
ಜಾನ್ವಿ ಕಪೂರ್ (Jahnvi Kapoor) ಅವರು ‘ಕಾನ್ ಸಿನಿಮೋತ್ಸವ 2025’ರಲ್ಲಿ ಭಾಗವಹಿಸಿದ್ದಾರೆ. ಮಂಗಳವಾರ (ಮೇ 21) ಜಾನ್ವಿ ಕಪೂರ್ ಅವರು ಕೆಂಪು ಹಾಸಿನ ಮೇಲೆ ದುಬಾರಿ ಗೌನ್ ಧರಿಸಿ ನಡೆದಿದ್ದಾರೆ. ಇದೇ ಮಾದರಿಯ ಡ್ರೆಸ್ನ ಶ್ರೀದೇವಿ ಈ ಮೊದಲು ಧರಿಸಿದ್ದರು. ಹೀಗಾಗಿ, ಇದು ಅವರು ತಾಯಿಗೆ ನೀಡುತ್ತಿರುವ ಗೌರವ ಇರಬಹುದು ಎಂದು ಅನೇಕರು ಭಾವಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
ಮೇ 13ರಿಂದ ಕಾನ್ ಚಿತ್ರೋತ್ಸವ ಫ್ರಾನ್ಸ್ನಲ್ಲಿ ಆರಂಭ ಆಗಿದೆ. ಕನ್ನಡದ ಕಿರುತೆರೆ ನಟಿ ದಿಶಾ ಮದನ್ ಸೇರಿದಂತೆ ಭಾರತ ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಜಾನ್ವಿ ಜೊತೆ ಅವರು ನಟಿಸಿದ ‘ಹೋಮ್ಬೌಂಡ್’ ಚಿತ್ರದ ಸಹ ಕಲಾವಿದರಾದ ಇಶಾನ್ ಖಟ್ಟರ್, ವಿಶಾಲ್ ಜೆತ್ವಾ ಕೂಡ ಇದ್ದರು. ನಿರ್ದೇಶಕ ನೀರಜ್ ಘಯ್ವಾನ್, ನಿರ್ಮಾಪಕ ಕರಣ್ ಜೋಹರ್ ಕೂಡ ಕೆಂಪು ಹಾಸಿನ ಮೇಲೆ ನಡೆದು ಕ್ಯಾಮೆರಾಗಳಿಗೆ ಪೋಸ್ ಕೊಟ್ಟರು.
ಜಾನ್ವಿ ಕಪೂರ್ ಉಡುಗೆ ನೆಲಕ್ಕೂ ತಾಗುತ್ತಾ ಇತ್ತು. ಈ ಕಾರಣದಿಂದಲೇ ಅವರ ಸಿನಿಮಾ ನಿರ್ದೇಶಕ ನೀರಜ್ ಅವರು ಡ್ರೆಸ್ನ ಹಿಡಿದುಕೊಂಡು ಸಹಾಯ ಮಾಡುತ್ತಿದ್ದರು. ಸದ್ಯ ಜಾನ್ವಿ ಎಂಟ್ರಿ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ. ಎಲ್ಲರೂ ಇದಕ್ಕೆ ವಿವಿಧ ರೀತಿ ಕಮೆಂಟ್ ಮಾಡಿದ್ದಾರೆ. ನೀರಜ್ ಸಹಾಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
Janhvi Kapoor at Cannes film festival 👀 pic.twitter.com/zY1TTYNNNa
— Jeet (@JeetN25) May 20, 2025
ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್ಬೌಂಡ್’ ಸಿನಿಮಾದಲ್ಲಿ ಜಾನ್ವಿ, ಇಶಾನ್ ಹಾಗೂ ವಿಶಾಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕಾನ್ ಸಿನಿಮೋತ್ಸವದಲ್ಲಿ ಪ್ರಸಾರ ಕಂಡಿದೆ. ಮಾರ್ಟಿನ್ ಸ್ಕೋರ್ಸಸ್ ಅವರು ಈ ಚಿತ್ರದ ನಿರ್ಮಾಪಕರು. ಹೀಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಜಾನ್ವಿ ಕಪೂರ್ ಬಾಯ್ಫ್ರೆಂಡ್ಗೆ ದಲಿತ ಎಂದು ಮೂದಲಿಸಿದ ಅಭಿಮಾನಿ: ಸಿಕ್ತು ಖಡಕ್ ಉತ್ತರ
ಈ ಗೌನ್ನ ಬೆಲೆ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಗೌನ್ಗೆ ಜಾನ್ವಿ ಕಪೂರ್ 3.4 ಲಕ್ಷ ರೂಪಾಯಿ ನೀಡಿದ್ದಾರೆ ಹೇಳಲಾಗುತ್ತಿದೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಗೌನ್ ಬೆಲೆ ಅನೇಕರಿಗೆ ಅಚ್ಚರಿ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Wed, 21 May 25