ನಟಿ ಜಾನ್ವಿ ಕಪೂರ್ ಅವರು ಮಾಡಿದ ಚಿತ್ರವೆಲ್ಲ ಫ್ಲಾಪ್ ಎನಿಸಿಕೊಳ್ಳುತ್ತಿದೆ. ಸ್ಟಾರ್ ದಂಪತಿ ಬೋನಿ ಕಪೂರ್ ಹಾಗೂ ಶ್ರೀದೇವಿ ಮಗಳು ಎನ್ನುವ ಏಕೈಕ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತ್ತು. ಆದರೆ, ಅವರಿಗೆ ಭದ್ರ ಬುನಾದಿ ಕಾಣಲು ಸಾಧ್ಯವಾಗುತ್ತಿಲ್ಲ. ಜಾನ್ವಿ ವೃತ್ತಿ ಜೀವನದಲ್ಲಿ ನಿರಂತರ ಸೋಲು ಎದುರಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ‘ಉಲಾಜ್’ ಬಾಕ್ಸ್ ಆಫೀಸ್ನಲ್ಲಿ ಕಳಪೆ ಕಲೆಕ್ಷನ್ ಮಾಡಿದೆ.
ಸುಧಾಂಶು ಸರಿಯಾ ಅವರು ‘ಉಲಾಜ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ದೇಶಾದ್ಯಂತ ಮೊದಲ ದಿನ (ಆಗಸ್ಟ್ 2) 1 ಕೋಟಿ ರೂಪಾಯಿ, ಎರಡನೇ ದಿನ 1.75 ಕೋಟಿ ರೂಪಾಯಿ ಹಾಗೂ ಭಾನುವಾರ (ಆಗಸ್ಟ್ 4) 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 4.75 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾ 10 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡೋ ಸ್ಥಿತಿ ಎದುರಾಗಿದೆ.
2018ರಲ್ಲಿ ರಿಲೀಸ್ ಆದ ‘ಧಡಕ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಮೆಚ್ಚುಗೆ ಪಡೆಯಿತು. ಜಾನ್ವಿ ಕಪೂರ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಯಿತು. ಆ ಬಳಿಕ ‘ರೂಹಿ’, ‘ಗುಡ್ ಲಕ್ ಜೆರ್ರಿ’, ‘ಮಿಲಿ’, ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾಗಳು ಬಿಡುಗಡೆ ಕಂಡು ಫ್ಲಾಪ್ ಎನಿಸಿಕೊಂಡಿದೆ. ಅವರಿಗೆ ಈವರೆಗೆ ದೊಡ್ಡ ಗೆಲುವು ಸಿಗುತ್ತಿಲ್ಲ.
ಇದನ್ನೂ ಓದಿ: ‘ದೇವರ’ ಚಿತ್ರದಲ್ಲಿ ಹೇಗಿದೆ ನೋಡಿ ಜೂ. ಎನ್ಟಿಆರ್- ಜಾನ್ವಿ ಕಪೂರ್ ಕೆಮಿಸ್ಟ್ರಿ
ಸದ್ಯ ಜಾನ್ವಿ ಕಪೂರ್ ಅವರು ದಕ್ಷಿಣದಲ್ಲಿ ಬ್ಯುಸಿ ಆಗಿದ್ದಾರೆ. ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಚಿತ್ರಕ್ಕೆ ಅವರೇ ನಾಯಕಿ. ಅದೇ ರೀತಿ ಜಾನ್ವಿ ಕಪೂರ್ ಅವರು ರಾಮ್ ಚರಣ್ ನಟನೆಯ ಮುಂದಿನ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:35 am, Mon, 5 August 24