‘ಟೆನ್ನಿಸ್ ಬಾಲ್’ ಕಮೆಂಟ್ ಹಾಕಿ ನಕ್ಕಿದ್ದಕ್ಕೆ ಜಾನ್ವಿಗೆ ಬಂತು ಸಖತ್ ಕೋಪ
ಜಾನ್ವಿ ಕಪೂರ್ ಅವರು ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ಕ್ರಿಕೆಟ್ ತರಬೇತಿ ಕೂಡ ಪಡೆದಿದ್ದಾರೆ. ಅವರು ಮಹಿಮಾ ಮಾಹಿ ಅಗರ್ವಾಲ್ ಹೆಸರಿನ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೆ ತರಬೇತಿ ಪಡೆಯುವಾಗ ಎದುರಾದ ಚಾಲೆಂಜ್ಗಳು ಏನು ಎಂಬುದನ್ನು ಜಾನ್ವಿ ವಿವರಿಸಿದ್ದಾರೆ.

ಜಾನ್ವಿ ಕಪೂರ್ (Janhvi Kapoor) ಅವರ ನಟನೆಯ ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾ ಶುಕ್ರವಾರ (ಮೇ 31) ರಿಲೀಸ್ ಆಗಿದೆ. ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವ 6.75 ಕೋಟಿ ರೂಪಾಯಿ ಮಾತ್ರ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿದ ಹೊರತಾಗಿಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಲು ಸಾಧ್ಯವಾಗಿಲ್ಲ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೋರ್ವ ಹಾಕಿದ ಕಮೆಂಟ್ನಿಂದ ಜಾನ್ವಿ ಕಪೂರ್ ಸಿಟ್ಟಾಗಿದ್ದಾರೆ. ಈ ಬಗ್ಗೆ ಅವರು ಖಡಕ್ ಉತ್ತರ ನೀಡಿದ್ದಾರೆ.
ಜಾನ್ವಿ ಕಪೂರ್ ಅವರು ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ಕ್ರಿಕೆಟ್ ತರಬೇತಿ ಕೂಡ ಪಡೆದಿದ್ದಾರೆ. ಅವರು ಮಹಿಮಾ ಮಾಹಿ ಅಗರ್ವಾಲ್ ಹೆಸರಿನ ಪಾತ್ರ ಮಾಡಿದ್ದಾರೆ. ವೃತ್ತಿಯಲ್ಲಿ ವೈದ್ಯೆ ಆಗಿರುವ ಈ ಮಹಿಮಾ ಪತಿಯ ಸಹಾಯದೊಂದಿಗೆ ಕ್ರಿಕೆಟ್ ಆಡುತ್ತಾರೆ. ಈ ಸಿನಿಮಾಗೆ ತರಬೇತಿ ಪಡೆಯುವಾಗ ಎದುರಾದ ಚಾಲೆಂಜ್ಗಳು ಏನು ಎಂಬುದನ್ನು ಜಾನ್ವಿ ವಿವರಿಸಿದ್ದಾರೆ.
View this post on Instagram
‘ನಾನು 150 ದಿನಗಳ ಕಾಲ ತರಬೇತಿ ಪಡೆದೆ. ಈ ವೇಳೆ ಎರಡು ಬಾರಿ ಭುಜಕ್ಕೆ ಗಾಯ ಆಗಿತ್ತು’ ಎಂದು ಅವರು ಹೇಳಿದ್ದರು. ಈ ವೇಳೆ ಅವರ ಬಳಿ ಟೆನ್ನಿಸ್ ಬಾಲ್ ಇತ್ತು. ಟೆನ್ನಿಸ್ ಬಾಲ್ನಲ್ಲಿ ಮ್ಯಾಚ್ ಆಡಿ ಇಂಜುರಿಗೆ ಒಳಗಾಗುವುದು ಎಂದರೆ ಹೇಗೆ? ಈ ರೀತಿಯ ಪ್ರಶ್ನೆಯನ್ನು ಅಭಿಮಾನಿಯೋರ್ವ ಕೇಳಿದ್ದ. ಇದಕ್ಕೆ ಜಾನ್ವಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ‘ತಪ್ಪಾದ ಆ್ಯಂಗಲ್ನಲ್ಲಿ ವಿಡಿಯೋ ಮಾಡಬೇಡಿ’; ಎದೆ, ಹಿಂಭಾಗ ಜೂಮ್ ಮಾಡುವವರಿಗೆ ಜಾನ್ವಿ ಎಚ್ಚರಿಕೆ
‘ಲೆದರ್ ಬಾಲ್ನಲ್ಲೇ ಇಂಜುರಿ ಆಗಿದೆ. ಇದಾದ ಬಳಿಕ ಟೆನ್ನಿಸ್ ಬಾಲ್ನಲ್ಲಿ ಆಟ ಆಡಲು ಆರಂಭಿಸಿದೆ. ಇವೆಲ್ಲವೂ ನಾನು ಗಾಯಕ್ಕೆ ಒಳಗಾದ ನಂತರದ ವಿಡಿಯೋ ಅನ್ನೋದು ಈ ಬ್ಯಾಂಡೇಜ್ಗಳನ್ನು ನೋಡಿದರೆ ನಿಮಗೆ ಗೊತ್ತಾಗಬಹುದು’ ಎಂದಿದ್ದಾರೆ ಜಾನ್ವಿ. ‘ಈ ರೀತಿ ಅಪಹಾಸ್ಯ ಮಾಡುವುದಕ್ಕೂ ಮೊದಲು ಸಂಪೂರ್ಣ ವಿಡಿಯೋ ನೋಡಿದ್ದರೆ ನಿಮ್ಮ ಜೋಕ್ಗೆ ನಾನೂ ನಗುತ್ತಿದ್ದೆ’ ಎಂದು ಜಾನ್ವಿ ಖಡಕ್ ಆಗಿಯೇ ಹೇಳಿದ್ದಾರೆ. ಕಮೆಂಟ್ ಮಾಡಿದ ವ್ಯಕ್ತಿ ಆ ಬಳಿಕ ಕ್ಷಮೆ ಕೇಳಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:21 pm, Sat, 1 June 24