AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಪ್ರಚಾರಕ್ಕೆ ಮದುವೆ ವಿಚಾರ ಎಳೆತಂದ ಪ್ರಭಾಸ್​? ಸ್ಟೇಟಸ್​ ಅರ್ಥ ಏನು?

ಪ್ರೇಕ್ಷಕರನ್ನು ಸೆಳೆಯಲು ಸಿನಿಮಾಗಳ ಪ್ರಚಾರಕ್ಕೆ ಸಾಕಷ್ಟು ತಲೆ ಕೆಡಿಸಿಕೊಳ್ಳಬೇಕು. ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಕೂಡ ವಿಶೇಷ ರೀತಿಯಲ್ಲಿ ಪ್ರಚಾರ ಮಾಡಲು ಸಜ್ಜಾಗಿದೆ. ಪ್ರಭಾಸ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡ ಸಾಲುಗಳನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅನೇಕರು ಇದು ಮದುವೆ ವಿಷಯ ಎಂದು ಊಹಿಸಿದ್ದಾರೆ. ಆದರೆ ಅದು ಸಿನಿಮಾದ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟ್​ ಎನ್ನಲಾಗಿದೆ.

ಸಿನಿಮಾ ಪ್ರಚಾರಕ್ಕೆ ಮದುವೆ ವಿಚಾರ ಎಳೆತಂದ ಪ್ರಭಾಸ್​? ಸ್ಟೇಟಸ್​ ಅರ್ಥ ಏನು?
ಪ್ರಭಾಸ್​
ಮದನ್​ ಕುಮಾರ್​
|

Updated on: May 17, 2024 | 7:23 PM

Share

ನಟ ಪ್ರಭಾಸ್​ ಅವರ ಮದುವೆ (Prabhas Marriage) ಬಗ್ಗೆ ಈಗ ಏಕಾಏಕಿ ಸುದ್ದಿ ಹಬ್ಬಿದೆ. ಅದಕ್ಕೆ ಕಾರಣ ಆಗಿರುವುದು ಅವರು ಹಾಕಿರುವ ಸೋಶಿಯಲ್​ ಮೀಡಿಯಾ ಸ್ಟೇಟಸ್​. ‘ಕಡೆಗೂ ವಿಶೇಷ ವ್ಯಕ್ತಿಯೊಬ್ಬರು ನಮ್ಮ ಜೀವನದಲ್ಲಿ ಪ್ರವೇಶಿಸುತ್ತಿದ್ದಾರೆ’ ಎಂದು ಪ್ರಭಾಸ್ (Prabhas) ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಎಲ್ಲರೂ ಇದು ಮದುವೆ ಸಮಾಚಾರ ಎಂದೇ ಊಹಿಸಿದ್ದಾರೆ. ಆದರೆ ಟಾಲಿವುಡ್​ ಮೂಲಗಳ ಪ್ರಕಾರ ಇದು ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಪ್ರಚಾರಕ್ಕಾಗಿ ಮಾಡಿದ ತಂತ್ರ. ಆ ಬಗ್ಗೆ ಶೀಘ್ರದಲ್ಲೇ ಅಸಲಿ ವಿಷಯ ಹೊರಬರಲಿದೆ.

ಪ್ರಭಾಸ್​ ಅವರ ವೃತ್ತಿ ಜೀವನದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ತುಂಬ ವಿಶೇಷವಾದದ್ದು. ಇದರಲ್ಲಿ ಸೈನ್ಸ್​ ಫಿಕ್ಷನ್​ ಕಥಾಹಂದರ ಇರಲಿದೆ. ನಾಗ್​ ಅಶ್ವಿನ್​ ಅವರು ಇದಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್​ ಜೊತೆ ಕಮಲ್​ ಹಾಸನ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ರಿಲೀಸ್​ ದಿನಾಂಕ ಹತ್ತಿರ ಆಗಿರುವ ಈ ಸಂದರ್ಭದಲ್ಲಿ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರಕ್ಕಾಗಿ ಒಂದು ವಿಶೇಷ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಅದನ್ನು ಸದ್ಯದಲ್ಲೇ ಪರಿಚಯಿಸಲು ಚಿತ್ರತಂಡ ಸಿದ್ಧವಾಗಿದೆ. ಆ ವಿಚಾರದ ಬಗ್ಗೆ ಜನರಿಗೆ ಕೌತುಕ ಮೂಡಿಸುವ ಸಲುವಾಗಿ ಪ್ರಭಾಸ್​ ಅವರು ಈ ರೀತಿ ಪೋಸ್ಟ್​ ಮಾಡಿದ್ದಾರೆ ಎನ್ನಲಾಗಿದೆ. ಇದು ಅವರ ಸಿನಿಮಾ ಕರಿಯರ್​ನಲ್ಲೇ ವಿಶೇಷ ರೀತಿಯ ಪ್ರಚಾರ ತಂತ್ರ ಆದ್ದರಿಂದ ‘ವಿಶೇಷವಾದ ವ್ಯಕ್ತಿ’ ಎಂದು ಅವರು ಹೇಳಿರಬಹುದು ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಕಣ್ಣಪ್ಪ’ ಶೂಟಿಂಗ್​ ಸೆಟ್​ಗೆ ಬಂದ ಪ್ರಭಾಸ್​; ಪೋಸ್ಟರ್​ ಮೂಲಕ ಗುಡ್​ ನ್ಯೂಸ್​

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ರಿಲೀಸ್​ ದಿನಾಂಕ ಮುಂದೂಡಲಾಯಿತು. ಜೂನ್​ 27ರಂದು ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕೂ ಮುನ್ನ ಪ್ರಚಾರಕ್ಕಾಗಿ ವಿವಿಧ ತಂತ್ರಗಳನ್ನು ಮಾಡಲಾಗುತ್ತಿದೆ. ‘ವೈಜಯಂತಿ ಮೂವೀಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದಿಂದ ಪ್ರಭಾಸ್​ ಅವರು ದೊಡ್ಡ ಗೆಲುವು ಪಡೆಯಬಹುದು ಎಂಬ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!