‘ಕಲ್ಕಿ 2898 ಎಡಿ’ ಚಿತ್ರದ ಪಾರ್ಟ್​ 2 ಶೂಟಿಂಗ್​ ಶೇ.60ರಷ್ಟು ಪೂರ್ಣ; ರಿಲೀಸ್ ಯಾವಾಗ?

|

Updated on: Jun 30, 2024 | 8:06 PM

ಪ್ರಭಾಸ್​, ಅಮಿತಾಭ್​ ಬಚ್ಚನ್​, ದೀಪಿಕಾ ಪಡುಕೋಣೆ, ಕಮಲ್​ ಹಾಸನ್​ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ಮೊದಲ ವೀಕೆಂಡ್​ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಿದೆ. ‘ಕಲ್ಕಿ 2898 ಎಡಿ: ಪಾರ್ಟ್​ 2’ ಕೂಡ ಬರಲಿದೆ. ಅದರ ಬಗ್ಗೆ ಪ್ರೇಕ್ಷಕರಿಗೆ ಈಗಲೇ ನಿರೀಕ್ಷೆ ಮೂಡಿದೆ. ಚಿತ್ರತಂಡ ಈಗಾಗಲೇ ಒಂದಷ್ಟು ದೃಶ್ಯಗಳನ್ನು ಚಿತ್ರಿಸಿಕೊಂಡಿದೆ.

‘ಕಲ್ಕಿ 2898 ಎಡಿ’ ಚಿತ್ರದ ಪಾರ್ಟ್​ 2 ಶೂಟಿಂಗ್​ ಶೇ.60ರಷ್ಟು ಪೂರ್ಣ; ರಿಲೀಸ್ ಯಾವಾಗ?
ಪ್ರಭಾಸ್​
Follow us on

‘ಬಾಹುಬಲಿ 2’ ಬಳಿಕ ನಟ ಪ್ರಭಾಸ್​ (Prabhas) ಅವರು ಒಂದು ಭರ್ಜರಿ ಯಶಸ್ಸಿಗಾಗಿ ಕಾದಿದ್ದರು. ‘ಕಲ್ಕಿ 2989 ಎಡಿ’ (Kalki 2898 AD) ಸಿನಿಮಾದ ಮೂಲಕ ಅವರಿಗೆ ಅಂಥದ್ದೊಂದು ಗೆಲುವು ಸಿಕ್ಕಿದೆ. ಬಹುತಾರಾಗಣ ಇರುವ ಈ ಸಿನಿಮಾ ಜೂನ್​ 27ರಂದು ಬಿಡುಗಡೆ ಆಯಿತು. ಎಲ್ಲ ಕಡೆಗಳಲ್ಲೂ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಅಬ್ಬರಿಸುತ್ತಿದೆ. ಕೆಲವೇ ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಸೂಚನೆ ಸಿಕ್ಕಿದೆ. ಈ ನಡುವೆ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​ (Kalki 2898 AD Sequel) ಬಗ್ಗೆ ಮಾತು ಕೇಳಿಬರಲು ಆರಂಭಿಸಿದೆ. ಪಾರ್ಟ್​ 2 ಶೂಟಿಂಗ್​ ಬಗ್ಗೆ ಮಾಹಿತಿ ಕೂಡ ಹೊರಬಿದ್ದಿದೆ.

‘ಮಹಾನಟಿ’ ಸಿನಿಮಾ ಮೂಲಕ ಜನರ ಮನ ಗೆದ್ದಿದ್ದ ನಿರ್ದೇಶಕ ನಾಗ್​ ಅಶ್ವಿನ್​ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಹೊಸ ಲೋಕ ತೋರಿಸಿದ್ದಾರೆ. ಪುರಾಣ ಮತ್ತು ಸೈನ್ಸ್​ ಫಿಕ್ಷನ್ ಮಿಶ್ರಣ ಮಾಡಿ ಅವರು ಬೇರೆಯದೇ ಕಥೆಯನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಆದರೆ ಈ ಕಥೆ ಅಂತ್ಯವಾಗಿಲ್ಲ. ‘ಕಲ್ಕಿ 2898 ಎಡಿ’ ಸಿನಿಮಾಗೆ ಸೀಕ್ವೆಲ್​ ಬರಲಿದೆ ಎಂದು ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪ್ರಭಾಸ್​ರ ‘ಕಲ್ಕಿ 2898 ಎಡಿ’ಯಲ್ಲಿ ‘ದಿವಂಗತ ಸ್ಟಾರ್’ ಇದು ಹೇಗೆ ಸಾಧ್ಯ?

‘ಕಲ್ಕಿ 2898 ಎಡಿ: ಪಾರ್ಟ್​ 2’ ಸಿನಿಮಾದ ಬಗ್ಗೆ ನಿರ್ಮಾಪಕ, ‘ವೈಜಯಂತಿ ಮೂವೀಸ್​’ ಸಂಸ್ಥೆಯ ಮಾಲಿಕ ಅಶ್ವಿನಿ ದತ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸೀಕ್ವೆಲ್​ಗೆ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಮುಖ ದೃಶ್ಯಗಳ ಶೂಟಿಂಗ್ ಮಾಡುವುದು ಬಾಕಿ ಇದೆ. ರಿಲೀಸ್​ ದಿನಾಂಕದ ಬಗ್ಗೆ ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ’ ಎಂದು ನಿರ್ಮಾಪಕರು ಹೇಳಿದ್ದಾರೆ.

ಶೇ.60ರಷ್ಟು ಶೂಟಿಂಗ್​ ಮುಗಿದಿದೆ ಎಂದಮಾತ್ರಕ್ಕೆ ‘ಕಲ್ಕಿ 2898 ಎಡಿ ಪಾರ್ಟ್​ 2’ ಸಿನಿಮಾ ಆದಷ್ಟು ಬೇಗ ಬರಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ, ಆ ಪ್ರಾಜೆಕ್ಟ್​ಗೆ ಸಾಕಷ್ಟು ಸಮಯ ಹಿಡಿಯಲಿದೆ. ‘ಕಲ್ಕಿ 2898 ಎಡಿ’ ಸೂಪರ್​ ಹಿಟ್​ ಆಗಿರುವುದರಿಂದ ಅದರ ಸೀಕ್ವೆಲ್​ ಅನ್ನು ಇನ್ನಷ್ಟು ದೊಡ್ಡದಾಗಿ ಮಾಡಲು ತಂಡ ನಿರ್ಧರಿಸಿದೆ. ಸೀಕ್ವೆಲ್​ ನಿರ್ಮಾಣಕ್ಕೆ 3 ವರ್ಷ ಸಮಯ ಬೇಕು ಎಂದು ನಿರ್ದೇಶಕ ನಾಗ್​ ಅಶ್ವಿನ್​ ಹೇಳಿದ್ದಾರೆ. ಹಾಗಾಗಿ ಈ ಸಿನಿಮಾದ ಬಿಡುಗಡೆ ಇನ್ನೂ 3 ವರ್ಷ ತಡವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:05 pm, Sun, 30 June 24