ದಳಪತಿ ವಿಜಯ್ ಈಗ ‘GOAT’; ಈ ಟೈಟಲ್ನ ಅರ್ಥ ಏನು?
ಹೊಸ ವರ್ಷಕ್ಕೆ ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ವಿಜಯ್ ಅವರ 68ನೇ ಸಿನಿಮಾ ಇದಾಗಿದ್ದು, ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಎನ್ನುವ ಶೀರ್ಷಿಕೆ ಇಡಲಾಗಿದೆ.
‘ದಳಪತಿ’ ವಿಜಯ್ (Thalapathy Vijay) ನಟನೆಯ ‘ಲಿಯೋ’ ಸಿನಿಮಾ ಯಶಸ್ಸು ಕಂಡಿತು. ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಪಡೆದ ಹೊರತಾಗಿಯೂ ಸಿನಿಮಾ ಹಿಟ್ ಆಯಿತು. ಈಗ ಅವರ 68ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಇದಕ್ಕೆ ‘GOAT’ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಹೊಸ ವರ್ಷದ ಸಂದರ್ಭದಲ್ಲಿ ರಿಲೀಸ್ ಆಗಿದೆ.
2023ನೇ ವರ್ಷ ವಿಜಯ್ಗೆ ಆಶಾದಾಯಕವಾಗಿತ್ತು. ದಳಪತಿ ವಿಜಯ್ ನಟನೆಯ ಎರಡು ಸಿನಿಮಾಗಳು ರಿಲೀಸ್ ಆದವು. ‘ವಾರಿಸು’ ಹಾಗೂ ‘ಲಿಯೋ’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿವೆ. ಹೊಸ ವರ್ಷಕ್ಕೆ ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ವಿಜಯ್ ಅವರ 68ನೇ ಸಿನಿಮಾ ಇದಾಗಿದ್ದು, ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಎನ್ನುವ ಶೀರ್ಷಿಕೆ ಇಡಲಾಗಿದೆ.
ವಿಜಯ್ ಅವರು ಈ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಅಕ್ಕ ಪಕ್ಕ ನಿಂತಿದ್ದಾರೆ. ಹಿಂಭಾಗದಲ್ಲಿ ಪ್ಯಾರಾಚ್ಯೂಟ್ ಇದೆ. ಇದು ಅಡ್ವೆಂಚರ್ ಸಿನಿಮಾ ಇರಬಹುದೇ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ದಳಪತಿ ವಿಜಯ್ ಹೊಸ ಸಿನಿಮಾ ಹೆಸರು ಘೋಷಣೆ, ಇದು ಆಕಾಶದಲ್ಲಿ ನಡೆವ ಕತೆ
ವಿಜಯ್ ಅವರು ಪ್ರತಿ ಚಿತ್ರದ ಕೆಲಸವನ್ನು ವೇಗವಾಗಿ ಮಾಡಿ ಮುಗಿಸುತ್ತಾರೆ. ‘ಗೋಟ್’ ಚಿತ್ರದಲ್ಲಿ ವಿಜಯ್ ಜೊತೆ ಮೋಹನ್, ಪ್ರಶಾಂತ್, ಪ್ರಭುದೇವ, ಮೀನಾಕ್ಷಿ ಚೌಧರಿ, ಲೈಲಾ, ಸ್ನೇಹ ಹಾಗೂ ಜಯರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯುವಾನ್ ಶಂಕರ್ ರಾಜ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಸಿನಿಮಾ ಈ ವರ್ಷ ಥಿಯೇಟರ್ಗೆ ಬರಲಿದೆ. ‘ಮಾನಾಡು’ ಮೊದಲಾದ ಸಿನಿಮಾಗಳಲ್ಲಿ ವೆಂಕಟ್ ಪ್ರಭು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Mon, 1 January 24