AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ನಿರೀಕ್ಷೆಗಿಂತಲೂ ಬೇಗ ಬರಲಿದೆ ‘ಕಲ್ಕಿ 2’

Kalki 2898 AD: ಪ್ರಭಾಸ್ ಸಿನಿಮಾಗಳು ಒಂದು ವರ್ಷಕ್ಕೆ ಮುಗಿದಿದ್ದೇ ಇಲ್ಲ. ಶುರುವಾದ ಬಳಿಕ ಬಿಡುಗಡೆಗೆ ಕನಿಷ್ಟ ಎರಡು ವರ್ಷಗಳಾದರೂ ಬೇಕು. ‘ಬಾಹುಬಲಿ’ ಸಿನಿಮಾ ಇಂದಲೂ ಇದೇ ಕತೆ ನಡೆಯುತ್ತಾ ಬಂದಿದೆ. ಆದರೆ ಈ ಬಾರಿ ನಿರ್ದೇಶಕ ನಾಗ ವಂಶಿ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿರೀಕ್ಷೆಗಿಂತಲೂ ಬೇಗನೇ ಸಿನಿಮಾ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹಾಗೆಂದು ಇದೇ ವರ್ಷ ಸಿನಿಮಾ ಬರುತ್ತದೆ ಎಂದೇನೂ ಇಲ್ಲ.

ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ನಿರೀಕ್ಷೆಗಿಂತಲೂ ಬೇಗ ಬರಲಿದೆ ‘ಕಲ್ಕಿ 2’
Prabhas Kalki 2
ಮಂಜುನಾಥ ಸಿ.
|

Updated on: Jun 06, 2026 | 11:23 PM

Share

ಪ್ರಭಾಸ್ (Prabhas) ಸಿನಿಮಾಗಳು ಒಂದು ವರ್ಷಕ್ಕೆ ಮುಗಿದಿದ್ದೇ ಇಲ್ಲ. ಶುರುವಾದ ಬಳಿಕ ಬಿಡುಗಡೆಗೆ ಕನಿಷ್ಟ ಎರಡು ವರ್ಷಗಳಾದರೂ ಬೇಕು. ‘ಬಾಹುಬಲಿ’ ಸಿನಿಮಾ ಇಂದಲೂ ಇದೇ ಕತೆ ನಡೆಯುತ್ತಾ ಬಂದಿದೆ. ಆದರೆ ಈ ಬಾರಿ ನಿರ್ದೇಶಕ ನಾಗ ವಂಶಿ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿರೀಕ್ಷೆಗಿಂತಲೂ ಬೇಗನೇ ಸಿನಿಮಾ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹಾಗೆಂದು ಇದೇ ವರ್ಷ ಸಿನಿಮಾ ಬರುತ್ತದೆ ಎಂದೇನೂ ಇಲ್ಲ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಸಿನಿಮಾವು 2024ರ ಅತಿ ದೊಡ್ಡ ಚಿತ್ರಮಂದಿರ ಯಶಸ್ಸುಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಗಳ ಬಳಿಕ ಅಂದರೆ ಇದೇ ವರ್ಷ ಸಿನಿಮಾದ ಸೀಕ್ವೆಲ್​​ನ ಚಿತ್ರೀಕರಣ ಶುರುವಾಗಿದೆ. ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಇನ್ನೂ ಭಾಗಿ ಸಹ ಆಗಿಲ್ಲ. ಆದರೆ ಸಿನಿಮಾ ಬಿಡುಗಡೆ ಬಗ್ಗೆ ನಿರ್ದೇಶಕ ನಾಗವಂಶಿ ಆಸಕ್ತಿಕರ ಮಾಹಿತಿ ಹಂಚಿಕೊಂಡಿದ್ದಾರೆ.

ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಾಗ್ ಅಶ್ವಿನ್, ‘ಕಲ್ಕಿ 2’ ಸಿನಿಮಾದ ಕೆಲಸಗಳು ಈಗಾಗಲೇ ಆರಂಭವಾಗಿವೆ. ಮುಂದಿನ ತಿಂಗಳಿನಿಂದ ಶೂಟಿಂಗ್ ಮುಂದುವರಿಸಲು ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಇದನ್ನು ಅತ್ಯಂತ ವೇಗದ ಗತಿಯಲ್ಲಿ ಪೂರ್ಣಗೊಳಿಸಲಿದ್ದೇವೆ’ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಮತ್ತು ಅಮಿತಾಬ್ ಬಚ್ಚನ್ ಅವರು ಈಗಾಗಲೇ ‘ಕಲ್ಕಿ 2’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಬಚ್ಚನ್ ಅವರು ಸೆಟ್​​ನ ಕೆಲ ಚಿತ್ರಗಳನ್ನು ತಮ್ಮ ಬ್ಲಾಗ್​​ನಲ್ಲಿ ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಪ್ರಭಾಸ್ ಕ್ರೇಜ್ ಹೇಗಿದೆ? ಸ್ವಂತ ಅನುಭವ ವಿವರಿಸಿದ ಕರಣ್ ಜೋಹರ್

‘ಕಲ್ಕಿ 2’ ಚಿತ್ರದ ತಯಾರಕರು ಚಿತ್ರೀಕರಣ ಬೇಗನೆ ಮುಗಿಸಲಿದ್ದಾರಾದರೂ ಸಿನಿಮಾದ ಪೋಸ್ಟ್ ಪ್ರೊಡಕ್ಷನ್​​ಗೆ ಹೆಚ್ಚು ಸಮಯ ತೆಗೆದುಕೊಳ್ಳಲಿದ್ದಾರೆ. ಏಕೆಂದರೆ ಈ ಸಿನಿಮಾನಲ್ಲಿ ಸಾಕಷ್ಟು ವಿಎಫ್​​ಎಕ್ಸ್, ಗ್ರೀನ್ ಸ್ಕ್ರೀನ್ ಮತ್ತು ಸ್ಪೆಷಲ್ ಎಫೆಕ್ಟ್ ದೃಶ್ಯಗಳಿವೆ. ಭವಿಷ್ಯತ್ ಕಾಲದ ದೃಶ್ಯಗಳ ಜೊತೆಗೆ ಕುರುಕ್ಷೇತ್ರದ ದೃಶ್ಯಗಳು ಸಹ ಇವೆ. ಇದಕ್ಕೆಲ್ಲ ಹೆಚ್ಚಿನ ಸಮಯದ ಅಗತ್ಯವಿದೆ. ಆದರೂ ಸಹ ಸಿನಿಮಾವನ್ನು ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಚಿತ್ರಮಂದಿರಕ್ಕೆ ತರುವ ಯೋಚನೆಯಲ್ಲಿ ಚಿತ್ರತಂಡ ಇದೆಯಂತೆ.

ಇದೆಲ್ಲದರ ನಡುವೆ, ನಟಿ ದೀಪಿಕಾ ಪಡುಕೋಣೆ ಸಹ ಚಿತ್ರತಂಡಕ್ಕೆ ಕೈ ಕೊಟ್ಟಿದ್ದಾರೆ. ಮೊದಲ ಭಾಗದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ, ಎರಡನೇ ಭಾಗದ ಸಿನಿಮಾಕ್ಕೆ ಕೈ ಕೊಟ್ಟಿದ್ದಾರೆ. ಇದೀಗ ಚಿತ್ರತಂಡವು ಬೇರೆ ನಾಯಕಿಯ ಹುಡುಕಾಟದಲ್ಲಿದ್ದು, ದೀಪಿಕಾ ಪಡುಕೋಣೆ ಪಾತ್ರವನ್ನು ಎರಡನೇ ಭಾಗದಲ್ಲಿ ಸಾಯಿ ಪಲ್ಲವಿ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ