.

ಮತ್ತೆ ಸೆನ್ಸಾರ್ ಮಂಡಳಿ ಮುಂದೆ ‘ಜನ ನಾಯಗನ್’ ಬಿಡುಗಡೆ ಮುಂದೂಡಿಕೆ?
Jana Nayagan1

Updated on: Jul 15, 2026 | 8:42 AM

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ರಾಜಕೀಯ ಪ್ರಭಾವ ಇನ್ನಿತರೆ ಕಾರಣಗಳಿಂದ ಸಿನಿಮಾ ಈಗಾಗಲೇ ಏಳು ತಿಂಗಳು ತಡವಾಗಿದೆ. ನಾನಾ ಅಡೆತಡೆಗಳು, ಕಾನೂನು ಸಂಕಷ್ಟಗಳು ಇನ್ನಿತರೆಗಳನ್ನು ದಾಟಿ ಇದೀಗ ಸಿನಿಮಾ ಬಿಡುಗಡೆಗೆ ಮತ್ತೆ ರೆಡಿ ಆಗಿದೆ. ಕೆಲ ದಿನಗಳ ಹಿಂದಷ್ಟೆ ಹರಿದಾಡಿದ ಸುದ್ದಿಯ ಪ್ರಕಾರ, ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ಸಿಕ್ಕಿದ್ದು, ಜುಲೈ 24 ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ‘ಜನ ನಾಯಗನ್’ ಸಿನಿಮಾ ಮತ್ತೆ ಸಿಬಿಎಫ್​​ಸಿ ಮುಂದೆ ಹೋಗಲಿದೆ. ಮತ್ತೊಮ್ಮೆ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಇದೆ.

‘ಜನ ನಾಯಗನ್’ ಸಿನಿಮಾಕ್ಕೆ ಈಗಾಗಲೇ ಸಿಬಿಎಫ್​​ಸಿ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನೀಡಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಸಹ ಹಾಕಿದೆ. ಆದರೆ ಈಗಾಗಲೇ ಸಿಬಿಎಫ್​​ಸಿ ಪ್ರಮಾಣ ಸಿಕ್ಕಿದ್ದರೂ ಸಹ ‘ಜನ ನಾಯಗನ್’ ಸಿನಿಮಾ ಮತ್ತೆ ಸಿಬಿಎಫ್​​ಸಿ ಮಂಡಳಿಗೆ ಹೋಗುತ್ತಿದ್ದು, ಮತ್ತೊಮ್ಮೆ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಲಿದೆ.

‘ಜನ ನಾಯಗನ್’ ಸಿನಿಮಾಕ್ಕೆ ಕೆಲವು ಸೆಕೆಂಡುಗಳ ಹೆಚ್ಚುವರಿ ದೃಶ್ಯವನ್ನು ಸೇರಿಸಲಾಗುತ್ತಿದ್ದು, ಇದೇ ಕಾರಣಕ್ಕೆ ಈಗ ಸಿನಿಮಾಕ್ಕೆ ಮತ್ತೆ ಸೆನ್ಸಾರ್ ಮಾಡಿಸಲಾಗುತ್ತಿದೆ. ಈಗಾಗಲೇ ಸೆನ್ಸಾರ್ ಆಗಿರುವ ‘ಜನ ನಾಯಗನ್’ ಸಿನಿಮಾ ಟೈಟಲ್ ಕಾರ್ಡ್ ಎಲ್ಲವೂ ಸೇರಿ 3 ಗಂಟೆ 3 ನಿಮಿಷ 7 ಸೆಕೆಂಡ್ (03:03:07) ಇದೆ. ಆದರೆ ಈಗ ಸಿನಿಮಾಕ್ಕೆ 24 ಸೆಕೆಂಡುಗಳ ಹೆಚ್ಚುವರಿ ಫುಟೇಜ್ ಸೇರಿಸಲಾಗುತ್ತಿದೆ. ಇದು ವಿಜಯ್ ಅವರ ಬೇಡಿಕೆ ಮೇರೆಗೆ ಸೇರಿಸಲಾಗುತ್ತಿರುವ ದೃಶ್ಯ ಆಗಿದ್ದು, ಹೆಚ್ಚುವರಿ ದೃಶ್ಯ ಸೇರಿಸಿರುವ ಕಾರಣ ಸಿನಿಮಾ ಮತ್ತೆ ಸೆನ್ಸಾರ್ ಆಗಲೇ ಬೇಕಿದೆಯಂತೆ.

ಇದನ್ನೂ ಓದಿ:‘ಜನ ನಾಯಗನ್’ ಚಿತ್ರದಿಂದ ದಳಪತಿ ವಿಜಯ್ ಮಗ ಜೇಸನ್ ಸಿನಿಮಾಗೆ ಸಂಕಷ್ಟ

ಅಂದಹಾಗೆ ಆ ಹೆಚ್ಚುವರಿ 24 ಸೆಕೆಂಡ್ ದೃಶ್ಯ, ಸಿನಿಮಾದ ಕತೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಸಿನಿಮಾದ ಟೈಟಲ್ ಕಾರ್ಡ್​​ಗೆ ಹೆಚ್ಚುವರಿ ಹೆಸರುಗಳನ್ನು ಸೇರಿಸಲಾಗಿದೆಯಂತೆ. ವಿಜಯ್ ಅವರ ಮನವಿ ಮೇರೆಗೆ ಟೈಟಲ್ ಕಾರ್ಡ್​​ನಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಕೆಲ ಹೆಚ್ಚುವರಿ ಹೆಸರುಗಳನ್ನು ಸೇರಿಸಿದ್ದು, ಇದು 24 ಸೆಕೆಂಡ್ ಹೆಚ್ಚುವರಿ ಸಮಯವನ್ನು ಸೇರ್ಪಡೆಗೊಳಿಸಿದೆ. ಹಾಗಾಗಿ ಯಾವುದೇ ಹೆಚ್ಚುವರಿ ಬದಲಾವಣೆ ಮಾಡಿದರೆ ಸಿನಿಮಾ ಮರು ಸೆನ್ಸಾರ್ ಆಗಲೇ ಬೇಕಿರುವುದು ನಿಯಮ. ಹಾಗಾಗಿ ಸಿನಿಮಾ ಈಗ ಮತ್ತೆ ಸೆನ್ಸಾರ್ ಬೋರ್ಡ್​​ ಮುಂದೆ ಹೋಗಲಿದೆಯಂತೆ.

‘ಜನ ನಾಯಗನ್’ ಸಿನಿಮಾ ಜುಲೈ 24ಕ್ಕೆ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆ ಇದೆ. ಕೆವಿಎನ್ ಪ್ರೊಡಕ್ಷನ್​​​ನವರು ಇದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದೀಗ ಮತ್ತೆ ಸೆನ್ಸಾರ್​​ಗೆ ಹೋಗಿರುವ ಕಾರಣ ಸಿನಿಮಾದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 am, Wed, 15 July 26

Follow Us