ಜೂನಿಯರ್ ಎನ್​ಟಿಆರ್​ ಬರ್ತ್​ಡೇಗೆ ಸರ್​ಪ್ರೈಸ್ ಗಿಫ್ಟ್ ಹಿಡಿದು ಬಂದ ಹೃತಿಕ್ ರೋಷನ್

ಜೂನಿಯರ್ ಎನ್​​ಟಿಆರ್ ಅವರ ಜನ್ಮದಿನದಂದು, ಹೃತಿಕ್ ರೋಷನ್ ಅವರು "ವಾರ್ 2" ಚಿತ್ರದ ಗ್ಲಿಂಪ್ಸ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಸಂತೋಷವನ್ನುಂಟು ಮಾಡಿದೆ. "ವಾರ್ 2" ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಅಭಿನಯಿಸುತ್ತಿದ್ದು, ಈ ಗ್ಲಿಂಪ್ಸ್ ಜೂನಿಯರ್ ಎನ್ಟಿಆರ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಲಿದೆ.

ಜೂನಿಯರ್ ಎನ್​ಟಿಆರ್​ ಬರ್ತ್​ಡೇಗೆ ಸರ್​ಪ್ರೈಸ್ ಗಿಫ್ಟ್ ಹಿಡಿದು ಬಂದ ಹೃತಿಕ್ ರೋಷನ್
ಜೂನಿಯರ್ ಎನ್​ಟಿಆರ್-ಶಾರುಖ್
Updated By: ರಾಜೇಶ್ ದುಗ್ಗುಮನೆ

Updated on: May 24, 2025 | 7:57 AM

ಜೂನಿಯರ್ ಎನ್​ಟಿಆರ್ ಅವರು ಮೇ 20ರಂದು ತಮ್ಮ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟನ ಜನ್ಮದಿನ ಆಚರಿಸಿಕೊಳ್ಳಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ. ಇದರ ಜೊತೆಗೆ ಹೃತಿಕ್ ರೋಷನ್ ಅವರು ಜೂನಿಯರ್ ಎನ್​ಟಿಆರ್​ಗೆ ಒಂದು ವಿಶೇಷ ಉಡುಗೊರೆ ನೀಡಲು ರೆಡಿ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. ಹಾಗಾದರೆ ಸಿಗುತ್ತಿರೋ ಉಡುಗೊರೆ ಏನು? ‘ವಾರ್ 2’ (War 2 Movie) ಚಿತ್ರದ ಗ್ಲಿಂಪ್ಸ್ ವಿಡಿಯೋ.

‘ವಾರ್’ ಸಿನಿಮಾ ಹಿಟ್ ಆದ ಬಳಿಕ ‘ವಾರ್ 2’ ಸಿನಿಮಾ ಘೋಷಣೆ ಮಾಡಲಾಯಿತು. ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ಹೃತಿಕ್ ರೋಷನ್ ಇದ್ದಾರೆ. ಹೃತಿಕ್ ಪಾತ್ರ ಏನು ಎಂಬುದು ಮೊದಲ ಪಾರ್ಟ್​ನಲ್ಲೇ ಗೊತ್ತಾಗಿದೆ. ಈಗ ಕುತೂಹಲ ಇರೋದು ಜೂನಿಯರ್ ಎನ್​ಟಿಆರ್ ಪಾತ್ರದ ಬಗ್ಗೆ. ಬರ್ತ್​ಡೇ ದಿನ ಟೀಸರ್ ಅಥವಾ ಗ್ಲಿಂಪ್ಸ್ ರಿಲೀಸ್ ಆದರೆ ಸಿನಿಮಾದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಇದನ್ನೂ ಓದಿ
ಅಮಿತಾಭ್​ಗೆ 200 ಜನರಿಂದ ರಕ್ತದಾನ; ಅವರ ಜೀವನವನ್ನೇ ನಾಶ ಮಾಡಿತು ಆ ಘಟನೆ
ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡ ಹೊರಟ ರಾಜಮೌಳಿಗೆ ಹಿನ್ನಡೆ
ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈತ್ರಾ ಕುಂದಾಪುರ ತಂದೆ
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

ಈ ಬಗ್ಗೆ ಟ್ವೀಟ್ ಮಾಡಿರೋ ಹೃತಿಕ್ ರೋಷನ್ ಜೂನಿಯರ್ ಎನ್​​ಟಿಆರ್ ಅವರಿಗೆ ಸರ್​ಪ್ರೈಸ್ ಇದೆ ಎಂಬುದನ್ನು ಹೇಳಿದ್ದಾರೆ. ಈ ಟ್ವೀಟ್ ನೋಡಿದ ಬಳಿಕ ಜೂನಿಯರ್ ಎನ್​ಟಿಆರ್ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಈ ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ.


ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಇಬ್ಬರೂ ಡ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ.  ಇವರಿಬ್ಬರು ಹಾಡೊಂದಕ್ಕೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ: ಅವಕಾಶ ಕೇಳಿಕೊಂಡು ಬೇರೆಯವರ ಬಳಿ ಹೋಗಿದ್ದ ಹೃತಿಕ್ ರೋಷನ್; ತಂದೆಗೆ ಬಂದಿತ್ತು ಸಿಟ್ಟು

ಇದಲ್ಲದೆ, ‘ದೇವರ 2’ ಹಾಗೂ ಪ್ರಶಾಂತ್ ನೀಲ್ ಸಿನಿಮಾಗಳಲ್ಲೂ ಜೂನಿಯರ್ ಎನ್​ಟಿಆರ್ ಅವರು ಅಭಿನಯಿಸುತ್ತಾ ಇದ್ದಾರೆ. ಈ ಸಿನಿಮಾಗಳ ಬಗ್ಗೆಯೂ ಫ್ಯಾನ್ಸ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೂನಿಯರ್ ಎನ್​ಟಿಆರ್ ಬರ್ತ್​ಡೇ ಪ್ರಯುಕ್ತ ಈ ಸಿನಿಮಾಗಳ ಬಗ್ಗೆಯೂ ಅಪ್​ಡೇಟ್ ಸಿಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:20 pm, Sat, 17 May 25