
ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಹಾಗೂ ಬಾಲಿವುಡ್ ಎರಡೂ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಅವರು ದಿನೇಶ್ ವಿಜನ್ ನಿರ್ಮಾಣದ ಹಾರರ್ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಆಯುಷ್ಮಾನ್ ಖುರಾನಾ ಹೀರೋ. ಇ ಚಿತ್ರಕ್ಕೆ ‘ಥಮಾ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ದೀಪಾವಳಿಗೆ ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ (Hrithik Roshan) ಸಹಾಯ ಮಾಡಲಿದ್ದಾರೆ. ಅದು ಹೇಗೆ ಅಂತೀರಾ? ಈ ಸ್ಟೋರಿಯಲ್ಲಿದೆ ವಿವರ.
ದಿನೇಶ್ ವಿಜನ್ ಅವರು ಅನೇಕ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ. ‘ಸ್ತ್ರೀ’, ‘ಸ್ತ್ರೀ 2’, ‘ಮುಂಜ್ಯಾ’ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಈಗ ಅವರು ‘ಥಮಾ’ ಹೆಸರಿನ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಪ್ರಚಾರಕ್ಕೆ ಅವರು ದೊಡ್ಡ ತಂತ್ರವನ್ನು ರೂಪಿಸಿದ್ದಾರೆ. ಆಗಸ್ಟ್ 14ರಂದು ರಿಲೀಸ್ ಆಗಲಿರುವ ಜೂ.ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಚಿತ್ರವನ್ನು ತಮ್ಮ ಸಿನಿಮಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿದ್ದಾರೆ.
‘ವಾರ್ 2’ ಸಿನಿಮಾ ಥಿಯೇಟರ್ನಲ್ಲಿ ಪ್ರಸಾರ ಕಾಣುವಾಗ ಆರಂಭದಲ್ಲಿ ಈ ಚಿತ್ರದ ಟೀಸರ್ ಪ್ರಸಾರ ಕಾಣಲಿದೆ. ಈ ಮೂಲಕ ಅವರು ತಮ್ಮ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಡಲು ನಿರ್ಧರಿಸಿದ್ದಾರೆ. ಈಗಾಗಲೇ ಮ್ಯಾಡಾಕ್ ಸಂಸ್ಥೆ ಮೂಲಕ ಬಂದ ಸಿನಿಮಾಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ‘ಸ್ತ್ರೀ 2’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಈಗ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಕೂಡ ಇದೇ ರೀತಿಯಲ್ಲಿ ಸಕ್ಸಸ್ ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಹೃತಿಕ್ ರೋಷನ್ ಮೇಲೆ ಡಾಕ್ಯುಮೆಂಟರಿ? ಆ ವಿವಾದವೂ ಇರುತ್ತಾ?
ಕಳೆದ ವರ್ಷ ದೀಪಾವಳಿಗೆ ‘ಭೂಲ್ ಭುಲಯ್ಯ 3’ ಸಿನಿಮಾ ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡಿತ್ತು. ಈ ಬಾರಿ ರಶ್ಮಿಕಾ ಸಿನಿಮಾ ಕಮಾಲ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಬಾರಿಗೆ ಹಾರರ್ ಚಿತ್ರ ಒಪ್ಪಿಕೊಂಡಿದ್ದಾರೆ. ಈವರೆಗೆ ಅವರು ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Tue, 15 July 25