‘ಶೀಘ್ರವೇ ಮಹತ್ವದ ಘೋಷಣೆ ಮಾಡುತ್ತೇನೆ ಎಂದ ಕಾಜಲ್ ಅಗರ್​​ವಾಲ್​’​; ನಟಿ ಪ್ರೆಗ್ನೆಂಟ್​ ಎಂದ ಅಭಿಮಾನಿಗಳು

ಹೀರೋಯಿನ್​ಗಳು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಮದುವೆ ಆದ ನಂತರ ಮಗು ಮಾಡಿಕೊಳ್ಳೋಕೆ ವಿಳಂಬ ಮಾಡುತ್ತಾರೆ. ಆದರೆ, ಕಾಜಲ್​ ಈ ವಿಚಾರದಲ್ಲಿ ಹಾಗಿಲ್ಲ.

‘ಶೀಘ್ರವೇ ಮಹತ್ವದ ಘೋಷಣೆ ಮಾಡುತ್ತೇನೆ ಎಂದ ಕಾಜಲ್ ಅಗರ್​​ವಾಲ್​’​; ನಟಿ ಪ್ರೆಗ್ನೆಂಟ್​ ಎಂದ ಅಭಿಮಾನಿಗಳು
ಕಾಜಲ್ ಅಗರ್​​ವಾಲ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 07, 2021 | 4:39 PM

ನಟಿ ಕಾಜಲ್​ ಅಗರ್​ವಾಲ್​ ಕಳೆದ ಅಕ್ಟೋಬರ್​ ತಿಂಗಳಲ್ಲಿ ಮದುವೆ ಆಗಿದ್ದರು. ತಮ್ಮ ಬಾಯ್​ಫ್ರೆಂಡ್​ ಗೌತಮ್​ ಅವರನ್ನು ಮದುವೆ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಶೀಘ್ರದಲ್ಲೇ ಈ ಜೋಡಿ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿಕೊಳ್ಳುತ್ತಿದೆ. ಅದಕ್ಕೂ ಮೊದಲೇ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಕಾಜಲ್​ ಪ್ರೆಗ್ನೆಂಟ್​ ಎನ್ನುವ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ಅವರು ಪ್ರಮುಖ ಘೋಷಣೆ ಮಾಡುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಹೀರೋಯಿನ್​ಗಳು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಮದುವೆ ಆದ ನಂತರ ಮಗು ಮಾಡಿಕೊಳ್ಳೋಕೆ ವಿಳಂಬ ಮಾಡುತ್ತಾರೆ. ಆದರೆ, ಕಾಜಲ್​ ಈ ವಿಚಾರದಲ್ಲಿ ಹಾಗಿಲ್ಲ. ಮದುವೆ ಆದ ಒಂದೇ ವರ್ಷದಲ್ಲಿ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೀಘ್ರವೇ ಪ್ರಮುಖ ಘೋಷಣೆ ಮಾಡುತ್ತೇನೆ ಎಂದಿದ್ದಾರೆ.

ಕಾಜಲ್ ಅಗರ್​ವಾಲ್​ ಅವರು ಅಕ್ಕಿನೇನಿ ನಾಗಾರ್ಜುನ ನಟನೆಯ ‘ಘೋಸ್ಟ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ತೆಲುಗು ಬಿಗ್​ ಬಾಸ್​ ಸೀಸನ್​ 5ರ ನಿರೂಪಣೆಯಲ್ಲಿ ಬ್ಯುಸಿ ಇರುವ ನಾಗಾರ್ಜುನ ಶೀಘ್ರವೇ ಈ ಸಿನಿಮಾದ ಸೆಟ್​ ಸೇರಿಕೊಳ್ಳುತ್ತಿದ್ದಾರೆ. ಆದರೆ, ಈ ಸಿನಿಮಾದಿಂದ ಹೊರ ನಡೆಯಲು ಕಾಜಲ್​ ನಿರ್ಧರಿಸಿದ್ದಾರೆ. ಗರ್ಭಿಣಿ ಆದ ನಂತರ ಶೂಟಿಂಗ್​ ಪೂರ್ಣಗೊಳಿಸೋದು ಕಷ್ಟ. ಈ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇನ್ನು, ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿಯೂ ಕಾಜಲ್​ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಪ್ಯಾಚ್​ವರ್ಕ್​ ಕೆಲಸಗಳು ಬಾಕಿ ಇವೆ. ಇದನ್ನು ಕಾಜಲ್​ ಶೀಘ್ರವೇ ಪೂರ್ಣಗೊಳಿಸಲಿದ್ದಾರೆ. ನಂತರ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಇನ್ನು, ಅವರು ಒಪ್ಪಿಕೊಂಡಿರುವ ಬಹುತೇಕ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ‘ಇಂಡಿಯನ್ 2’ ಸಿನಿಮಾದಲ್ಲಿಯೂ ಕಾಜಲ್​ ಅಗರ್​ವಾಲ್​ ನಟಿಸುತ್ತಿದ್ದಾರೆ. ಕಮಲ್​ ಹಾಸನ್​ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೆಲಸಗಳು ಸೆಟ್ಟೇರುವುದು ವಿಳಂಬವಾಗುತ್ತಲೇ ಇದೆ.

ಕೆಲ ತಿಂಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್​, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ’ ಎಂದಿದ್ದರು.

ಇದನ್ನೂ ಓದಿ: ಮದುವೆ ನಂತರ ಬಿಕಿನಿ ತೊಟ್ಟ ಕಾಜಲ್​ ಅಗರ್​ವಾಲ್​; ಆದರೆ, ಇದರ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್