‘ರಾಮನ ಹೆಸರು ಕೆಡಿಸಬೇಡಿ’; ‘ಆದಿಪುರುಷ್’ ತಂಡಕ್ಕೆ ಕಂಗನಾ ಪರೋಕ್ಷ ತಿರುಗೇಟು

ರಾಮ ಹಾಗೂ ಸೀತೆಯ ಫೋಟೋನ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ರಾಮನ ಹೆಸರನ್ನು ಕೆಡಿಸಬೇಡಿ ಎಂದು ಕೋರಿದ್ದಾರೆ.

‘ರಾಮನ ಹೆಸರು ಕೆಡಿಸಬೇಡಿ’; ‘ಆದಿಪುರುಷ್’ ತಂಡಕ್ಕೆ ಕಂಗನಾ ಪರೋಕ್ಷ ತಿರುಗೇಟು
ಪ್ರಭಾಸ್​-ಕಂಗನಾ
Follow us
ರಾಜೇಶ್ ದುಗ್ಗುಮನೆ
|

Updated on:Jun 17, 2023 | 1:51 PM

ಕಾಲ್ಪನಿಕ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದರೆ ಅಲ್ಲಿ ವಿವಾದಗಳು ಹುಟ್ಟಿಕೊಳ್ಳೋದು ಕಡಿಮೆ. ಅಲ್ಲಿಯೂ ತಪ್ಪುಗಳನ್ನು ಹುಡುಕಿ ಟೀಕೆ ಮಾಡುವವರು ಇದ್ದಾರೆ. ಆದರೆ, ರಾಮಾಯಣ-ಮಹಾಭಾರತದಂಥ ಮಹಾಗ್ರಂಥಗಳನ್ನು ಆಧರಿಸಿ ಸಿನಿಮಾ ಮಾಡುವಾಗ ಹೆಚ್ಚು ಎಚ್ಚರಿಕೆ ಬೇಕು. ಅಲ್ಲಿ ಮನಬಂದಂತೆ ದೃಶ್ಯಗಳನ್ನು ತೋರಿಸಲು ಆಯ್ಕೆ ಇರುವುದಿಲ್ಲ. ‘ಆದಿಪುರುಷ್’ (Adipurush Movie) ನಿರ್ದೇಶಕ ಓಂ ರಾವತ್ ಇದನ್ನು ಮರೆತಂತಿದೆ. ಅವರ ನಿರ್ದೇಶನದ ಬಗ್ಗೆ ಟೀಕೆ ವ್ಯಕ್ತವಾಗಿದೆ. ನಟಿ ಕಂಗನಾ ರಣಾವತ್ (Kangana Ranaut) ಕೂಡ ಪರೋಕ್ಷವಾಗಿ ಈ ಚಿತ್ರವನ್ನು ಟೀಕೆ ಮಾಡಿದ್ದಾರೆ. ಜೊತೆಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ನಟಿ ಕಂಗನಾ ರಣಾವತ್ ಅವರು ತುಂಬಾನೇ ವಿಚಿತ್ರ ಸ್ವಭಾವದವರು. ಅವರು ಬಾಲಿವುಡ್ ಮಾಫಿಯಾನ ತೆಗಳುತ್ತಿರುತ್ತಾರೆ. ಸ್ಟಾರ್ ಕಿಡ್​​ಗಳ ಬಗ್ಗೆ ಅವರಿಗೆ ಸಿಟ್ಟಿದೆ. ಅವರು ಒಳ್ಳೆಯ ಕೆಲಸ ಮಾಡಿದರೆ ಕಂಗನಾ ಹೊಗಳುತ್ತಾರೆ. ಆಪ್ತರು ಕೆಟ್ಟ ಕೆಲಸ ಮಾಡಿದರೆ ಅವರನ್ನು ಬೈಯ್ಯೋಕೆ ಕಂಗನಾ ಹಿಂಜರಿದವರಲ್ಲ. ಈಗ ಕಂಗನಾ ‘ಆದಿಪುರುಷ್’ ತಂಡವನ್ನು ಟೀಕಿಸಿದ್ದಾರೆ. ‘ರಾಮನ ಹೆಸರು ಹಾಳುಮಾಡಬೇಡಿ’ ಎಂದು ಕೋರಿದ್ದಾರೆ.

ರಾಮ ಹಾಗೂ ಸೀತೆಯ ಫೋಟೋನ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ‘ರಾಮ್ ಕ ನಾಮ್ ಬದ್ನಾಮ್ ನ ಕರೋ’ (ರಾಮನ ಹೆಸರನ್ನು ಕೆಡಿಸಬೇಡಿ) ಎಂದು ಸಾಂಗ್ ಹಾಕಿದ್ದಾರೆ. ಇದು ‘ಆದಿಪುರುಷ್’ ತಂಡಕ್ಕೆ ಹೇಳಿದ ಮಾತು ಎಂಬುದನ್ನು ಎಲ್ಲರೂ ಸುಲಭವಾಗಿ ಊಹಿಸಿದ್ದಾರೆ. ಕಂಗನಾ ಮಾತನನ್ನು ಅನೇಕರು ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಟೀಕೆ ಬಂದರೇನಂತೆ? ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆದ ತೆಗೆದ ‘ಆದಿಪುರುಷ್’ ಸಿನಿಮಾ

ನೆಗೆಟಿವ್ ವಿಮರ್ಶೆ ಪಡೆದ ಹೊರತಾಗಿಯೂ ‘ಆದಿಪುರುಷ್’ ಒಳ್ಳೆಯ ಗಳಿಕೆ ಮಾಡಿದೆ. ಮೊದಲ ದಿನ ಈ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವಾದ್ಯಂತ 150 ಕೋಟಿ ರೂಪಾಯಿ ಗಳಿಸಿದೆ. ‘ಆದಿಪುರುಷ್’ ಚಿತ್ರ ಇಂದು (ಜೂನ್17) ಹಾಗೂ ನಾಳೆ (ಜೂನ್ 18) ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:20 pm, Sat, 17 June 23

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ