ಎಸ್ಎಸ್ ರಾಜಮೌಳಿ ನಿರ್ದೇಶನದ ತೆಲುಗಿನ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದೆ. ಎಂಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡು ಇಂಥ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದರಿಂದ ಇಡೀ ಭಾರತಕ್ಕೆ ಹೆಮ್ಮೆ ಆಗಿದೆ ಎಂಬುದು ನಿಜ. ಆದರೆ ‘ಆರ್ಆರ್ಆರ್’ (RRR Movie) ತಂಡದಲ್ಲಿ ಏನೋ ಬಿರುಕು ಇದೆ ಎಂಬ ಅನುಮಾನ ಮೂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಘಟನೆಗಳು ನಡೆಯುತ್ತಿದೆ. ‘ನಾಟು ನಾಟು..’ ಗಾಯಕರಲ್ಲಿ ಒಬ್ಬರಾದ ಕಾಲ ಭೈರವ (Kaala Bhairava) ಅವರು ಈಗ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಹಾಗಾದರೆ ಅವರು ಮಾಡಿದ ತಪ್ಪೇನು? ಆ ಬಗ್ಗೆ ಇಲ್ಲಿದೆ ವಿವರ..
‘ಆಸ್ಕರ್’ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಲು ‘ಆರ್ಆರ್ಆರ್’ ತಂಡದ ಸದಸ್ಯರು ಅಮೆರಿಕಕ್ಕೆ ತೆರಳಿದ್ದರು. ಈಗ ವಾಪಸ್ ಬಂದಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಾಲ ಭೈರವ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದು, ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಆ ಟ್ವೀಟ್ನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಹೆಸರನ್ನು ಕಾಲ ಭೈರವ ಪ್ರಸ್ತಾಪಿಸಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ‘ಬೆಂಕಿ ಹಚ್ಚಿ ಸುಡ್ತೀನಿ ಅಂದಿದ್ರು’; ‘ಆರ್ಆರ್ಆರ್’ ರಿಲೀಸ್ ದಿನಗಳನ್ನು ನೆನಪಿಸಿಕೊಂಡ ರಾಜಮೌಳಿ
‘ನಾಟು ನಾಟು..’ ಹಾಡಿನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹಾಡು ಜನಪ್ರಿಯ ಆಗಿರುವುದರಲ್ಲಿ ಅವರ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ. ಆದರೆ ಕಾಲ ಭೈರವ ಅವರು ತಮ್ಮ ಟ್ವೀಟ್ನಲ್ಲಿ ಈ ಸ್ಟಾರ್ ನಟರ ಹೆಸರನ್ನು ಕೈ ಬಿಟ್ಟಿರುವುದು ಅಭಿಮಾನಿಗಳಿಗೆ ಸರಿ ಎನಿಸಿಲ್ಲ. ಹಾಗಾಗಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ‘RRR’ ಚಿತ್ರತಂಡದಲ್ಲಿ ಒಳಜಗಳ; ಆಸ್ಕರ್ ಗೆದ್ದ ಬಳಿಕ ಬಯಲಾಯ್ತು ಅಸಮಾಧಾನ
‘ಹಾಗಾದರೆ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಕೊಡುಗೆ ಏನೂ ಇಲ್ಲವೇ?’ ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಟ್ರೋಲ್ ಆದ ಬಳಿಕ ಕಾಲ ಭೈರವ ಅವರು ಎಚ್ಚೆತ್ತುಕೊಂಡಿದ್ದಾರೆ. ‘ಆಸ್ಕರ್ ವೇದಿಕೆಯಲ್ಲಿ ಪರ್ಫಾರ್ಮ್ ಮಾಡಲು ಸಹಾಯ ಮಾಡಿದವರ ಹೆಸರನ್ನು ಮಾತ್ರ ನಾನು ಪ್ರಸ್ತಾಪಿಸಿದ್ದೆ. ಹಾಡಿಗೆ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಕೊಡುಗೆ ಖಂಡಿತವಾಗಿಯೂ ಇದೆ. ನನ್ನ ಪೋಸ್ಟ್ಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಕ್ಷಮೆ ಕೇಳುತ್ತೇನೆ’ ಎಂದು ಕಾಲ ಭೈರವ ಟ್ವೀಟ್ ಮಾಡಿದ್ದಾರೆ.
I have no doubt Tarak anna and Charan anna are the reason for the success of naatu naatu and RRR itself.
I was ONLY talking about who all helped me get my opportunity for the academy stage performance. Nothing else.I can see that it was conveyed wrongly and for that, I… https://t.co/Je17ZDqthj
— Kaala Bhairava (@kaalabhairava7) March 17, 2023
‘ಆರ್ಆರ್ಆರ್’ ತಂಡದಿಂದ ನಿರ್ಮಾಪಕ ಡಿವಿವಿ ದಾನಯ್ಯ ಅಂತರ ಕಾಯ್ದುಕೊಂಡಿದ್ದಾರೆ. ಹಾಗಾಗಿ ಈ ಚಿತ್ರತಂಡದಲ್ಲಿ ವೈಮನಸ್ಸು ಇದೆ ಎಂಬುದು ಸ್ಪಷ್ಟವಾಗಿದೆ. ಅದರ ಜೊತೆಗೆ ಕಾಲ ಭೈರವ ಅವರು ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಹೆಸರನ್ನು ಮೊದಲು ಪ್ರಸ್ತಾಪಿಸದೇ ಇರುವುದು ಕೂಡ ಅನುಮಾನಕ್ಕೆ ಕಾರಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:05 pm, Fri, 17 March 23