ಅಭಿಮಾನಿಗಳ ಜೊತೆ ‘ಕಾಟೇರ’ ಯಶಸ್ಸನ್ನು ಸಂಭ್ರಮಿಸಲಿದ್ದಾರೆ ದರ್ಶನ್

|

Updated on: Jan 01, 2024 | 11:42 AM

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಈ ಚಿತ್ರ ಮೂರು ದಿನಕ್ಕೆ 58 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ತಂಡದ ಖುಷಿ ಹೆಚ್ಚಿಸಿದೆ. ಈ ಖುಷಿಯನ್ನು ಸಂಭ್ರಮಿಸಲು ತಂಡ ಮುಂದಾಗಿದೆ.

ಅಭಿಮಾನಿಗಳ ಜೊತೆ ‘ಕಾಟೇರ’ ಯಶಸ್ಸನ್ನು ಸಂಭ್ರಮಿಸಲಿದ್ದಾರೆ ದರ್ಶನ್
ದರ್ಶನ್
Follow us on

ನಟ ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ದರ್ಶನ್ ಹಾಗೂ ತರುಣ್ ಸುಧೀರ್ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾಗೆ ಬಂಡವಾಳ ಹೂಡಿದ ರಾಕ್​ಲೈನ್ ವೆಂಕಟೇಶ್ ಅವರು ಗೆಲುವು ಕಂಡಿದ್ದಾರೆ. ಈ ಚಿತ್ರದ ಸಕ್ಸಸ್ ಮೀಟ್ ಆಯೋಜನೆ ಮಾಡಿದೆ. ಇದರ ಜೊತೆಗೆ ದರ್ಶನ್ ಅವರು ಅಭಿಮಾನಿಗಳ ಜೊತೆಗೆ ಚಿತ್ರದ ಯಶಸ್ಸನ್ನು ಸಂಭ್ರಮಿಸಲಿದ್ದಾರೆ.

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಈ ಚಿತ್ರ ಮೂರು ದಿನಕ್ಕೆ 58 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ತಂಡದ ಖುಷಿ ಹೆಚ್ಚಿಸಿದೆ. ಈ ಖುಷಿಯನ್ನು ಸಂಭ್ರಮಿಸಲು ತಂಡ ಮುಂದಾಗಿದೆ. ಈ ಬಗ್ಗೆ ತಂಡದ ಕಡೆಯಿಂದ ಮಾಹಿತಿ ಸಿಕ್ಕಿದೆ. ಸಂಜೆ ಏಳು ಗಂಟೆಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್​ ಮಾಲ್​ನಲ್ಲಿ ಸಾರ್ವಜನಿಕರ ಜೊತೆಗೆ ಚಿತ್ರದ ಯಶಸ್ಸನ್ನು ಸಂಭ್ರಮಿಸಲಿದ್ದಾರೆ.

‘ಕಾಟೇರ’ ಬಗ್ಗೆ

‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಜಾತಿ ಪದ್ಧತಿ, ಸಮಾಜದಲ್ಲಿ ಮೇಲು-ಕೀಳು ಇರಬಾರದು ಎಂದು ಸಿನಿಮಾದಲ್ಲಿ ಸಾರಲಾಗಿದೆ. ಈ ಚಿತ್ರದಲ್ಲಿ ದರ್ಶನ್ ಅವರು ಎರಡು ಶೇಡ್​ನ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲಾ ಪಾತ್ರಗಳು ಗಮನ ಸೆಳೆದಿವೆ. ದರ್ಶನ್ ಅವರು ಆ್ಯಕ್ಷನ್ ಮೂಲಕವೂ ಮಿಂಚಿದ್ದಾರೆ.

ಗಳಿಕೆ ಲೆಕ್ಕ..

ಡಿಸೆಂಬರ್ 29ರಂದು ‘ಕಾಟೇರ’ ಸಿನಿಮಾ ಬಿಡುಗಡೆ ಆಯಿತು. ಶುಕ್ರವಾರ ಈ ಸಿನಿಮಾ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಶನಿವಾರ 17.35 ಕೋಟಿ ರೂಪಾಯಿ ಹಾಗೂ ಭಾನುವಾರ (ಡಿಸೆಂಬರ್ 31) ಈ ಚಿತ್ರ 20.94 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರದ ಒಟ್ಟಾರೆ ಗಳಿಕೆ 58.8 ಕೋಟಿ ರೂಪಾಯಿ ಆಗಿದೆ ಎಂದು ದರ್ಶನ್ ಆಪ್ತರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:20 am, Mon, 1 January 24