Kajol: 50 ವರ್ಷಗಳಲ್ಲಿ ಕಾಜೋಲ್ ಗಳಿಸಿದ ಖ್ಯಾತಿ, ಆಸ್ತಿ ಎಷ್ಟು?
ಕಾಜೋಲ್ಗೆ ಈಗ 50 ವರ್ಷ ವಯಸ್ಸು. ಅವರು 1974ರಲ್ಲಿ ಜನಿಸಿದರು. ಈಗಲೂ ಗ್ಲಾಮರಸ್ ಆಗಿ ಅವರು ಕಾಣಿಸಿಕೊಳ್ಳುತ್ತಾರೆ. 1999ರ ಫೆಬ್ರವರಿ 24ರಂದು ಈ ಜೋಡಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಅವರಿಗೆ ನಿಸಾ ಹಾಗೂ ಯುಗ್ ಎಂದು ಹೆಸರು ಇಡಲಾಗಿದೆ.

ಬಾಲಿವುಡ್ ನಟಿ ಕಾಜೋಲ್ ಅವರಿಗೆ ಇಂದು (ಆಗಸ್ಟ್ 5) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಬಾಲಿವುಡ್ ನಟಿ ಆಗಿ, ಅಜಯ್ ದೇವಗನ್ ಪತ್ನಿ ಆಗಿ ಅವರು ಖ್ಯಾತಿ ಪಡೆದಿದ್ದಾರೆ. ಕಾಜೋಲ್ ಅವರು ಬಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ಮುಂಬೈನಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ. ಅವರ ಪತಿ, ನಟ ಅಜಯ್ ದೇವಗನ್ ಅವರು ನಿರ್ಮಾಣ ಸಂಸ್ಥೆ ಮೂಲಕ, ಪಾನ್ ಮಸಾಲಾ ಜಾಹೀರಾತಿನ ಮೂಲಕ ದೊಡ್ಡ ಮಟ್ಟದಲ್ಲಿ ಹಣ ಗಳಿಕೆ ಮಾಡುತ್ತಿದ್ದಾರೆ.
ಕಾಜೋಲ್ಗೆ ಈಗ 50 ವರ್ಷ ವಯಸ್ಸು. ಅವರು 1974ರಲ್ಲಿ ಜನಿಸಿದರು. ಈಗಲೂ ಗ್ಲಾಮರಸ್ ಆಗಿ ಅವರು ಕಾಣಿಸಿಕೊಳ್ಳುತ್ತಾರೆ. 1999ರ ಫೆಬ್ರವರಿ 24ರಂದು ಈ ಜೋಡಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಅವರಿಗೆ ನಿಸಾ ಹಾಗೂ ಯುಗ್ ಎಂದು ಹೆಸರು ಇಡಲಾಗಿದೆ.
ಕಾಜೋಲ್ ಹಾಗೂ ಅಜಯ್ ದೇವಗನ್ ಅವರು ಬಾಲಿವುಡ್ನಲ್ಲಿ ನೆಲೆ ಊರಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಕಾಜೋಲ್ ಅವರು ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’, ‘ಕುಚ್ ಕುಚ್ ಹೋತಾ ಹೇ’, ‘ಮೈ ನೇಮ್ ಈಸ್ ಖಾನ್’ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಜೋಲ್ ಹಾಗೂ ಶಾರುಖ್ ಖಾನ್ ಅವರ ಜೋಡಿಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದರು.
ಅಜಯ್ ದೇವಗನ್ ಅವರು ಇತ್ತೀಚೆಗೆ ರಿಮೇಕ್ ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಅವರು ನಟಿಸಿದ ‘ಸಿಂಘಂ’, ‘ದೃಶ್ಯಂ’ ರೀತಿಯ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ರಿಮೇಕ್. ಅವರು ಡ್ರಾಮಾ, ಕಾಮಿಡಿ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ.
ಲವ್ ಸ್ಟೋರಿ
ಕಾಜೋಲ್ ಹಾಗೂ ಅಜಯ್ ದೇವಗನ್ ಅವರು ‘ಹಲ್ಚಲ್’ ಸಿನಿಮಾದಲ್ಲಿ ಮೊದಲು ಒಟ್ಟಾಗಿ ನಟಿಸಿದರು. 1995ರಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಆ ಬಳಿಕ ಕೆಲ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು. ಸೆಟ್ನ್ಲೇ ಇವರ ಮಧ್ಯೆ ಪ್ರೀತಿ ಮೂಡಿತು. ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿ ಜುಹುನಲ್ಲಿ ಲಕ್ಷುರಿ ನಿವಾಸ ಹೊಂದಿದ್ದಾರೆ. ಇದರ ಬೆಲೆ 60 ಕೋಟಿ ರೂಪಾಯಿ. ಈ ಮನೆಗೆ ಶಿವಶಕ್ತಿ ಎಂದು ಹೆಸರು ಇಡಲಾಗಿದೆ.
ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ಡ್ರೆಸ್ ಚೇಂಜ್ ಮಾಡಿದ್ರಾ ಕಾಜೋಲ್? ನೆಟ್ಟಿಗರ ದಾರಿ ತಪ್ಪಿಸಿದ ಡೀಪ್ಫೇಕ್ ವಿಡಿಯೋ
ಒಟ್ಟೂ ಆಸ್ತಿ
ಕಾಜೋಲ್ ಹಾಗೂ ಅಜಯ್ ದೇವಗನ್ ಅವರ ಒಟ್ಟೂ ಆಸ್ತಿ 500 ಕೋಟಿ ರೂಪಾಯಿ.. ಇವರ ಬಳಿ ರೋಲ್ಸ್ ರಾಯ್ಸ್ ರೀತಿಯ ದುಬಾರಿ ಕಾರುಗಳು ಇವೆ. ಇತ್ತೀಚೆಗೆ ಕಾಜೋಲ್ ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



