AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಚಿತ್ರದಿಂದ ದಳಪತಿ ವಿಜಯ್ ಮಗ ಜೇಸನ್ ಸಿನಿಮಾಗೆ ಸಂಕಷ್ಟ

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸೂಪರ್‌ಸ್ಟಾರ್ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಜುಲೈ 24ಕ್ಕೆ ನಿಗದಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬೆಳವಣಿಗೆಯಿಂದಾಗಿ ಅವರ ಮಗ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಿಗ್ಮಾ’ ಮುಂದೂಡಿಕೆಯಾಗುವ ಭೀತಿ ಎದುರಾಗಿದೆ. ವಿದೇಶಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿ ಆರಂಭವಾಗಿದ್ದು, ತಂದೆ-ಮಗನ ಸಿನಿಮಾಗಳ ನಡುವಿನ ಬಾಕ್ಸ್ ಆಫೀಸ್ ಪೈಪೋಟಿ ತಪ್ಪಿಸಲು ‘ಸಿಗ್ಮಾ’ ತಂಡ ಯೋಚಿಸುತ್ತಿದೆ.

‘ಜನ ನಾಯಗನ್’ ಚಿತ್ರದಿಂದ ದಳಪತಿ ವಿಜಯ್ ಮಗ ಜೇಸನ್ ಸಿನಿಮಾಗೆ ಸಂಕಷ್ಟ
Jana Nayagan
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 15, 2026 | 6:46 AM

Share

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸೂಪರ್‌ಸ್ಟಾರ್ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಬಹುತೇಕ ನಿಗದಿಯಾಗಿದೆ. ಚಿತ್ರತಂಡ ಅಧಿಕೃತವಾಗಿ ಇನ್ನು ದಿನಾಂಕ ಪ್ರಕಟಿಸಿಲ್ಲ. ಆದರೆ ಬುಕಿಂಗ್ ಪ್ಲಾಟ್‌ಫಾರ್ಮ್ ‘ಡಿಸ್ಟ್ರಿಕ್ಟ್’ ಹಾಗೂ ಹಲವು ಚಿತ್ರಮಂದಿರಗಳ ಮಾಲೀಕರು ಜುಲೈ 24ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್ ಕೂಡ ಆರಂಭವಾಗಿದೆ.

ಎಚ್. ವಿನೋದ್ ನಿರ್ದೇಶನದ ಈ ಸಿನಿಮಾ ಮೊದಲು ಜನವರಿಯಲ್ಲಿ ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾಗಬೇಕಿತ್ತು. ಸೆನ್ಸಾರ್ ಮಂಡಳಿಯಿಂದ (CBFC) ಪ್ರಮಾಣಪತ್ರ ಸಿಗುವುದು ತಡವಾದ ಕಾರಣ ಸಿನಿಮಾ ವಿಳಂಬವಾಗಿತ್ತು. ಈಗ ಚಿತ್ರಕ್ಕೆ ‘A’ ಸರ್ಟಿಫಿಕೇಟ್ ಸಿಕ್ಕಿದ್ದು, ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

ಮಗ ಜೇಸನ್ ಸಂಜಯ್ ಸಿನಿಮಾಗೆ ಬಿಡುಗಡೆ ಭೀತಿ!

‘ಜನ ನಾಯಗನ್’ ಸಿನಿಮಾ ಜುಲೈ 24ಕ್ಕೆ ಬಂದರೆ, ವಿಜಯ್ ಮಗ ಜೇಸನ್ ಸಂಜಯ್‌ಗೆ ಸಂಕಷ್ಟ ಎದುರಾಗಲಿದೆ. ಜೇಸನ್ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿರುವ ‘ಸಿಗ್ಮಾ’ ಸಿನಿಮಾ ಜುಲೈ 31ಕ್ಕೆ ರಿಲೀಸ್ ಆಗಬೇಕಿದೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ನಟಿಸಿದ್ದಾರೆ. ವರದಿಗಳ ಪ್ರಕಾರ, ತಂದೆಯ ಚಿತ್ರದ ಜೊತೆ ಪೈಪೋಟಿ ತಪ್ಪಿಸಲು ಜೇಸನ್ ಸಿನಿಮಾ ಆಗಸ್ಟ್‌ಗೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

ಬುಕಿಂಗ್ ಜೋರ್, ಕಥೆ ಏನು?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜುಲೈ 24ರ ರಿಲೀಸ್ ಡೇಟ್ ನೋಡಿ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಕೇವಲ ಕೆಲವೇ ನಿಮಿಷಗಳಲ್ಲಿ ಸಾವಿರಾರು ಟಿಕೆಟ್‌ಗಳು ಮಾರಾಟವಾಗಿವೆ. ಇನ್ನು ಕೆಲವರು ಸಿನಿಮಾ ಜುಲೈ 23ಕ್ಕೇ ರಿಲೀಸ್ ಆಗಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ: ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ಈ ಚಿತ್ರದಲ್ಲಿ ವಿಜಯ್ ಜೊತೆಗೆ ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ನಟಿಸಿದ್ದಾರೆ. ಇದು ತೆಲುಗಿನ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಎನ್ನಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಅನ್ಯಾಯದ ವಿರುದ್ಧ ಹೋರಾಡಿ ಹೇಗೆ ನಾಯಕನಾಗುತ್ತಾನೆ ಎಂಬುದೇ ಈ ಚಿತ್ರದ ಕಥಾಹಂದರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:45 am, Wed, 15 July 26

Follow Us