ಕನ್ನಡದಲ್ಲಿ ಸಿದ್ಧವಾಗುತ್ತಿದೆ ‘ರಾವೆನ್’ ಸಿನಿಮಾ; ಕಾಗೆಯಿಂದ ಒಳ್ಳೆಯದಾಗೋ ಕಥೆ
‘ರಾವೆನ್’ ಎಂದರೆ ಕಾಗೆ ಎಂಬರ್ಥ ಇದೆ. ಈ ಚಿತ್ರದಲ್ಲಿ ಕಾಗೆಯೇ ಮುಖ್ಯಪಾತ್ರಧಾರಿ. ಕಾಗೆಯಿಂದ ಒಳ್ಳೆಯದಾಗುತ್ತಾ ಹೋಗುತ್ತದೆ. ಆ ರೀತಿಯಲ್ಲಿ ಕಥೆ ಸಾಗುತ್ತದೆ. ಸೆಪ್ಟೆಂಬರ್ 21ರಿಂದ ಶೂಟಿಂಗ್ ಆರಂಭವಾಗಲಿದೆ. ನಾಯಕನಾಗಿ ದಿಲೀಪ್ ಪೈ ನಟಿಸುತ್ತಿದ್ದಾರೆ.
ಕಾಗೆಯನ್ನು ಎಲ್ಲರೂ ಅಪಶಕುನ ಎಂದು ಕರೆಯುತ್ತಾರೆ. ಒಳ್ಳೆಯ ಕೆಲಸಕ್ಕೆ ಹೊರಟಾಗ ಕಾಗೆ ಕಂಡರೆ ಕೆಲಸ ಆಗುವುದಿಲ್ಲ ಎನ್ನುವುದು ಅನೇಕರ ನಂಬಿಕೆ. ಇನ್ನು, ಕಾಗೆ (Crow) ಮುಟ್ಟಿದರೆ ಸ್ನಾನ ಮಾಡುವವರೂ ಅನೇಕರಿದ್ದಾರೆ. ಆದರೆ, ಕಾಗೆಯಿಂದ ಎಲ್ಲವೂ ಒಳ್ಳೆಯದೇ ಆದರೆ? ಹೀಗೊಂದು ಕಥೆಯ ಎಳೆ ಇಟ್ಟುಕೊಂಡು ‘ರಾವೆನ್’ (Raven Movie) ಹೆಸರಿನ ಸಿನಿಮಾ ಸಿದ್ಧಗೊಳ್ಳುತ್ತಿದೆ. ವಿಶ್ವ ಪ್ರೊಡಕ್ಷನ್ಸ್ ಹಾಗೂ ಆತ್ಮ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ.
ಪ್ರಬಿಕ್ ಮೊಗವೀರ್ ಹಾಗೂ ವಿಶ್ವನಾಥ್ ಜಿ.ಪಿ ‘ರಾವೆನ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವೇದ್ ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಗೋಪಾಲಯ್ಯ ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ದೇಶಕ ಎಂ.ಡಿ. ಶ್ರೀಧರ್ ಮೊದಲಾದವರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.
‘ರಾವೆನ್’ ಎಂದರೆ ಕಾಗೆ ಎಂಬರ್ಥ ಇದೆ. ಈ ಚಿತ್ರದಲ್ಲಿ ಕಾಗೆಯೇ ಮುಖ್ಯಪಾತ್ರಧಾರಿ. ಕಾಗೆಯಿಂದ ಒಳ್ಳೆಯದಾಗುತ್ತಾ ಹೋಗುತ್ತದೆ. ಆ ರೀತಿಯಲ್ಲಿ ಕಥೆ ಸಾಗುತ್ತದೆ. ಸೆಪ್ಟೆಂಬರ್ 21ರಿಂದ ಶೂಟಿಂಗ್ ಆರಂಭವಾಗಲಿದೆ. ನಾಯಕನಾಗಿ ದಿಲೀಪ್ ಪೈ ನಟಿಸುತ್ತಿದ್ದಾರೆ. ಕುಂಕುಮ, ಸ್ವಪ್ನ ಶೆಟ್ಟಿಗಾರ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಶ್ರೇಯಾ ಆರಾಧ್ಯ, ಲೀಲಾ ಮೋಹನ್ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ಕ್ರಿಸ್ಟಫರ್ ಸಂಗೀತ ಸಂಯೋಜನೆ, ಆರ್ಸಿಟಿ ಛಾಯಾಗ್ರಹಣ ಇದೆ. ವೇದ್ ಅವರು ಈ ಮೊದಲು ಎಂ.ಡಿ.ಶ್ರೀಧರ್ ಮೊದಲಾದವರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದರು. ಇದು ಅವರ ನಿರ್ದೇಶನದ ಎರಡನೇ ಸಿನಿಮಾ.
ಇದನ್ನೂ ಓದಿ: ‘ಶಿವಾಜಿ’ ಸ್ಟೈಲ್ನಲ್ಲಿ ರಜನಿಕಾಂತ್ನ ಸ್ವಾಗತಿಸಿದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ
ವಿಶ್ವನಾಥ್ ಅವರಿಗೆ ವೇದ್ ಹೇಳಿದ ಕಥೆ ಇಷ್ಟವಾಯಿತು. ಹೀಗಾಗಿ ನಿರ್ಮಾಣಕ್ಕೆ ಮುಂದೆ ಬಂದರು. ಪ್ರಬಿಕ್ ಮೊಗವೀರ್ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಪ್ರಬಿಕ್ ಅವರು ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ