ಹಲವು ಗೆಟಪ್​ನಲ್ಲಿ ಬಂದ ಕಮಲ್ ಹಾಸನ್; ಗಮನ ಸೆಳೆಯಿತು ‘ಇಂಡಿಯನ್ 2’ ಟ್ರೇಲರ್

1996ರಲ್ಲಿ ಕಮಲ್ ಹಾಸನ್ ನಟನೆಯ ‘ಇಂಡಿಯನ್’ ಸಿನಿಮಾ ರಿಲೀಸ್ ಆಯಿತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ‘ಇಂಡಿಯನ್ 2’ ಚಿತ್ರ ಜುಲೈ 12ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಕಮಲ್ ಹಾಸನ್ ಹಲವು ಗೆಟಪ್​ನಲ್ಲಿ ಬಂದಿದ್ದಾರೆ.

ಹಲವು ಗೆಟಪ್​ನಲ್ಲಿ ಬಂದ ಕಮಲ್ ಹಾಸನ್; ಗಮನ ಸೆಳೆಯಿತು ‘ಇಂಡಿಯನ್ 2’ ಟ್ರೇಲರ್
ಕಮಲ್ ಹಾಸನ್

Updated on: Jun 26, 2024 | 6:58 AM

ಕಮಲ್ ಹಾಸನ್ (Kamal Haasan) ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಒಂದು ಹೊಸತನ ಇರುತ್ತದೆ. ಈಗ ಅವರು ‘ಇಂಡಿಯನ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಜುಲೈ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ ಎಂಬುದರ ಝಲಕ್ ಟ್ರೇಲರ್​ನಲ್ಲಿ ತೋರಿಸಲಾಗಿದೆ. ಕಮಲ್ ಹಾಸನ್ ಅವರು ಹಲವು ಗೆಟಪ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

‘ಇಂಡಿಯನ್’ ಸಿನಿಮಾ 1996ರಲ್ಲಿ ರಿಲೀಸ್ ಆಗಿತ್ತು. ಈಗ 28 ವರ್ಷಗಳ ಬಳಿಕ ಚಿತ್ರಕ್ಕೆ ಸೀಕ್ವೆಲ್ ರೆಡಿ ಆಗಿದೆ. ‘ಇಂಡಿಯನ್’ ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ ಸೇನಾಪತಿ  (ಕಮಲ್ ಹಾಸನ್) ಅವರು ಲಂಡನ್​ಗೆ ತೆರಳಿ ಅಲ್ಲಿಯೇ ಸೆಟಲ್ ಆಗೋ ರೀತಿಯಲ್ಲಿ ತೋರಿಸಲಾಗಿತ್ತು. ಈಗ ಭಾರತಕ್ಕೆ ಮರಳಿ ಇಲ್ಲಿರೋ ಭ್ರಷ್ಟಾಚಾರದ ವಿರುದ್ಧ ಹೋರಾಡುವ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಸಿನಿಮಾ ಹೊಂದಿದೆ. ಸೇನಾಪತಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಘೋಷಣೆ ಮಾಡುವುದರ ಜೊತೆಗೆ ಚಂದ್ರಬೋಸ್ ಅವರ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಘೋಷಣೆ ಮಾಡುತ್ತಾರೆ. ಕಮಲ್ ಹಾಸನ್ ಅವರು ಬೇರೆ ಬೇರೆ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.

ಕಮಲ್ ಹಾಸನ್ ಅವರು ಯಾವುದೇ ರೀತಿಯ ಪಾತ್ರ ಕೊಟ್ಟರೂ ಮಾಡಿ ತೋರಿಸುತ್ತಾರೆ. ಇದಕ್ಕೆ ‘ಇಂಡಿಯನ್ 2’ ಮತ್ತೊಂದು ಉದಾಹರಣೆ. ಈ ಚಿತ್ರದಲ್ಲಿ ಬಾಬಿ ಸಿಮ್ಹಾ, ಸಿದ್ದಾರ್ಥ್, ಪ್ರಿಯಾ, ಭವಾನಿ ಶಂಕರ್, ರಕುಲ್ ಪ್ರೀತ್ ಸಿಂಗ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ‘ನನಗೊಂದು ಕನಸಿದೆ’: ‘ಇಂಡಿಯನ್ 2’ ವೇದಿಕೆಯಲ್ಲಿ ಕಮಲ್ ಖಡಕ್ ಭಾಷಣ

‘ಇಂಡಿಯನ್’ ಚಿತ್ರವನ್ನು ಶಂಕರ್ ಅವರು ನಿರ್ದೇಶನ ಮಾಡಿದ್ದರು. ಈಗ ಎರಡನೇ ಪಾರ್ಟ್​​ಗೂ ಅವರೇ ಡೈರೆಕ್ಷನ್ ಮಾಡಿದ್ದಾರೆ. ಚಿತ್ರ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹ ಮೂಡಿದೆ. ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us