ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಲು ರೆಡಿ ಆದ ‘ವಿಕ್ರಮ್’ ಸಿನಿಮಾ

‘ವಿಕ್ರಮ್’ ಸಿನಿಮಾ ತಮಿಳುನಾಡಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮೊದಲ ಏಳು ದಿನಗಳಲ್ಲಿ ಈ ಚಿತ್ರ 77 ಕೋಟಿ ರೂಪಾಯಿ ಗಳಿಸಿತ್ತು. ಈ ವೀಕೆಂಡ್​ನಲ್ಲೂ ಸಿನಿಮಾವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ.

ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕಲು ರೆಡಿ ಆದ ‘ವಿಕ್ರಮ್’ ಸಿನಿಮಾ
ಯಶ್-ಕಮಲ್
Edited By:

Updated on: Jun 12, 2022 | 5:45 PM

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಬಾಕ್ಸ್ ಆಫೀಸ್​ನಲ್ಲಿ ಮೋಡಿ ಮಾಡುತ್ತಿದೆ. ಎರಡನೇ ವಾರವೂ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಹೀಗಾಗಿ, ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಇದೆ. ತಮಿಳುನಾಡಿನಲ್ಲಿ ಸದ್ಯ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿಲ್ಲ. ಇದು ‘ವಿಕ್ರಮ್’ ಚಿತ್ರಕ್ಕೆ ಪ್ಲಸ್ ಆಗಿದೆ. ಚಿತ್ರದ ಕಲೆಕ್ಷನ್ ಕೂಡ ಹೆಚ್ಚುತ್ತಿದೆ. ತಮಿಳುನಾಡು ಬಾಕ್ಸ್​ ಆಫೀಸ್​​ನಲ್ಲಿ ಈ ಸಿನಿಮಾ ಶೀಘ್ರವೇ ‘ಕೆಜಿಎಫ್ 2’ ಚಿತ್ರದ ಕಲೆಕ್ಷನ್ ಹಿಂದಿಕ್ಕಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸಿದ್ದಾರೆ.

‘ವಿಕ್ರಮ್’ ಸಿನಿಮಾ ತಮಿಳುನಾಡಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮೊದಲ ಏಳು ದಿನಗಳಲ್ಲಿ ಈ ಚಿತ್ರ 77 ಕೋಟಿ ರೂಪಾಯಿ ಗಳಿಸಿತ್ತು. ಈ ವೀಕೆಂಡ್​ನಲ್ಲೂ ಸಿನಿಮಾವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಶುಕ್ರವಾರ (ಜೂನ್ 10) 6.12 ಕೋಟಿ ರೂಪಾಯಿ ಹಾಗೂ ಶನಿವಾರ (ಜೂನ್​ 11) 7.80 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 90.97 ಕೋಟಿ ರೂಪಾಯಿ ಆಗಿದೆ. ಇಂದು (ಜೂನ್ 13) ಭಾನುವಾರ ಆದ್ದರಿಂದ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ.

ಇದನ್ನೂ ಓದಿ
Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

ಕನ್ನಡದ ‘ಕೆಜಿಎಫ್ 2’ ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಈ ಚಿತ್ರದ ಲೈಫ್​ಟೈಮ್ ಕಲೆಕ್ಷನ್ (ತಮಿಳುನಾಡು ಬಾಕ್ಸ್ ಆಫೀಸ್​) 109 ಕೋಟಿ ರೂಪಾಯಿ. ಹೀಗಾಗಿ, ಇನ್ನೂ ಕೆಲವೇ ದಿನಗಳಲ್ಲಿ ‘ವಿಕ್ರಮ್’ ಸಿನಿಮಾ ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಕಲೆಕ್ಷನ್​ ಹಿಂದಿಕ್ಕಲಿದೆ ಎಂದು ಊಹಿಸಲಾಗಿದೆ. ವಿಶ್ವ ಮಟ್ಟದಲ್ಲಿ ‘ವಿಕ್ರಮ್​’ ಸಿನಿಮಾ 250 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಸಾಗುತ್ತಿದೆ. ಈ ಚಿತ್ರ 231 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

‘ವಿಕ್ರಮ್​’ ಸಿನಿಮಾ ಮೂಲಕ ನಟ ಕಮಲ್ ಹಾಸನ್ ಒಂದೊಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ಈ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಅವರಿಗೆ ದುಡ್ಡು ಹರಿದು ಬರುತ್ತಿದೆ. ನಿರ್ದೇಶಕ ಲೋಕೇಶ್​ ಕನಗರಾಜ್​ಗೆ ಕಾರು ಹಾಗೂ ಸಹ ನಟ ಸೂರ್ಯಗೆ ದುಬಾರಿ ರೊಲೆಕ್ಸ್ ವಾಚ್ ಕೊಟ್ಟ ವಿಚಾರ ಇತ್ತೀಚೆಗೆ ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.