ಪುನೀತ್ ರಾಜ್ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಮಲಯಾಳಂ ಚಿತ್ರರಂಗ
Puneeth Rajkumar ಕರುಣಾಮಯಿ ಮತ್ತು ಸಜ್ಜನ ನಟರಲ್ಲಿ ಒಬ್ಬರು. ಈ ಭರಿಸಲಾಗದ ನಷ್ಟವನ್ನು ಭರಿಸುವ ಶಕ್ತಿಯನ್ನು ಪುನೀತ್ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಅವರ ಅಭಿಮಾನಿಗಳ ಸಾಗರಕ್ಕೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದುಲ್ಖರ್ ಸಲ್ಮಾನ್ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನ ಸುದ್ದಿ ತಿಳಿಯುತ್ತಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ನಟರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಯುವ ನಟ ಟೊವಿನೊ ಥಾಮಸ್ Gone Soon brother ಎಂದು ಟ್ವೀಟ್ ಮಾಡಿದ್ದಾರೆ.
Gone too soon brother ? Rest in peace! #PuneethRajkumar pic.twitter.com/ZSwOoUcWYZ
— Tovino Thomas (@ttovino) October 29, 2021
ಪೃಥ್ವಿರಾಜ್ ಸುಕುಮಾರನ್ ಫೇಸ್ಬುಕ್ನಲ್ಲಿ ಇದು ತುಂಬಾ ನೋವುಂಟುಮಾಡುತ್ತದೆ. ರೆಸ್ಟ್ ಇನ್ ಪೀಸ್ ಸೂಪರ್ ಸ್ಟಾರ್ ಕುಟುಂಬ, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಬರೆದಿದ್ದಾರೆ.
ಕರುಣಾಮಯಿ ಮತ್ತು ಸಜ್ಜನ ನಟರಲ್ಲಿ ಒಬ್ಬರು. ಈ ಭರಿಸಲಾಗದ ನಷ್ಟವನ್ನು ಭರಿಸುವ ಶಕ್ತಿಯನ್ನು ಪುನೀತ್ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಅವರ ಅಭಿಮಾನಿಗಳ ಸಾಗರಕ್ಕೆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದುಲ್ಖರ್ ಸಲ್ಮಾನ್ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಪುನೀತ್ ಜತೆಗಿನ ಫೋಟೋ ಶೇರ್ ಮಾಡಿದ ಪಾರ್ವತಿ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೋವುಂಟುಮಾಡುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: Puneeth Rajkumar Eye Donation: ಅಪ್ಪನ ಹಾದಿಯಲ್ಲೇ ಸಾಗಿದ ಯುವ ನಟ ಪುನೀತ್ ರಾಜ್ ಕುಮಾರ್ರಿಂದ ನೇತ್ರ ದಾನ
ಇದನ್ನೂ ಓದಿ: Puneeth Rajkumar: ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ
Published On - 3:17 pm, Fri, 29 October 21