
ನಮ್ಮ ನಟಿಯರು ಕನ್ನಡದ ಕಂಪು ಹರಡುತ್ತಾ ಪರಭಾಷೆಗೆ ಹೊಗುತ್ತಾರೆ ಎಂದರೆ ಕರ್ನಾಟಕದವರಿಗೆ ನಿಜಕ್ಕೂ ಹೆಮ್ಮೆ ಆಗುತ್ತದೆ. ನಮ್ಮ ನಾಡಿನ ಋಣ ಮರೆಯದೇ ಪರಭಾಷೆಗೆ ತೆರಳಿ ಅಲ್ಲಿ ತಾವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರೆ ಆ ನಟಿಯರ ಬಗ್ಗೆ ಹೆಮ್ಮೆ ವ್ಯಕ್ತವಾಗುತ್ತದೆ. ನಟಿ ರುಕ್ಮಿಣಿ ವಸಂತ್ (Rukmini Vasanth) ಕೂಡ ಎಲ್ಲ ಕಡೆಗಳಲ್ಲಿ ಕನ್ನಡದ ಕಂಪು ಹರಡುತ್ತಿದ್ದಾರೆ. ಹೀಗಿರುವಾಗಲೇ ನಟಿಗೆ ಟಾಲಿವುಡ್ನಿಂದ ಮತ್ತೊಂದು ಆಫರ್ ಬಂದಿದೆ ಎಂದು ವರದಿ ಆಗಿದೆ. ಅದೂ ಪ್ರಭಾಸ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ.
ಸಂದೀಪ್ ರೆಡ್ಡಿ ವಂಗ ಅವರು ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಈ ಮೊದಲು ದೀಪಿಕಾ ನಾಯಕಿ ಆಗಿ ಆಯ್ಕೆ ಆಗಿದ್ದರು. ಆದರೆ, ಕಾರಣಾಂತರಗಳಿಂದ ಅವರು ಚಿತ್ರದಿಂದ ಹೊರನಡೆದಿದ್ದಾರೆ. ಈಗ ನಿರ್ದೇಶಕರು ರುಕ್ಮಿಣಿ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ.
ರುಕ್ಮಿಣಿ ವಸಂತ್ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಿಯಾ ಹೆಸರಿನ ಪಾತ್ರ ಮಾಡಿ ಸಾಕಷ್ಟು ಮನ್ನಣೆ ಪಡೆದರು. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ. ಕಳೆದ ವರ್ಷ ಅವರ ಅಭಿನಯದ ತೆಲುಗಿನ ‘ಅಪ್ಪುಡೋ ಇಪ್ಪುಡೋ ಎಪ್ಪುಡೋ’ ಸಿನಿಮಾ ರಿಲೀಸ್ ಆಯಿತು. ಈ ಎಲ್ಲಾ ಕಾರಣದಿಂದ ತೆಲುಗಿನಲ್ಲೂ ರುಕ್ಮಿಣಿ ಪರಿಚಯ ಆಗಿದೆ. ಹೀಗಿರುವಾಗಲೇ ಪ್ರಭಾಸ್ ಚಿತ್ರದ ಆಫರ್ ಅವರ ಕೈ ಸೇರಿದೆ ಎನ್ನಲಾಗುತ್ತಿದೆ. ಇದರಿಂದ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎನ್ಟಿಆರ್31’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೂ ರುಕ್ಮಿಣಿ ವಸಂತ್ ನಾಯಕಿ ಎನ್ನಲಾಗಿದೆ. ರುಕ್ಮಿಣಿ ಅವರು ಶಿವರಾಜ್ಕುಮಾರ್, ರಕ್ಷಿತ್ ಶೆಟ್ಟಿ, ಗಣೇಶ್ ಮೊದಲಾದವರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:58 am, Fri, 23 May 25