Bigg Boss Kannada Elimination: ಒಂಬತ್ತನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇನಾ?
ಈ ಬಾರಿ ನಾಮಿನೇಷನ್ ಲಿಸ್ಟ್ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ.
ಒಂಬತ್ತನೇ ವಾರ ಬಿಗ್ ಬಾಸ್ ಮನೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಯಿತು. ಘಟಾನುಘಟಿ ಎನಿಸಿಕೊಂಡ ಸ್ಪರ್ಧಿಗಳೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಹೀಗಾಗಿ ವೀಕ್ಷಕರಿಗೆ ಮತ ಹಾಕಲು ಕಡಿಮೆ ಸಮಯ ಸಿಕ್ಕಿದೆ. ಇದರಿಂದಲೂ ಈ ಬಾರಿಯ ಎಲಿಮಿನೇಷನ್ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ.
ಈ ಬಾರಿ ನಾಮಿನೇಷನ್ ಲಿಸ್ಟ್ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇವರಲ್ಲಿ ಮನೆಯಿಂದ ಹೊರ ಹೋಗೋದು ಯಾರು ಅನ್ನೋದು ಸದ್ಯದ ಪ್ರಶ್ನೆ.
ಈ ಬಾರಿಯ ನಾಮಿನೇಷನ್ನಲ್ಲಿ ಮಂಜುಗೆ ಹೆಚ್ಚು ವೋಟ್ ಬಿದ್ದಿದೆ. ಆದರೆ, ಅವರ ಟಿಆರ್ಪಿ ಕಡಿಮೆ ಆಗಿಲ್ಲ. ಹೀಗಾಗಿ, ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದು ಅನುಮಾನವೇ. ಅರವಿಂದ್ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ ಎನಿಸಿಕೊಂಡಿದ್ದಾರೆ. ಅವರು ಫೈನಲ್ ವರೆಗೂ ಇರುತ್ತಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಚಕ್ರವರ್ತಿ ಚಂದ್ರಚೂಡ್ ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ಅವರು ಸ್ಟ್ರಾಂಗ್ ಎಂದು ಗುರುತಿಸಿಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ಕಳೆದವಾರದ ಎಲಿಮಿನೆಷನ್ನಲ್ಲಿ ಜಸ್ಟ್ ಮಿಸ್ ಆಗಿದ್ದರು. ಈ ವಾರ ಅವರು ಬಚಾವ್ ಆಗಬಹುದು ಎನ್ನಲಾಗುತ್ತಿದೆ. ಈಗ ಉಳಿದಿದ್ದು, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್. ಇವರಲ್ಲಿ ಈ ವಾರ ಒಬ್ಬರು ಮನೆಯಿಂದ ಹೊರ ಹೋಗಬಹುದು ಎಂಬುದು ಪ್ರೇಕ್ಷಕರ ಅಭಿಪ್ರಾಯ. ಕೆಲವರು ಈ ವಾರ ಎಲಿಮಿನೇಷನ್ ಇಲ್ಲ ಎಂದು ಕೂಡ ಹೇಳುತ್ತಿದ್ದಾರೆ. ಇದಕ್ಕೆ ಇಂದು (ಮೇ 2) ರಾತ್ರಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯವರಿಗೆ ಬೇಡವಾದರಾ ಮಂಜು? ಎಲ್ಲರ ಅಸಲಿಮುಖ ಬಯಲು
ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ