ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು ನಟಿ ಕಂಗನಾ ರಣಾವತ್. ಗ್ಯಾಂಗ್ಸ್ಟರ್ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ಚಿತ್ರರಂಗದಲ್ಲಿ 15 ವರ್ಷ ಕಳೆದಿದ್ದಾರೆ. ಈಗ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೇ ಮೊದಲ ಬಾರಿ ಕಂಗನಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಟೀಕು ವೆಡ್ಸ್ ಶೇರು ಹೆಸರಿನ ಸಿನಿಮಾವನ್ನು ಕಂಗನಾ ನಿರ್ಮಾಣ ಮಾಡುತ್ತಿದ್ದಾರೆ. ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಹೆಸರೇ ಹೇಳುವಂತೆ ಈ ಚಿತ್ರ ಪ್ರೀತಿಯ ಕಥೆ ಹೇಳಲಿದೆ. ಶನಿವಾರ (ಮೇ 1) ತಮ್ಮ ಪ್ರೊಡಕ್ಷನ್ ಹೌಸ್ ಲೋಗೋ ಅನಾವರಣ ಮಾಡಿದ್ದಾರೆ ಕಂಗನಾ. ಮಣಿಕರ್ಣಿಕಾ ಫಿಲ್ಮ್ಸ್ ಎಂದು ಇದಕ್ಕೆ ಹೆಸರಿಡಲಾಗಿದೆ.
Launching the logo of @ManikarnikaFP with the announcement of our debut in digital space with a quirky love story Tiku weds Sheru …. Need your blessings ? pic.twitter.com/ulaMK62m7l
— Kangana Ranaut (@KanganaTeam) May 1, 2021
ಕಂಗನಾ ರಣಾವತ್ ತುಂಬಾ ಕಷ್ಟದಿಂದ ಮೇಲೆ ಬಂದವರು. ಹೀಗಾಗಿ, ಹೊಸ ಪ್ರತಿಭೆಗಳಿಗೆ ಮಣೆ ಹಾಕಬೇಕು ಎನ್ನುವ ಆಲೋಚನೆ ಕಂಗನಾ ಅವರದ್ದು. ಅಲ್ಲದೆ, ಸಿನಿಮಾ ಕಥೆ ಕೂಡ ಬೇರೆಯದೇ ರೀತಿ ಇರಲಿದೆಯಂತೆ. ಅಂದಹಾಗೆ, ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಕಂಗನಾ ಮಣಿಕರ್ಣಿಕಾ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಅವರೇ ನಿರ್ದೇಶನ ಕೂಡ ಮಾಡಿದ್ದರು. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅದೇ ಹೆಸರನ್ನು ಅವರು ತಮ್ಮ ಪ್ರೊಡಕ್ಷನ್ ಹೌಸ್ಗೆ ಇಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ.
ಕೊರೊನಾ ವೈರಸ್ ಎರಡನೇ ಅಲೆಗೆ ಸಿನಿಮಾ ರಂಗ ಮತ್ತೆ ತೊಂದರೆಗೆ ಸಿಲುಕಿದೆ. ಕೆಲವೆಡೆ ಚಿತ್ರಮಂದಿರ ಮುಚ್ಚಲಾಗಿದೆ ಇದರಿಂದಾಗಿ ಅನೇಕ ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಿದೆ. ಈ ಸಾಲಿಗೆ ಕಂಗನಾ ರಣಾವತ್ ನಟನೆಯ ತಲೈವಿ ಸಿನಿಮಾ ಕೂಡ ಸೇರ್ಪಡೆ ಆಗಿತ್ತು. ಚಿತ್ರತಂಡದಿಂದ ಮುಂದಿನ ರಿಲೀಸ್ ದಿನಾಂಕ ಯಾವಾಗ ಎಂಬುದು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಕೊರೊನಾ ಪ್ರಕರಣಗಳು ಕಡಿಮೆ ಆದ ನಂತರದಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಶಾರುಖ್ ಖಾನ್ಗಿಂತ ನಾನು ಗ್ರೇಟ್ ಎಂದ ಕಂಗನಾ ರಣಾವತ್; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್