
ಪ್ರಭಾಸ್, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿರೋ ‘ಕಲ್ಕಿ 2898 ಎಡಿ’ (Kalki 2898 ಎಡಿ) ಚಿತ್ರ 2023ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾಗೆ ಸೀಕ್ವೆಲ್ ಬರಬೇಕಿತ್ತು. ಆದರೆ, ಈಗ ಅದರ ಸ್ಥಿತಿ ಡೋಲಾಯಮಾನವಾಗಿದೆ. ಈ ಸಿನಿಮಾ ಸೆಟ್ಟೇರುತ್ತದೆಯೋ ಅಥವಾ ಇಲ್ಲವೋ ಎಂಬುದೇ ಅನುಮಾನ ಆಗಿದೆ. ಇದಕ್ಕೆ ಕಾರಣ ದೀಪಿಕಾ ಪಡುಕೋಣೆ. ಅವರು ‘ಕಲ್ಕಿ 2898 ಎಡಿ’ ಸೀಕ್ವೆಲ್ನಿಂದ ಹೊರ ಬಂದಿದ್ದಾರಂತೆ. ಈ ಕಾರಣದಿಂದ ಸೀಕ್ವೆಲ್ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗಲೇ ನಾಗ್ ಅಶ್ವಿನ್ ಅವರು ಮಾಡಿರೋ ಪೋಸ್ಟ್ ಗಮನ ಸೆಳೆದಿದೆ.
‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣ ಮಾಡಿದ ವೈಜಯಂತಿ ಮೂವಿಸ್ ಈ ಬಗ್ಗೆ ಟ್ವೀಟ್ ಮಾಡಿದೆ. ದೀಪಿಕಾ ಪಡುಕೋಣೆ ಅವರು ಸಿನಿಮಾದ ಭಾಗ ಆಗೋದಿಲ್ಲ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ. ಇತ್ತೀಚೆಗೆ ಪ್ರಭಾಸ್ ಬಗ್ಗೆ ದೀಪಿಕಾ ನೆಗೆಟಿವ್ ಹೇಳಿಕೆ ನೀಡಿದ್ದರು. ಇದರ ಜೊತೆಗೆ ದೀಪಿಕಾ ಅವರು 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದರು. ಈ ಎಲ್ಲಾ ಕಾರಣದಿಂದ ಸಿನಿಮಾದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ.
This is to officially announce that @deepikapadukone will not be a part of the upcoming sequel of #Kalki2898AD.
After careful consideration, We have decided to part ways. Despite the long journey of making the first film, we were unable to find a partnership.
And a film like…
— Vyjayanthi Movies (@VyjayanthiFilms) September 18, 2025
ಈ ಬೆನ್ನಲ್ಲೇ ನಾಗ್ ಅಶ್ವಿನ್ ಅವರು ಪೋಸ್ಟ್ ಒಂದನ್ನು ಮಾಡಿದ್ದಾರೆ. ‘ಏನಾಗಿದೆ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ. ಆದರೆ, ಮುಂದೆ ಏನಾಗುತ್ತದೆ ಎಂಬುದನ್ನು ಆಯ್ಕೆ ಮಾಡಬಹುದು’ ಎಂದು ನಾಗ್ ಅಶ್ವಿನ್ ಹೇಳಿದ್ದಾರೆ. ಅವರ ಪೋಸ್ಟ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ದೀಪಿಕಾ ಬಗ್ಗೆ ಬೇಸರ ಹೊರಹಾಕಿ ಈ ಪೋಸ್ಟ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಕ್ಕೆ: ಕಾರಣವೇನು?
ಮೊದಲ ಭಾಗಕ್ಕೆ ಪಡೆದ ಹಣಕ್ಕಿಂತ ಶೇ.25ರಷ್ಟು ಹೆಚ್ಚಿನ ಹಣವನ್ನು ದೀಪಿಕಾ ಕೇಳಿದ್ದಾರಂತೆ. ಇಷ್ಟೇ ಅಲ್ಲ, ದಿನಕ್ಕೆ 7-8 ಗಂಟೆ ಮಾತ್ರ ಶೂಟಿಂಗ್ನಲ್ಲಿ ಭಾಗಿ ಆಗೋದಾಗಿ ಹೇಳಿದ್ದಾರಂತೆ. ‘ಕಲ್ಕಿ’ ಅಂತಹ ಸಿನಿಮಾಗಳಿಗೆ ಇಷ್ಟು ಸಣ್ಣ ಮಟ್ಟದ ಸಮಯ ಏನಕ್ಕೂ ಸಾಲುವುದಿಲ್ಲ. ಹೀಗಾಗಿ, ಸಿನಿಮಾದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗ ದೀಪಿಕಾ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.