Megha Shetty: ಲಾಕ್​ಡೌನ್​ನಲ್ಲಿ ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ದಿನಚರಿ ಏನು? ಮನೆಯಲ್ಲಿದ್ದು ಏನ್​ ಮಾಡ್ತಿದ್ದಾರೆ ಕರಾವಳಿ ಬೆಡಗಿ?

Jothe Jotheyali: ಸೆಲೆಬ್ರಿಟಿಗಳು ಜಿಮ್​ಗೆ ಹೋಗಿ ವರ್ಕೌಟ್​ ಮಾಡುತ್ತಾರೆ. ಈ ಮೂಲಕ ದೇಹ ಫಿಟ್​ ಆಗಿ ಇಟ್ಟುಕೊಳ್ಳುತ್ತಾರೆ. ಮೇಘಾ ಶೆಟ್ಟಿ ಕೂಡ ಫಿಟ್​ನೆಸ್​ ಪ್ರಿಯರು. ಆದರೆ, ಕೊವಿಡ್​ ಲಾಕ್​ಡೌನ್​ನಿಂದ ಜಿಮ್​ ಮುಚ್ಚಿದೆ. ಹೀಗಾಗಿ ಮನೆಯಲ್ಲೇ ವರ್ಕೌಟ್​ ಮಾಡುತ್ತಿದ್ದಾರೆ.

Megha Shetty: ಲಾಕ್​ಡೌನ್​ನಲ್ಲಿ ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ದಿನಚರಿ ಏನು? ಮನೆಯಲ್ಲಿದ್ದು ಏನ್​ ಮಾಡ್ತಿದ್ದಾರೆ ಕರಾವಳಿ ಬೆಡಗಿ?
ಮೇಘಾ ಶೆಟ್ಟಿ
Edited By:

Updated on: May 21, 2021 | 4:16 PM

ಲಾಕ್​ಡೌನ್​ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಮನೆಯಲ್ಲಿ ಕೂತಿದ್ದಾರೆ. ಮನೆಯಲ್ಲಿದ್ದುಕೊಂಡೇ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕೂಡ ಮನೆಯಲ್ಲೇ ಇದ್ದಾರೆ. ಅವರು, ಸಿನಿಮಾ ನೋಡುತ್ತಾ, ಅಡುಗೆ ಮಾಡುತ್ತಾ, ಫಿಟ್​ನೆಸ್​ ಕಾಯ್ದುಕೊಳ್ಳುವತ್ತಲೂ ಗಮನ ಹರಿಸುತ್ತಿದ್ದಾರೆ.

ಮನೆಯಲ್ಲೇ ವರ್ಕೌಟ್​

ಸೆಲೆಬ್ರಿಟಿಗಳು ಜಿಮ್​ಗೆ ಹೋಗಿ ವರ್ಕೌಟ್​ ಮಾಡುತ್ತಾರೆ. ಈ ಮೂಲಕ ದೇಹ ಫಿಟ್​ ಆಗಿ ಇಟ್ಟುಕೊಳ್ಳುತ್ತಾರೆ. ಮೇಘಾ ಶೆಟ್ಟಿ ಕೂಡ ಫಿಟ್​ನೆಸ್​ ಪ್ರಿಯರು. ಆದರೆ, ಕೊವಿಡ್​ ಲಾಕ್​ಡೌನ್​ನಿಂದ ಜಿಮ್​ ಮುಚ್ಚಿದೆ. ಹೀಗಾಗಿ ಮನೆಯಲ್ಲೇ ವರ್ಕೌಟ್​ ಮಾಡುತ್ತಿದ್ದಾರೆ. ‘ನಾನು ನಿತ್ಯ ವರ್ಕೌಟ್​ ಮಿಸ್​ ಮಾಡುವುದಿಲ್ಲ. ಒಂದು ದಿನ ಯೋಗಾಸನ, ಮತ್ತೊಂದು ದಿನ ವೇಟ್ಸ್​, ಇನ್ನೊಂದು ದಿನ ಸ್ಟ್ರೆಚ್​​​, ಹೀಗೆ ನಿತ್ಯ ಬೇರೆ ಬೇರೆ ಮಾಡುತ್ತೇನೆ. ಈ ಮೂಲಕ ಬಾಡಿ ಫಿಟ್​ ಆಗಿಟ್ಟುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ಹೊಸ ಹೊಸ ಸಿನಿಮಾಗಳನ್ನು ನೋಡ್ತೀನಿ

ಮೊದಲು ಸಿನಿಮಾಗಳನ್ನು ನೋಡಬೇಕೆಂದರೆ ಥಿಯೇಟರ್​ಗಳಿಗೆ ಹೋಗಬೇಕಿತ್ತು. ನಂತರ ಕಾಲ ಬದಲಾಗಿ ಯೂಟ್ಯೂಬ್​ಗಳಲ್ಲಿ ಸಿನಿಮಾಗಳು ಸಿಗೋಕೆ ಆರಂಭವಾದವು. ಈಗ ಒಟಿಟಿ ಫ್ಲಾಟ್​ಫಾರ್ಮ್​ ಕ್ರಾಂತಿ ಮಾಡುತ್ತಿದೆ. ಜಗತ್ತಿನ ಬೇರೆಬೇರೆ ಭಾಷೆಯ ಚಿತ್ರಗಳನ್ನು ಮನೆಯಲ್ಲೇ ಕುಳಿತುಕೊಂಡು ನೋಡಬಹುದು. ಲಾಕ್​ಡೌನ್​ನಲ್ಲಿ ಮನೆಯಲ್ಲೇ ಇರುವವರಿಗೆ ಟೈಮ್​ ಪಾಸ್​ಗೆ ಇದೊಂದು ಒಳ್ಳೆ ಆಯ್ಕೆ ಕೂಡ ಹೌದು. ಮೇಘಾ ಶೆಟ್ಟಿ ಕೂಡ ಈಗ ಇದನ್ನೇ ಅನುಸರಿಸುತ್ತಿದ್ದಾರೆ. ‘ಕನ್ನಡದ ಬಹುತೇಕ ಚಿತ್ರಗಳನ್ನು ನೋಡಿ ಮುಗಿಸಿದ್ದೇನೆ. ಈಗ ಪರಭಾಷೆಯ ಚಿತ್ರಗಳನ್ನು ನೋಡೋಕೆ ಆರಂಭಿಸಿದ್ದೇನೆ. ಸಿನಿಮಾಗಳಿಂದ ಸಾಕಷ್ಟು ಕಲಿಯೋಕೆ ಸಿಗುತ್ತಿದೆ. ಸಿನಿಮಾ ಬಂಡಿ ಅನ್ನೋ ಚಿತ್ರ ನೋಡಿದೆ ತುಂಬಾನೇ ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ ಅವರು.

 ಕುಕ್ಕಿಂಗ್​ನಲ್ಲಿ ಬ್ಯುಸಿ

ಲಾಕ್​ಡೌನ್​ ಟೈಮ್​ನಲ್ಲಿ ಸೆಲೆಬ್ರಿಟಿಗಳು ಕುಕ್ಕಿಂಗ್​ ಮಾಡಿ ಆ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೇಘಾ ಕೂಡ ಲಾಕ್​ಡೌನ್​ ಟೈಮ್​ನಲ್ಲಿ ನಾನಾ ರೀತಿಯ ಅಡುಗೆ ಪ್ರಯತ್ನ ಮಾಡುತ್ತಿದ್ದಾರೆ. ‘ಮನೆಯಲ್ಲಿದ್ದುಕೊಂಡು ಅಡುಗೆ ಮಾಡುತ್ತಿದ್ದೇನೆ. ಮನೆಯಲ್ಲಿ ಏನು ಸಿಗುತ್ತದೆಯೋ ಅದನ್ನು ಮಾತ್ರ ಮಾಡುತ್ತಿದ್ದೇವೆ. ಹೊರಗಿನಿಂದ ವಸ್ತುಗಳನ್ನು ತಂದು ಅಡುಗೆ ಮಾಡುತ್ತಿಲ್ಲ. ಇತ್ತೀಚೆಗೆ ಚಾಕೋಲೆಟ್​ ಬ್ರೌನಿ ಮಾಡಿದ್ದೆ. ಮೊದಲ ಪ್ರಯತ್ನ ವಿಫಲವಾಯಿತು. ಎರಡನೇ ಅಟೆಂಪ್ಟ್​​ನಲ್ಲಿ ಯಶಸ್ವಿಯಾದೆ’

 ನನ್ನ ಎರಡನೇ ಫ್ಯಾಮಿಲಿ ಮಿಸ್​ ಮಾಡ್ಕೋತಾ ಇದೀನಿ

ಲಾಕ್​ಡೌನ್​ ಸಮಯದಲ್ಲಿ ನಟ- ನಟಿಯರು ಶೂಟಿಂಗ್​ ಮಿಸ್​ ಮಾಡಿಕೊಳ್ಳುತ್ತಾರೆ. ಮೇಘಾ ಶೆಟ್ಟಿ ಕೂಡ ಶೂಟಿಂಗ್​ಅನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರಂತೆ. ‘ಶೂಟಿಂಗ್​ ಅನ್ನೋದು ನನಗೆ ಎರಡನೇ ಫ್ಯಾಮಿಲಿ ಇದ್ದಂತೆ. ಈಗ ಲಾಕ್​ಡೌನ್​ ಇರುವದರಿಂದ ಶೂಟಿಂಗ್​ ನಿಂತಿದೆ. ಎಲ್ಲವೂ ಸರಿಯಾಗಿ ಶೀಘ್ರವೇ ಶೂಟಿಂಗ್ ಆರಂಭವಾಗಲಿದೆ ಎನ್ನುವ ನಂಬಿಕೆ ನನ್ನದು’ ಎನ್ನುತ್ತಾರೆ ಅವರು.

 ವ್ಯಾಕ್ಸಿನ್​ ಹಾಕ್ಕೊಳ್ಳಿ

‘ಕೊವಿಡ್​ ಸಮಯದಲ್ಲಿ ಯಾರೂ ಭಯಬೀಳಬಾರದು. ನನಗೆ ಕೊರೊನಾ ಬಂದಿದೆ ಎಂದು ಆತಂಕಕ್ಕೆ ಒಳಗಾಗಬಾರದು. ಧೈರ್ಯವಾಗಿ ಅದನ್ನು ಎದುರಿಸಿಕೊಳ್ಳಬೇಕು. ಒಂದು ಪಾಸಿಟಿವಿ ಸ್ಪ್ರೆಡ್​ ಮಾಡಬೇಕು. ಜನರು ಮಾಸ್ಕ್​ ಹಾಕಿಕೊಳ್ಳುತ್ತಿದ್ದಾರೆ, ಸ್ಯಾನಿಟೈಸ್​ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸರದಿ ಬಂದಾಗ ವ್ಯಾಕ್ಸಿನ್​ ಹಾಕಿಸಿಕೊಳ್ಳಿ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ’ ಎಂದು ಅವರು ಕರೆ ನೀಡಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ

Published On - 3:36 pm, Fri, 21 May 21