AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ

ಪ್ರಭಾಸ್ ಅವರ 'ಸ್ಪಿರಿಟ್' ಹಾಗೂ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ (SVC 63) 2027ರ ಈದ್ ಹಬ್ಬದಂದು ಬಿಡುಗಡೆಯಾಗಲು ಸಜ್ಜಾಗಿವೆ. ಟಾಲಿವುಡ್ ಮಂದಿ ಸಲ್ಮಾನ್ ಖಾನ್ ಚಿತ್ರದ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಭಾಗಿಯಾಗಿರುವುದು ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಪ್ರಭಾಸ್ ವಿರುದ್ಧ ಸಲ್ಮಾನ್ ಅವರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿದೆಯೇ ಎಂಬ ಚರ್ಚೆ ಶುರುವಾಗಿದೆ.

ಪ್ರಭಾಸ್ ವಿರುದ್ಧ ಸಲ್ಮಾನ್ ಖಾನ್​​ನ ಎತ್ತಿಕಟ್ಟಿದ ಟಾಲಿವುಡ್ ಮಂದಿ
ಪ್ರಭಾಸ್-ಸಲ್ಮಾನ್
TV9 Web
| Edited By: |

Updated on: Apr 24, 2026 | 3:05 PM

Share

ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎಸ್​​ವಿಸಿ 63’ ಎಂದು ಹೆಸರು ಇಡಲಾಗಿದೆ. 2027ರ ಈದ್ ಪ್ರಯುಕ್ತ ಅವರ ಈ ಚಿತ್ರ ರಿಲೀಸ್ ಆಗಲಿದೆ. ಈ ವಿಷಯ ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಏಕೆಂದರೆ ಈಗಾಗಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದ್ದು, ಎರಡೂ ಚಿತ್ರಗಳ ನಡುವೆ ಕ್ಲ್ಯಾಶ್ ಆಗಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾ ರಿಲೀಸ್ ದಿನಾಂಕವನ್ನು ಈ ಮೊದಲೇ ಘೋಷಣೆ ಮಾಡಿದ್ದಾರೆ. ಈದ್ ಪ್ರಯುಕ್ತ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರಲಿದೆ. ಇದಕ್ಕೆ ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ, ತೆಲುಗು ಜೊತೆಗೆ ಚಿತ್ರವನ್ನು ಹಿಂದಿಯಲ್ಲೂ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಆದರೆ, ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾ ಸ್ಪರ್ಧೆ ನೀಡುತ್ತಿದೆ. ಸಲ್ಲು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ತೆಲುಗಿನವರು ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಪ್ರಭಾಸ್ ಚಿತ್ರದ ವಿರುದ್ಧ ಸಲ್ಮಾನ್ ಖಾನ್ ಅವರನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂಬ ಮಾತು ಕೇಳಿ ಬಂದಿದೆ.

ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ಮುನ್ನ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡಿದ್ದರು. ವಂಶಿ ಈಗ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ತೆಲುಗು ನಿರ್ಮಾಪಕ ದಿಲ್ ರಾಜು ಪ್ರೆಸೆಂಟ್ ಮಾಡುತ್ತಿದ್ದಾರೆ. ಅವರು ಕೂಡ ಟಾಲಿವುಡ್​​ನವರೇ. ಈ ಹೊಸ ಸಿನಿಮಾ 2027ರ ಮಾರ್ಚ್ 9-1ರಂದು ಈದ್ ಪ್ರಯುಕ್ತ ರಿಲೀಸ್ ಆಗಲಿದೆ. ಈದ್ ಬಾಲಿವುಡ್ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಸಲ್ಮಾನ್ ಖಾನ್ ಈ ದಿನಾಂಕ ಮಿಸ್ ಮಾಡುವುದೇ ಇಲ್ಲ. ಇನ್ನು, ಉಳಿದ ಕೆಲ ಸಿನಿಮಾಗಳು ಇದೇ ಸಂದರ್ಭದಲ್ಲಿ ತೆರೆಗೆ ಬರಹುದು.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸೆಟ್​​ನಲ್ಲಿ ಬೆಂಕಿ: ಹಲವರಿಗೆ ಗಾಯ

ಇನ್ನು, ‘ಸ್ಪಿರಿಟ್’ ಚಿತ್ರಕ್ಕೆ ದಕ್ಷಿಣದ ಹೆಚ್ಚು ಬೇಡಿಕೆ, ಸಲ್ಮಾನ್ ಸಿನಿಮಾಗೆ ಉತ್ತರ ಭಾರತದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಈ ಕ್ಲ್ಯಾಶ್ ಅನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ. ಇಷ್ಟೇ ಅಲ್ಲದೆ, ಸಲ್ಮಾನ್ ಅಥವಾ ಪ್ರಭಾಸ್ ಸಿನಿಮಾ ಪೈಕಿ ಯಾವುದಾದರೂ ಒಂದು ಸಿನಿಮಾ ಶೂಟಿಂಗ್ ವಿಳಂಬ ಕಾರಣಕ್ಕೆ ಮುಂದಕ್ಕೆ ಹೋದರೆ ದೊಡ್ಡ ಕ್ಲ್ಯಾಶ್ ಮಿಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us