‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?

| Updated By: ಮದನ್​ ಕುಮಾರ್​

Updated on: Jun 04, 2022 | 12:08 PM

Vikram Movie Box Office Collection: ಮೊದಲ ದಿನವೇ ‘ವಿಕ್ರಮ್​’ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡಿದೆ. ಕಮಲ್​ ಹಾಸನ್​ ಅವರ ವೃತ್ತಿಜೀವನದಲ್ಲಿ ಇದು ಬೆಸ್ಟ್​ ಓಪನಿಂಗ್​ ಸಿನಿಮಾ ಆಗಿ ಹೊರಹೊಮ್ಮಿದೆ.

‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?
‘ವಿಕ್ರಮ್’ ಸಿನಿಮಾ ಪೋಸ್ಟರ್​​
Follow us on

ಅದ್ದೂರಿಯಾಗಿ ಮೂಡಿಬಂದಿರುವ ‘ವಿಕ್ರಮ್​’ ಸಿನಿಮಾಗೆ (Vikram Movie) ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜೂನ್​ 3ರಂದು ಬಿಡುಗಡೆ ಆಗಿರುವ ಈ ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕಮಲ್​ ಹಾಸನ್​ (Kamal Haasan) ಅಭಿಮಾನಿಗಳಿಗೆ ಈ ಚಿತ್ರ ಸಖತ್​ ಇಷ್ಟ ಆಗಿದೆ. ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಮುಂತಾದ ಘಟಾನುಘಟಿ ನಟರು ಕೂಡ ಅಭಿನಯಿಸಿರುವುದು ಈ ಸಿನಿಮಾದ ಪ್ಲಸ್​ ಪಾಯಿಂಟ್​. ಮೈನವಿರೇಳಿಸುವ ಸಾಹಸ ದೃಶ್ಯಗಳ ಮೂಲಕ ‘ವಿಕ್ರಮ್​’ ಸಿನಿಮಾ ಧೂಳೆಬ್ಬಿಸುತ್ತಿದೆ. ನಿರ್ದೇಶಕ ಲೋಕೇಶ್​ ಕನಗರಾಜ್​ ಅವರಿಗೆ ಈ ಚಿತ್ರದಿಂದ ಮತ್ತೊಂದು ಯಶಸ್ಸು ಸಿಕ್ಕಿದೆ. ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನವೇ ‘ವಿಕ್ರಮ್’ ಸಿನಿಮಾ ಮೋಡಿ ಮಾಡಿದೆ. ಕೇವಲ ತಮಿಳುನಾಡಿನಲ್ಲೇ ಈ ಚಿತ್ರ ಬರೋಬ್ಬರಿ 20.61 ಕೋಟಿ ರೂಪಾಯಿ ಕಮಾಯಿ (Vikram Movie Box Office Collection) ಮಾಡುವ ಮೂಲಕ ಗೆಲುವಿನ ನಗು ಬೀರಿದೆ. ವೀಕೆಂಡ್​ನಲ್ಲಿ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ.

ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಮಲ್​ ಹಾಸನ್​ ಅವರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯದ ಕೆಲಸಗಳ ಸಲುವಾಗಿ ನಟನೆಯಿಂದ ಬ್ರೇಕ್​ ಪಡೆದುಕೊಂಡಿದ್ದರು. ಹಾಗಾಗಿ ಅವರ ಪಾಲಿಗೆ ‘ವಿಕ್ರಮ್​’ ಕಮ್​ಬ್ಯಾಕ್​ ಸಿನಿಮಾ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಭರ್ಜರಿ ಕಮಾಯಿ ಮಾಡುವ ಮೂಲಕ ಕಮಲ್​ ಹಾಸನ್​ ಆರ್ಭಟಿಸುತ್ತಲೇ ಕಮ್​ಬ್ಯಾಕ್​ ಮಾಡಿದ್ದಾರೆ.

ಇದನ್ನೂ ಓದಿ
ಕಮಲ್ ಹಾಸನ್ ‘ವಿಕ್ರಮ್​’ಗೆ ಕರ್ನಾಟಕದಲ್ಲಿ ವಿರೋಧ, ಸಿನಿಮಾ ನಿಷೇಧಿಸಲು ಆಗ್ರಹ; ಚಿತ್ರತಂಡ ಮಾಡಿದ ತಪ್ಪೇನು?
Vikram Twitter Review: ಮುಂಜಾನೆಯೇ ‘ವಿಕ್ರಮ್​’ ಚಿತ್ರ ನೋಡಿ ‘ಮ್ಯಾಜಿಕ್​’ ಅಂತ ಹೊಗಳಿದ ಪ್ರೇಕ್ಷಕರು
Vikram Movie on Burj Khalifa: ಕಿಚ್ಚ ಸುದೀಪ್​ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್​ ಹಾಸನ್​; ಕನ್ನಡದ ಟ್ರೆಂಡ್​ ಫಾಲೋ ಮಾಡ್ತಿದೆ ‘ವಿಕ್ರಮ್​’ ಚಿತ್ರ
ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಚಿತ್ರಕ್ಕೆ 13 ಕಡೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; ಸಿಕ್ಕ ಪ್ರಮಾಣಪತ್ರ ಯಾವುದು?

ಇದನ್ನೂ ಓದಿ: ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ

ಈ ಚಿತ್ರದ ಕಲೆಕ್ಷನ್​ ಬಗ್ಗೆ ಟ್ರೇಡ್​ ಅನಲಿಸ್ಟ್​ ಮನೋಬಲ ವಿಜಯಬಾಲನ್ ಅವರು ಟ್ವೀಟ್​ ಮಾಡಿದ್ದಾರೆ. ಕಮಲ್​ ಹಾಸನ್​ ಅವರ ವೃತ್ತಿಜೀವನದಲ್ಲಿ ಇದು ಬೆಸ್ಟ್​ ಓಪನಿಂಗ್​ ಸಿನಿಮಾ ಎಂದು ಅವರು ಬಣ್ಣಿಸಿದ್ದಾರೆ. ಅಲ್ಲದೇ ಕೊರೊನಾ ಬಳಿಕ ತಮಿಳುನಾಡಿನಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ‘ವಿಕ್ರಮ್​’ ಸಿನಿಮಾ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 36.17 ಕೋಟಿ ರೂಪಾಯಿ ಗಳಿಸಿದ ‘ವಲಿಮೈ’ ಸಿನಿಮಾ ಮೊದಲ ಸ್ಥಾನದಲ್ಲಿದೆ. ‘ಅಣ್ಣಾಥೆ’ (34.92 ಕೋಟಿ), ಬೀಸ್ಟ್​ (26.4 ಕೋಟಿ) ಸಿನಿಮಾಗಳು ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

‘ವಿಕ್ರಮ್​’ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಾಗಿ ಬಾಯಿ ಮಾತಿನ ಪ್ರಚಾರದಿಂದ ಇಂದು (ಜೂನ್​ 4) ಹಾಗೂ ಭಾನುವಾರ (ಜೂನ್​ 5) ಚಿತ್ರದ ಕಲೆಕ್ಷನ್​ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಈ ಸಿನಿಮಾ ಕೂಡ 100 ಕೋಟಿ ರೂಪಾಯಿ ಕ್ಲಬ್​ ಸೇರಲಿದೆಯೇ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:45 am, Sat, 4 June 22